Advertisment

ಇಂಗ್ಲೆಂಡ್​ಗೆ ಆರಂಭಿಕ ಆಘಾತ ಕೊಟ್ಟ ಭಾರತೀಯ ಬೌಲರ್ಸ್​; ರನ್ ಗಳಿಸಲು ಆಂಗ್ಲರ ಪರದಾಟ

author-image
Gopal Kulkarni
Updated On
ಕುಲ್ದೀಪ್, ಸುಂದರ್, ಪಂತ್ OUT ! ಚಕ್ರವರ್ತಿ, ಅರ್ಷದೀಪ್ ಇನ್! ಪ್ಲೇಯಿಂಗ್-11 ಹೇಗಿರುತ್ತೆ..?
Advertisment
  • ಇಂಗ್ಲೆಂಡ್​ ಆರಂಭಿಕ ಆಘಾತ ನೀಡಿದ ಭಾರತೀಯ ಬೌಲರ್​ಗಳು
  • 8 ಓವರ್​​ನಲ್ಲಿ 76 ರನ್​​ಗೆ ಮೂರು ವಿಕೆಟ್, ಸಂಕಷ್ಟದಲ್ಲಿ ಇಂಗ್ಲೆಂಡ್
  • ವಿಕೆಟ್ ಉರುಳುತ್ತಿದ್ದರೂ ಜೋಸ್ ಬಟ್ಲರ್​ರಿಂದ ಭರ್ಜರಿ ಬ್ಯಾಟಿಂಗ್

ಚೆನ್ನೈನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡಿದೆ. ಆರಂಭಿಕ 7 ಓವರ್​ಗಳಲ್ಲಿಯೇ ಮೂರು ಪ್ರಮುಖ ವಿಕೆಟ್ ಕಿತ್ತು ಇಂಗ್ಲೆಂಡ್​ಗೆ ಶಾಕ್​ ನೀಡಿದೆ. 8 ಓವರ್​ಗೆ 67 ರನ್​ ಗಳಿಸಿ ಮೂರು ವಿಕೆಟ್ ಕಳೆದುಕೊಂಡ ಇಂಗ್ಲೆಂಡ್​ ಹೀನಾಯ ಸ್ಥಿತಿಯಲ್ಲಿದೆ

Advertisment

ಆರಂಭಿಕ ಆಟಗಾರ ಪಿಲಿಪ್ಸ್ ಸಾಲ್ಟ್​ರನ್ನ ಅರ್ಶದೀಪ್​ ಸಿಂಗ್​ ಕೇವಲ ನಾಲ್ಕು ರನ್ ಗಳಿಸುವಷ್ಟರಲ್ಲಿ ಪೆವಲಿನ್​ಗೆ ಅಟ್ಟಿದ್ದಾರೆ. ವಾಷಿಂಗ್ಟನ್ ಸುಂದರ್​ಗೆ ಕ್ಯಾಚಿಟ್ಟು ಸಾಲ್ಟ್​ ಪೆವಲಿನ್ ಸೇರಿದರು. ಇನ್ನು ಬೆನ್ ಡೆಕೆಟ್ ಕೂಡ ಸ್ಕ್ರೀಜ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ 3 ರನ್ ಗಳಿಸುವಷ್ಟರಲ್ಲಿ ವಾಷಿಂಗ್ಟನ್ ಸುಂದರ್ ಬೌಲಿಂಗ್​ಗೆ ಜುರೇಲ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಅವರ ಹಿಂದೆಯೇ ಬಂದ ಹ್ಯಾರಿ ಬ್ರೂಕ್ ಕೂಡ 13 ರನ್ ಗಳಿಸಿದಾಗ ವರುಣ್ ಚಕ್ರವರ್ತಿ ಬೌಲ್​ಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ಪೆವೆಲಿನ್ ಸೇರಿಕೊಂಡರು.

ಇದನ್ನೂ ಓದಿ: ಭಾರತ V/s ಇಂಗ್ಲೆಂಡ್ ಎರಡನೇ ಟಿ20 ಪಂದ್ಯ; ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾ

ಸದ್ಯ ಸ್ಕ್ರೀಜ್ ಕಾಯ್ದುಕೊಂಡಿರುವ ಜೋಸ್ ಬಟ್ಲರ್ ಅದ್ಭುತ ಬ್ಯಾಟಿಂಗ್​ ನಡೆಸುತ್ತಿದ್ದಾರೆ. ಒಂದು ಕಡೆ ವಿಕೆಟ್ ಉರುಳುತ್ತಿದ್ದರು. ಮತ್ತೊಂದು ಕಡೆ ಗಟ್ಟಿಯಾಗಿ ನಿಂತಿರುವ ಬಟ್ಲರ್ 29 ಬೌಲ್​ಗಳಿಗೆ 45 ರನ್​ಗಳನ್ನು ಗಳಿಸಿದ್ದು 2 ಫೋರ್ ಹಾಗೂ 3 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ. ಬಟ್ಲರ್​ಗೆ ಸದ್ಯ ಲಿವಿಂಗ್​ಸ್ಟೋನ್ ಸಾಥ್ ನೀಡುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment