/newsfirstlive-kannada/media/post_attachments/wp-content/uploads/2025/07/Rishab-Pant-1.jpg)
ಮ್ಯಾಂಚೆಸ್ಟರ್​​ ಟೆಸ್ಟ್​ನ 2ನೇ ದಿನದಾಟದಲ್ಲಿ ಇಂಗ್ಲೆಂಡ್​ ತಂಡ ಮೆರೆದಾಡಿತು. ಮೊದಲು ಬೌಲಿಂಗ್, ಬಳಿಕ ಬ್ಯಾಟಿಂಗ್​ನಲ್ಲಿ ಆಂಗ್ಲ ಪಡೆ ದರ್ಬಾರ್​ ನಡೆಸಿತು. ಇದ್ರ ನಡುವೆ ಟೀಮ್​ ಇಂಡಿಯಾ ಬ್ಯಾಟರ್​ ರಿಷಭ್​ ಪಂತ್​ ಛಲ ಬಿಡದೇ ಹೋರಾಟ ನಡೆಸಿದ್ರು.
4 ವಿಕೆಟ್​ ನಷ್ಟಕ್ಕೆ 264 ರನ್​ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ಟೀಮ್​ ಇಂಡಿಯಾ 2 ರನ್​​ ಗಳಿಸುವಷ್ಟರಲ್ಲೇ ವಿಕೆಟ್​ ಕಳೆದುಕೊಳ್ತು. ರವೀಂದ್ರ ಜಡೇಜಾ 20 ರನ್​ಗಳಿಸಿ ಔಟಾದ್ರು. ಬಳಿಕ ಜೊತೆಯಾದ ಶಾರ್ದೂಲ್​ ಠಾಕೂರ್​, ವಾಷಿಂಗ್ಟನ್​ ಸುಂದರ್​​ ಇಂಗ್ಲೆಂಡ್​​ ಬೌಲರ್​​ಗಳ ತಾಳ್ಮೆ ಪರೀಕ್ಷೆ ಮಾಡಿದ್ರು. 7 ವಿಕೆಟ್​ಗೆ 101 ಎಸೆತ ಎದುರಿಸಿ 48 ರನ್​ಗಳ ಜೊತೆಯಾಟವಾಡಿದ್ರು.
ಫ್ಯಾನ್ಸ್​ಗೆ ಸರ್​​​ಪ್ರೈಸ್​​ ಕೊಟ್ಟ ರಿಷಭ್​ ಪಂತ್​
ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ ಶಾರ್ದೂಲ್​ ಠಾಕೂರ್​​ 41 ರನ್​ಗಳಿಸಿ ಔಟಾದ್ರು. ಶಾರ್ದೂಲ್​ ನಿರ್ಗಮನದ ಬೆನ್ನಲ್ಲೇ ಎಲ್ಲರಿಗೂ ಸರ್​​ಪ್ರೈಸ್​ ಎದುರಾಯ್ತು. ಗಾಯಗೊಂಡು ಅದಾಗಲೇ ಸರಣಿಯಿಂದ ಹೊರಬಿದ್ದ ರಿಷಭ್​ ಪಂತ್​ ಪ್ಯಾಡ್​ ಕಟ್ಟಿ ಬ್ಯಾಟಿಂಗ್​ಗೆ ಬಂದ್ರು. ನೋವಿನ ನಡುವೆ ಪಂತ್​ ಬ್ಯಾಟಿಂಗ್​ಗೆ ಬಂದದ್ದು ನೋಡಿ ಫ್ಯಾನ್ಸ್​​ ಶಾಕ್​ ಆದ್ರು.
ವಾಷಿಂಗ್ಟನ್​ ಸುಂದರ್​​-ರಿಷಭ್​ ಪಂತ್​ ಟೀಮ್​ ಇಂಡಿಯಾ ನಿಧಾನವಾಗಿ ಪಾರ್ಟನರ್​​ಶಿಪ್​ ಬ್ಯುಲ್ಡ್​ ಮಾಡೋ ಯತ್ನದಲ್ಲಿದ್ದಾಗಲೇ ವರುಣನ ಎಂಟ್ರಿಯಾಯ್ತು. ಪರಿಣಾಮ ನಿಗಧಿತ ಸಮಯಕ್ಕೂ ಮುನ್ನ ಮೊದಲ ಸೆಷನ್​ ಅಂತ್ಯಗೊಳಿಸಲಾಯ್ತು. ಸೆಷನ್​ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 321 ರನ್​ಗಳಿಸಿತು.
ಹಾಫ್​ ಸೆಂಚುರಿ ಸಿಡಿಸಿದ ರಿಷಭ್​ ಪಂತ್​.!
2ನೇ ಸೆಷನ್​ ಆರಂಭದಲ್ಲೇ ಟೀಮ್​ ಇಂಡಿಯಾ ವಿಕೆಟ್​ ಕಳೆದುಕೊಳ್ತು. ಸುಂದರ್​ 27 ರನ್​ಗಳಿಸಿ ಔಟಾದ್ರೆ, ಡೆಬ್ಯೂ ಮ್ಯಾಚ್​ನಲ್ಲಿ ಅನ್ಶುಲ್​ ಕಾಂಬೋಜ್​ ಡಕೌಟ್​ ಆದ್ರು. ಇಂಜುರಿ ನೋವಿನ ನಡುವೆ ದಿಟ್ಟ ಇನ್ನಿಂಗ್ಸ್​ ಕಟ್ಟಿದ ರಿಷಭ್​ ಪಂತ್​ ಹಾಫ್​ ಸೆಂಚುರಿ ಸಿಡಿಸಿದ್ರು.
Here comes Rishabh Pant...
A classy reception from the Emirates Old Trafford crowd 👏 pic.twitter.com/vBwSuKdFcW— England Cricket (@englandcricket) July 24, 2025
358 ರನ್​ಗಳಿಗೆ ಟೀಮ್​ ಇಂಡಿಯಾ ಆಲೌಟ್
ಅಂತಿಮವಾಗಿ ರಿಷಭ್​ ಪಂತ್​ 54 ರನ್​ಗಳಿಸಿದ್ದ ವೇಳೆ ಜೋಫ್ರಾ ಆರ್ಚರ್​ ಬೌಲಿಂಗ್​ನಲ್ಲಿ ಔಟಾದ್ರು. ಬೂಮ್ರಾ-ಸಿರಾಜ್​ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. 358 ರನ್​ಗಳಿಗೆ ಟೀಮ್​ ಇಂಡಿಯಾ ಆಲೌಟ್​ ಆಯ್ತು. ಬಳಿಕ ಮೊದಲ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ ತಂಡಕ್ಕೆ ಓಪನರ್ಸ್​ ಅಬ್ಬರದ ಆರಂಭ ನೀಡಿದ್ರು. ಜಾಕ್​ ಕ್ರಾವ್ಲಿ, ಬೆನ್​ ಡಕೆಟ್​​ ಬೌಂಡರಿಗಳಲ್ಲೇ ರನ್​ ಡೀಲ್​ ಮಾಡಿದ್ರು. ಟೀ ಬ್ರೇಕ್​ ವೇಳೆಗೆ ಆಡಿದ 14 ಓವರ್​​ಗಳಲ್ಲೇ ಇಂಗ್ಲೆಂಡ್​ ವಿಕೆಟ್​ ನಷ್ಟವಿಲ್ಲದೇ 77 ರನ್​ಗಳಿಸಿತು.
ಇದನ್ನೂ ಓದಿ: ಬನ್ನೇರುಘಟ್ಟದಿಂದ ಜಪಾನ್​ಗೆ ವಿಮಾನದಲ್ಲಿ ಹೊರಟ 4 ಆನೆಗಳು.. ಗಜ ಪಡೆ ಭಾರೀ ಬೇಸರ
3ನೇ ಸೆಷನ್​ನಲ್ಲೂ ಓಪನರ್ಸ್​ ದರ್ಬಾರ್​ ಮುಂದುವರೆಯಿತು. ಜಸ್ಟ್​ 46 ಎಸೆತಗಳಲ್ಲಿ ಬೆನ್​ ಡಕೆಟ್​ ಹಾಫ್​ ಸೆಂಚುರಿ ಪೂರೈಸಿದ್ರು. 73 ಎಸೆತಗಳಲ್ಲಿ ಜಾಕ್​​ ಕ್ರಾವ್ಲಿ ಅರ್ಧಶತಕ ಸಿಡಿಸಿದ್ರು. ಇಂಗ್ಲೆಂಡ್​ ತಂಡ ಜಸ್ಟ್​ 28.4 ಓವರ್​​ಗಳಲ್ಲಿ 150 ರನ್​ ಗಡಿದಾಟಿತು.
ಜಾಕ್​​ ಕ್ರಾವ್ಲಿಗೆ ಶಾಕ್​ ಕೊಟ್ಟ ರವೀಂದ್ರ ಜಡೇಜಾ.!
ಅಂತಿಮವಾಗಿ ರವೀಂದ್ರ ಜಡೇಜಾ ಟೀಮ್​ ಇಂಡಿಯಾಗೆ ಮೊದಲ ಬ್ರೇಕ್​ ಥ್ರೂ ನೀಡಿದ್ರು. 84 ರನ್​​ಗಳಿಸಿದ್ದ ಜಾಕ್​ ಕ್ರಾವ್ಲಿಗೆ ಪೆವಿಲಿಯನ್​ ದಾರಿ ತೋರಿಸಿದ್ರು. 38.1ನೇ ಓವರ್​​ನಲ್ಲಿ ಅನ್ಶುಲ್​ ಕಾಂಬೋಜ್​​ ಮೊದಲ ಟೆಸ್ಟ್​ ವಿಕೆಟ್ ಬೇಟೆಯಾಡಿದ್ರು. 94 ರನ್​ಗಳಿಸಿ ಬೆನ್​ ಡಕೆಟ್​ ಔಟಾದ್ರು. ಆ ಬಳಿಕ ಜೊತೆಯಾದ ಒಲಿ ಪೋಪ್​, ಜೋ ರೂಟ್ ದಿಢೀರ್​​​ ಕುಸಿದ ತಂಡಕ್ಕೆ ಆಸರೆಯಾದ್ರು.
ದಿನ ಅಂತ್ಯಕ್ಕೆ ಇಂಗ್ಲೆಂಡ್​​​ 2 ವಿಕೆಟ್​ ನಷ್ಟಕ್ಕೆ 225 ರನ್​ಗಳಿಸಿದ್ದು, 133 ರನ್​ಗಳ ಹಿನ್ನಡೆಯಲ್ಲಿದೆ. 20 ರನ್​ಗಳೊಂದಿಗೆ ಒಲೀ ಪೋಪ್​, 11 ರನ್​ಗಳೊಂದಿಗೆ ಜೋ ರೂಟ್​​ ಕ್ರಿಸ್​ನಲ್ಲಿದ್ದು, ಇಂಗ್ಲೆಂಡ್​ ಇಂದಿನ ದಿನದಾಟದಲ್ಲಿ ಬಿಗ್​ ಸ್ಕೋರ್​​ ಕಲೆ ಹಾಕೋ ಲೆಕ್ಕಾಚಾರದಲ್ಲಿದೆ. ಇಂಗ್ಲೆಂಡ್​ ಆಟಕ್ಕೆ ಟೀಮ್​ ಇಂಡಿಯಾ ಬ್ರೇಕ್​ ಹಾಕುತ್ತಾ ಅನ್ನೋದು ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ