/newsfirstlive-kannada/media/post_attachments/wp-content/uploads/2025/06/Shardhul.jpg)
ಮೊದಲ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತಿದ್ದಾಗಿದೆ. 2ನೇ ಟೆಸ್ಟ್ ಪಂದ್ಯಕ್ಕಾಗಿ ಬರ್ಮಿಂಗ್ಹ್ಯಾಮ್ಗೆ ತೆರಳಿದ್ದಾಗಿದೆ. ಮೊದಲ ಟೆಸ್ಟ್ ಸೋಲಿನ ಬೇಸರದಲ್ಲಿರುವ ಟೀಮ್ ಇಂಡಿಯಾ, 2ನೇ ಟೆಸ್ಟ್ನಲ್ಲಿ ಭಾರೀ ಬದಲಾವಣೆ ಮುಂದಾಗಿದೆ. 2ನೇ ಟೆಸ್ಟ್ ಪಂದ್ಯದಲ್ಲಿ ಏನೆಲ್ಲಾ ಪ್ರಯೋಗ ನಡೀಬೋದು? ಯಾರೆಲ್ಲಾ ಬೆಂಚ್ ಕಾಯಬಹುದು? ಅನ್ನೋ ವಿವರ ಇಲ್ಲಿದೆ.
ಹೆಡಿಂಗ್ಲಿಯಲ್ಲಿ ಹೀನಾಯವಾಗಿ ಸೋತಿರುವ ಟೀಮ್ ಇಂಡಿಯಾ, ಈಗ ಬರ್ಮಿಂಗ್ಹ್ಯಾಮ್ನಲ್ಲಿ ಬೀಡು ಬಿಟ್ಟಿದೆ. ಲೀಡ್ಸ್ನಲ್ಲಿ ಲೀಡ್ ಪಡೆದ ಹೊರತಾಗಿಯೂ ತೀವ್ರ ಮುಖಭಂಗಕ್ಕೀಡದ ಟೀಮ್ ಇಂಡಿಯಾ, ಸೋಲಿನ ಚಿಂತನ ಮಂಥನ ನಡೆಸ್ತಿದೆ. ಎಡ್ಜ್ ಬಾಸ್ಟನ್ನಲ್ಲಿ ಬ್ಲಾಕ್ ಬಾಸ್ಟರ್ ಕಮ್ಬ್ಯಾಕ್ ಮಾಡುವ ಲೆಕ್ಕಾಚಾರಲ್ಲಿದೆ. ಇದಕ್ಕಾಗಿ ತೆರೆಮರೆಯಲ್ಲೇ ಯೋಜನೆ ರೂಪಿಸ್ತಿರುವ ಟೀಮ್ ಮ್ಯಾನೇಜ್ಮೆಂಟ್, 2ನೇ ಟೆಸ್ಟ್ ಗೆಲುವಿಗಾಗಿ ಕೆಲ ಬದಲಾವಣೆಗೆ ಕೈಹಾಕಬೇಕಾದ ಅನಿವಾರ್ಯತೆ ಇದ್ದೇ ಇದೆ.
ಸಾಯಿ ಸುದರ್ಶನ್ ಬದಲಿಗೆ ಈಶ್ವರನ್ಗೆ ಸಿಗುತ್ತಾ ಚಾನ್ಸ್?
ಸಾಯಿ ಸುದರ್ಶನ್, ಟ್ಯಾಲೆಂಟೆಡ್ ಕ್ರಿಕೆಟರ್ ಅನ್ನೋದ್ರಲ್ಲಿ ನೋ ಡೌಟ್. ತಮಿಳುನಾಡು ಬ್ಯಾಟರ್ಗಿಂತ ಅನುಭವಿ ಅಭಿಮನ್ಯು ಈಶ್ವರನ್, ಅತ್ಯುತ್ತಮ ಆಯ್ಕೆ.
ಇದನ್ನೂ ಓದಿ: ಪೊಲೀಸರ ಮುಂದೆ ಮಹತ್ವದ ಹೇಳಿಕೆ ಕೊಟ್ಟ ಸಂತ್ರಸ್ತೆ.. ಯಶ್ ದಯಾಳ್ ವಿರುದ್ಧ ಮಾಡಿದ ಆರೋಪ ಏನು..?
ಅಭಿಮನ್ಯು ಈಶ್ವರನ್ ಯಾಕೆ..?
ಜಸ್ಟ್ ಅನುಭವಿ ಮಾತ್ರವಲ್ಲ. ಟೆಸ್ಟ್ ಕ್ರಿಕೆಟ್‌ನ ಸ್ಪೆಷಲಿಸ್ಟ್. ಇಂಗ್ಲೆಂಡ್ ಟೂರ್ಗೂ ಮುನ್ನ ಭಾರತ ಎ ಪರ ಆಡಿರುವ ಅಭಿಮನ್ಯು, ಕ್ರಮವಾಗಿ 68, 80 ರನ್ ಗಳಿಸಿದ್ದಾರೆ. ಕಂಡೀಷನ್ಸ್ಗೂ ಹೊಂದಿಕೊಂಡಿದ್ದಾರೆ. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 48ರ ಬ್ಯಾಟಿಂಗ್ ಅವರೇಜ್ನಲ್ಲಿ 7841 ರನ್ ಗಳಿಸಿದ್ದಾರೆ. ಹೀಗಾಗಿ ಸಾಯಿ ಸುದರ್ಶನ್ ಬದಲಿಗೆ ಅಭಿಮನ್ಯುಗೆ ಚಾನ್ಸ್ ನೀಡಿದ್ರೆ, ಟೀಮ್ ಇಂಡಿಯಾಗೂ ಅನುಕೂಲ.
ಕರುಣ್ ನಾಯರ್ ಸ್ಥಾನದಲ್ಲಿ ಧ್ರುವ್ ಜುರೆಲ್ ಬೆಸ್ಟ್ ಯಾಕೆ?
ಕರುಣ್ ನಾಯರ್. ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್. 7 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ ಕರುಣ್, ಮೊದಲ ಅಗ್ನಿಪರೀಕ್ಷೆಯಲ್ಲೇ ಫೇಲ್ಯೂರ್ ಆಗಿದ್ದಾರೆ. ಕರುಣ್ ಬದಲಿಗೆ 6ನೇ ಕ್ರಮಾಂಕದಲ್ಲಿ ಧ್ರುವ್ ಜುರೆಲ್ಗೆ ಚಾನ್ಸ್ ನೀಡುವುದು ಬೆಸ್ಟ್..
ಕರುಣ್ಗಿಂತ ಜುರೆಲ್ ಬೆಸ್ಟ್.!
ಜುರೇಲ್ಗೆ 6ನೇ ಕ್ರಮಾಂಕದಲ್ಲಿ ಆಡಿದ ಅನುಭವ ಕನ್ನಡಿಗ ಕರುಣ್ಗೆ ಇಲ್ಲ. ಇಂಗ್ಲೆಂಡ್ ಲಯನ್ಸ್ ಎದುರು ಕ್ರಮವಾಗಿ 94, 53, 52 ಹಾಗೂ 28 ರನ್ ಗಳಿಸಿರುವ ಜುರೇಲ್, ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರವೇ 6, 7, 8ನೇ ಕ್ರಮಾಂಕದಲ್ಲಿ ಆಡಿದ್ದಾರೆ. ಯಶಸ್ಸು ಕೂಡ ಕಂಡಿದ್ದಾರೆ. ಹೀಗಾಗಿ ಕರುಣ್ ಬದಲಿಗೆ 6ನೇ ಕ್ರಮಾಂಕದಲ್ಲಿ ಜುರೇಲ್ಗೆ ಚಾನ್ಸ್ ನೀಡಿದ್ರೆ ಬೆಸ್ಟ್.
ಶಾರ್ದೂಲ್ ಸ್ಥಾನಕ್ಕೆ ಗೇಮ್ ಚೇಂಜರ್ ನಿತಿಶ್ ರೆಡ್ಡಿ
ಶಾರ್ದೂಲ್ ಬದಲಿಗೆ ಹೆಡಿಂಗ್ಲಿಯಲ್ಲಿ ನಿತಿಶ್ ರೆಡ್ಡಿಯನ್ನೇ ಮುಂದುವರಿಸಿದ್ರೆ. ಟೀಮ್ ಇಂಡಿಯಾಗೆ ಪಾಸಿಟಿವ್ ರಿಸಲ್ಟ್ ಬರ್ತಿತ್ತೇನೋ.. ಯಾಕಂದ್ರೆ, ಕೋಚ್ ಗಂಭೀರ್ ಹೇಳಿದಂತೆ ಶಾರ್ದೂಲ್, ಬೌಲಿಂಗ್ ಆಲ್ರೌಂಡರ್ ಅಲ್ಲ. ಹೀಗಾಗಿ ಶಾರ್ದೂಲ್ ಠಾಕೂರ್ಗಿಂತ ಬ್ಯಾಟಿಂಗ್ನಲ್ಲಿ ನಿತಿಶ್ ಕುಮಾರ್ ರೆಡ್ಡಿಗೆ ಚಾಯ್ಸ್ ಆಗಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಆಸ್ಟ್ರೇಲಿಯಾ ಪ್ರವಾಸ.
ಇದನ್ನೂ ಓದಿ: RCB ಬೌಲರ್ ಯಶ್ ದಯಾಳ್ ಅರೆಸ್ಟ್ ಆಗ್ತಾರಾ, ಎಫ್ಐಆರ್ನಲ್ಲಿ ಏನಿದೆ..? ಸಿಎಂ ಕಚೇರಿಯಿಂದ ತನಿಖೆಗೆ ಆದೇಶ!
ನಿತಿಶ್ ರೆಡ್ಡಿಯಿಂದ ಏನು ಲಾಭ..?
ಈ ಪ್ರವಾಸದಲ್ಲಿ 7ನೇ ಕ್ರಮಾಂಕದಲ್ಲಿ 89 ರನ್ ಗಳಿಸಿದ್ದ ನಿತಿಶ್, 8ನೇ ಕ್ರಮಾಂಕದಲ್ಲಿ 1 ಶತಕ ಒಳಗೊಂಡ 209 ರನ್ ಗಳಿಸಿದ್ರು. ಬೌಲಿಂಗ್ ಸಹ ಮಾಡಬಲ್ಲ ನಿತಿಶ್, ಪರಿಸ್ಥಿತಿಗೆ ತಕ್ಕಂತೆ ಗೇಮ್ ಚೇಂಜ್ ಮಾಡಬಲ್ಲರು. ಎಡ್ಜ್ ಬಾಸ್ಟನ್ ಟೆಸ್ಟ್ನಲ್ಲಿ ಆಡುವ ಚಾನ್ಸ್ ದಟ್ಟವಾಗಿದೆ.
ಸಿರಾಜ್, ಪ್ರಸಿದ್ಧ್ ಯಾರಿಗೆ ಕೊಕ್? ಯಾರಿಗೆ ಚಾನ್ಸ್?
ಬೂಮ್ರಾ ಆಡ್ತಾರೋ ಇಲ್ವೋ ಗೊತ್ತಿಲ್ಲ. ಬೂಮ್ರಾ ಆಡಿದ್ರೆ ಸಿರಾಜ್ ಅಥವಾ ಪ್ರಸಿದ್ಧ್ ಇಬ್ಬರಲ್ಲಿ ಒಬ್ಬರಿಗೆ ಬೆಂಚ್ ಫಿಕ್ಸ್. ಒಬ್ಬರು ಬೆಂಚ್ ಬಿಸಿ ಮಾಡಿದ್ರೆ, ಅರ್ಷದೀಪ್ ಸಿಂಗ್ಗೆ ಚಾನ್ಸ್ ನೀಡಬೇಕು. ಇದಕ್ಕೆ ಕಾರಣ ತಂಡದಲ್ಲಿ ಮೂವರು ರೈಟ್ ಹ್ಯಾಂಡ್ ಪೇಸರ್ಸ್.. ಹೀಗಾಗಿ ಲೆಫ್ಟಿ ಪೇಸರ್ ಅರ್ಷದೀಪ್ ಸಿಂಗ್ಗೆ ಚಾನ್ಸ್ ನೀಡಿದ್ರೆ. ಯುನಿಕ್ ಆ್ಯಂಗಲ್ ಕ್ರಿಯೇಟ್ ಆಗುತ್ತೆ. ಎರಡು ಕಡೆ ಸ್ವಿಂಗ್ ಮಾಡೋ ಕಾರಣಕ್ಕೆ ಎಡಗೈ ಬ್ಯಾಟರ್ಗಳ ಮೇಲೆ ಒತ್ತಡವೂ ಹೇರಬಹುದು. ಇದು ಎದುರಾಳಿ ತಂಡದ ಮೇಲೆ ಮೇಲುಗೈ ಸಾಧಿಸಲು ನೆರವಾಗೋದ್ರಲ್ಲಿ ಡೌಟೇ ಇಲ್ಲ.
ಇದನ್ನೂ ಓದಿ: ಆಂಗ್ಲರಿಗೆ ನಡುಕ ಹುಟ್ಟಿಸಿದ ರಿಷಭ್ ಪಂತ್.. ವಿಕೆಟ್ ಕೀಪರ್ ಕೌಂಟರ್ ಅಟ್ಯಾಕ್ ಹೇಗಿರುತ್ತೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ