/newsfirstlive-kannada/media/post_attachments/wp-content/uploads/2025/07/Saina-Nehwal-2.jpg)
ಇಂಡೋ-ಇಂಗ್ಲೆಂಡ್ ಲಾರ್ಡ್ಸ್ ಟೆಸ್ಟ್ ಪಂದ್ಯ ರಣರೋಚಕ ಘಟ್ಟ ತಲುಪಿದೆ. 4ನೇ ದಿನದಾಟದಲ್ಲಿ ಆಂಗ್ಲರ ಹುಟ್ಟಡಗಿಸಿದ ಇಂಡಿಯನ್ ಟೈಗರ್ಸ್ ಶಾಕ್ ಮೇಲೆ ಶಾಕ್ ನೀಡಿದ್ರು. ಟೀಮ್ ಇಂಡಿಯಾ ಬೌಲರ್ಗಳ ದಾಳಿಗೆ ಇಂಗ್ಲೆಂಡ್ ಬ್ಯಾಟಿಂಗ್ ಲೈನ್ಅಪ್ ಸ್ಟನ್ ಆಯ್ತು. ಇಂಗ್ಲೆಂಡ್ ಬೌಲರ್ಸ್ ಕೂಡ ತಾವೇನು ಕಮ್ಮಿಯಿಲ್ಲ ಎಂಬಂತೆ ಪರ್ಫಾಮ್ ಮಾಡ್ತಿದ್ದಾರೆ.
ಸೆಷನ್-1: ಕೆಣಕಿದ ಆಂಗ್ಲರಿಗೆ ಖಡಕ್ ಆನ್ಸರ್
ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಅಂತ್ಯದಲ್ಲಿ ಹೈಡ್ರಾಮಾ ನಡೆದಿತ್ತಲ್ಲ ಅದಕ್ಕೆ ಇಂಡಿಯನ್ ಟೀಮ್ 4ನೇ ದಿನದಾಟದಲ್ಲಿ ಖಡಕ್ ಆನ್ಸರ್ ನೀಡ್ತು. ಕೆರಳಿದ ಸಿಂಹಗಳಾಗಿದ್ದ ಇಂಡಿಯನ್ ಪ್ಲೇಯರ್ಸ್ ಯುದ್ಧಭೂಮಿಯಲ್ಲಿ ಆಂಗ್ಲರನ್ನ ಅಟ್ಟಾಡಿಸಿದ್ರು. ಇಂಗ್ಲೆಂಡ್ ನಾಟಕಕ್ಕೆ ಕೆರಳಿ ಕೆಂಡವಾಗಿದ್ದ ಮೊಹಮ್ಮದ್ ಸಿರಾಜ್, ದಿನದಾಟ ಆರಂಭದಲ್ಲೇ ಶಾಕ್ ನೀಡಿದ್ರು. ಸಿರಾಜ್ ಸಿಡಿಗುಂಡಿಗೆ ಬೆನ್ ಡಕೆಟ್, ಒಲಿ ಪೋಪ್ ಬಲಿಯಾದ್ರು.
ಇದನ್ನೂ ಓದಿ: ಟೆಸ್ಟ್ನಲ್ಲಿ ಒಂದೇ ಚೆಂಡಿನಿಂದ 80 ಓವರ್ ಮಾಡಬೇಕಾ..? ಡ್ಯೂಕ್ ಬಾಲ್ ಬಗ್ಗೆ ಗಿಲ್, ಸ್ಟೋಕ್ಸ್ ಅಸಮಾಧಾನ!
ಕಾಲಹರಣ ಮಾಡಿ ಪಿತ್ತನೆತ್ತಿಗೇರಿಸಿದ್ದ ಜಾಕ್ ಕ್ರಾವ್ಲಿ ಆಟ ಹೆಚ್ಚು ಹೊತ್ತು ನಡೀಲಿಲ್ಲ. 22 ರನ್ಗಳಿಸಿದ್ದ ಕ್ರಾವ್ಲಿಯನ್ನ ನಿತೀಶ್ ರೆಡ್ಡಿ ಔಟ್ ಮಾಡಿದ್ರು. 4 ಬೌಂಡರಿ, 1 ಸಿಕ್ಸರ್ ಸಿಡಿಸಿ ಕೌಂಟರ್ ಅಟ್ಯಾಕ್ ನಡೆಸೋ ಯತ್ನ ಮಾಡಿದ ಹ್ಯಾರಿ ಬ್ರೂಕ್ಗೆ ಆಕಾಶ್ದೀಪ್ ಕ್ಲೀನ್ಬೋಲ್ಡ್ ಮಾಡಿ ಪೆವಿಲಿಯನ್ ಹಾದಿ ತೋರಿಸಿದ್ರು. ಫಸ್ಟ್ ಸೆಷನ್ನಲ್ಲಿ 4 ವಿಕೆಟ್ ಬೇಟೆಯಾಡಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತು.
ಸೆಷನ್-2: ಇಂಗ್ಲೆಂಡ್ಗೆ ಸ್ಪಿನ್ ಶಾಕ್ ಕೊಟ್ಟ ಸುಂದರ್
2ನೇ ಸೆಷನ್ನಲ್ಲಿ ಇಂಗ್ಲೆಂಡ್ ತಂಡ ರಕ್ಷಣಾತ್ಮಕ ಆಟದ ಮೊರೆ ಹೋಯ್ತು. ಬೆನ್ ಸ್ಟೋಕ್ಸ್ - ಜೋ ರೂಟ್ ಪಾರ್ಟನರ್ಶಿಪ್ ಬ್ಯುಲ್ಡ್ ಮಾಡಿದ್ರು. ಎಚ್ಚರಿಕೆಯ ಆಟವಾಡಿ 5ನೇ ವಿಕೆಟ್ಗೆ 67 ರನ್ಗಳ ಜೊತೆಯಾಟವಾಡಿದ್ರು.
ಇದನ್ನೂ ಓದಿ: ಭೂಮಿಗೆ ವಾಪಸ್ ಬರ್ತಿರೋ ಶುಕ್ಲಾಗೆ ಬಾಹ್ಯಾಕಾಶದಲ್ಲಿ ಭಾವನಾತ್ಮಕ ವಿದಾಯ; ಇಂದು ಹೊರಟು ನಾಳೆ ಲ್ಯಾಂಡಿಂಗ್..!
ಅಂತಿಮವಾಗಿ 42.4ನೇ ಓವರ್ನಲ್ಲಿ ವಾಷಿಂಗ್ಟನ್ ಸುಂದರ್ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ರು. 40 ರನ್ಗಳಿಸಿದ್ದ ಜೋ ರೂಟ್ ಸುಂದರ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದ್ರು. ಬಳಿಕ ಕಣಕ್ಕಿಳಿದ ಜೇಮಿ ಸ್ಮಿತ್ ಕೂಡ ಸುಂದರ್ ಸ್ಪಿನ್ ಜಾದೂಗೆ ಸ್ಟನ್ ಆದ್ರು. 2ನೇ ಸೆಷನ್ನಲ್ಲಿ 27 ಓವರ್ ಬೌಲಿಂಗ್ ಮಾಡಿದ ಟೀಮ್ ಇಂಡಿಯಾ 2 ವಿಕೆಟ್ ಉರುಳಿಸಿ 77 ರನ್ಗಳಿಸಿದ್ರು.
ಸೆಷನ್-3: ಆಂಗ್ಲರಿಗೆ ‘ಬೂಮ್ರಾಘಾತ’, 192 ರನ್ಗೆ ಆಲೌಟ್
3ನೇ ಸೆಷನ್ನಲ್ಲೂ ಸುಂದರ್ ಸ್ಪಿನ್ ಮ್ಯಾಜಿಕ್ ಮುಂದುವರೆಯಿತು. ಬರೋಬ್ಬರಿ 96 ಎಸೆತ ಎದುರಿಸಿ ಕ್ರಿಸ್ ಕಚ್ಚಿ ನಿಂತಿದ್ದ ಇಂಗ್ಲೆಂಡ್ ಕ್ಯಾಪ್ಟನ್ ಬೆನ್ಸ್ಟೋಕ್ಸ್ ಸುಂದರ್ ಸ್ಪಿನ್ಗೆ ಸ್ಟನ್ ಆದ್ರು. ಕ್ಲೀನ್ಬೋಲ್ಡ್ ಆಗಿ ಸ್ಟೋಕ್ಸ್ ಔಟಾದ್ರು. ಸ್ಟೋಕ್ಸ್ ನಿರ್ಗಮನದ ಬಳಿಕ ಇಂಗ್ಲೆಂಡ್ ತಂಡ ಬೂಮ್ರಾಘಾತಕ್ಕೆ ತತ್ತರಿಸಿತು. ಬ್ರೆಂಡನ್ ಕರ್ಸ್, ಕ್ರಿಸ್ವೋಕ್ಸ್, ಜೋಫ್ರಾ ಆರ್ಚರ್ ಬೂಮ್ರಾ ಯಾರ್ಕರ್ಗೆ ಶರಣಾದ್ರು. ಆಲೌಟ್ ಆದ ಇಂಗ್ಲೆಂಡ್ ಟೀಮ್ ಇಂಡಿಯಾಗೆ 192 ರನ್ಗಳ ಟಾರ್ಗೆಟ್ ನೀಡಿತು.
4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ
193 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಕೂಡ ಆಘಾತ ಎದುರಿಸಿದೆ. ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್, 3ನೇ ಕ್ರಮಾಂಕದಲ್ಲಿ ಬಂದ ಕರುಣ್ ನಾಯರ್ ಕೈ ಕೊಟ್ರು. ನಾಯಕ ಶುಭ್ಮನ್ ಗಿಲ್ ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ನೈಟ್ ವಾಚ್ಮನ್ ಆಗಿ ಬಂದ ಆಕಾಶ್ದೀಪ್ ಕೂಡ ಔಟಾಗಿದ್ದಾರೆ. 58 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಸದ್ಯ ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿ: ಸೈನಾ ನೆಹ್ವಾಲ್ ಬಾಳಲ್ಲಿ ಬಿರುಗಾಳಿ.. 7 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ
33 ರನ್ಗಳಿಸಿರೋ ಕೆ.ಎಲ್ ರಾಹುಲ್ ಕ್ರಿಸ್ನಲ್ಲಿ ಉಳಿದಿದ್ದು, ಟೀಮ್ ಇಂಡಿಯಾ ಗೆಲುವಿಗೆ 135 ರನ್ಗಳ ಅಗತ್ಯತೆಯಿದೆ. ಇಂಗ್ಲೆಂಡ್ 6 ವಿಕೆಟ್ಗಳು ಬೇಕಿವೆ. ಹೀಗಾಗಿ ಇಂದಿನ ದಿನದಾಟ ತೀವ್ರ ಕುತೂಹಲ ಹುಟ್ಟುಹಾಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ