ಟೆಸ್ಟ್ ಗೆಲುವಿಗೆ ಕಾರಣ 4 ಆಟಗಾರರು.. ಟೀಂ ಇಂಡಿಯಾ ಕಂಬ್ಯಾಕ್ ಹಿಂದಿರುವ ಹೀರೋಗಳು ಇವರೇ..!

author-image
Ganesh
Updated On
ಕ್ರಿಕೆಟ್ ಕಾಶಿಯಲ್ಲಿ ಗೆಲುವು ಸುಲಭ ಇಲ್ಲ.. ಟೀಂ ಇಂಡಿಯಾಗೆ ಇದೆ 5 ಸವಾಲುಗಳು..!
Advertisment
  • ಎಡ್ಜ್​​ಬಾಸ್ಟನ್​ನಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ!
  • ಆಂಗ್ಲರ​ ಭದ್ರಕೋಟೆ ಛಿದ್ರ.. ಇತಿಹಾಸ ಬರೆದ ಗಿಲ್ ಪಡೆ
  • 58 ವರ್ಷಗಳ ಸೋಲಿನ ಸರಪಳಿ ಕಳಚಿದ ಇಂಡಿಯಾ

ಒಂದಲ್ಲ.. ಎರಡಲ್ಲ.. ಬರೋಬ್ಬರಿ 58 ವರ್ಷ.. ಈ 58 ವರ್ಷಗಳಲ್ಲಿ ಎಡ್ಜ್​ಬಾಸ್ಟನ್​ನಲ್ಲಿ ಒಮ್ಮೆಯೂ ಗೆಲ್ಲದ ಟೀಮ್ ಇಂಡಿಯಾ, ಈಗ ಇಂಗ್ಲೆಂಡ್​ನ ಭದ್ರಕೋಟೆಯನ್ನು ಛಿದ್ರಗೊಳಿಸಿದೆ. ವಿಜಯ ಪತಾಕೆ ಹಾರಿಸಿ ಸ್ಟ್ರಾಂಗ್ ಕಮ್​ಬ್ಯಾಕ್ ಮಾಡಿದೆ. ಇದಕ್ಕೆ ಕಾರಣ ಆ ಹೀರೋಗಳು..

ಬರ್ಮಿಂಗ್​ಹ್ಯಾಮ್​ನಲ್ಲಿ 1967ರಿಂದಲೂ ಒಂದೂ ಟೆಸ್ಟ್​ ಗೆಲ್ಲದ ಟೀಮ್ ಇಂಡಿಯಾ, ಈಗ ಗೆಲ್ಲೋದು ನಿಜಕ್ಕೂ ಅಷ್ಟು ಸುಲಭದಿರಲಿಲ್ಲ. ಇದನ್ನು ಸುಲಭವಾಗಿಸಿದ ಯಂಗ್ ಇಂಡಿಯಾ, ಹೊಸ ಇತಿಹಾಸ ನಿರ್ಮಿಸಿತು. ಇದಕ್ಕೆ ಕಾರಣ ಈ ನಾಲ್ವರು.

ಗಿಲ್​​ ಬ್ಲಾಕ್ ಬಾಸ್ಟರ್ ಬ್ಯಾಟಿಂಗ್.. ಸಿಡಿದಿದ್ದು 430 ರನ್​..!

ಎಡ್ಜ್​ಬಾಸ್ಟನ್​ನಲ್ಲಿ ಟೀಮ್ ಇಂಡಿಯಾ ಗೆಲುವಿನ ರೂವಾರಿಯೇ ಶುಭ್​ಮನ್ ಗಿಲ್. ನಾಯಕನಾಗಿ ಆಕ್ಷರಶಃ ನಡೆಸಿದ್ದು ಜವಾಬ್ದಾರಿಯುತ ಬ್ಯಾಟಿಂಗ್. ಮೊದಲ ಇನ್ನಿಂಗ್ಸ್​ನಲ್ಲಿ ಡಬಲ್ ಸೆಂಚುರಿ ಸಿಡಿಸಿ ಆಧಾರವಾಗಿದ್ದ ಶುಭಮನ್​ ಗಿಲ್, 2ನೇ ಇನ್ನಿಂಗ್ಸ್​ನಲ್ಲೂ ಆಂಗ್ಲ ಬೌಲರ್​ಗಳನ್ನು ಅಟ್ಟಾಡಿಸಿದ್ರು. ಈ ಎರಡು ಇನ್ನಿಂಗ್ಸ್​ಗಳಿಂದ ಶುಭ್​ಮನ್ ಕಲೆಹಾಕಿದ ರನ್, ಬರೋಬ್ಬರಿ 430.

ಇದನ್ನೂ ಓದಿ: ಕ್ರಿಕೆಟ್ ಆಯ್ತು ಈಗ ಸಿನಿ ರಂಗಕ್ಕೆ ಪದಾರ್ಪಣೆ ಮಾಡ್ತಿರೋ ಮಾಜಿ ಸ್ಟಾರ್ ಕ್ರಿಕೆಟರ್​.. ಪ್ರೊಡಕ್ಷನ್ ನಂ.1

publive-image

ಎಡ್ಜ್​​ಬಾಸ್ಟನ್​ನಲ್ಲಿ ಟೀಮ್ ಇಂಡಿಯಾ ಗಳಿಸಿದ ರನ್​ನಲ್ಲಿ ಶೇಖಡ 40 ರಷ್ಟು ರನ್.. ಶುಭ್​ಮನ್ ಬ್ಯಾಟ್​ನಿಂದ ಬಂದಿದ್ದಾಗಿದೆ. ನಾಯಕನಾಗಿಯೂ ಶುಭ್​ಮನ್, ಲೀಡ್ಸ್​ ಟೆಸ್ಟ್​ಗಿಂತ ಸುಧಾರಿಸಿದ್ದಾರೆ. ಹೀಗಾಗಿ ಎಡ್ಜ್​ಬಾಸ್ಟನ್​ ಟೆಸ್ಟ್​ ಗೆಲುವಿನ ಕ್ರೆಡಿಟ್ ಗಿಲ್​ಗೆ ಸಿಗಬೇಕು.

ರವೀಂದ್ರ ಜಡೇಜಾ ಆಟ ಕ್ರೂಶಿಯಲ್​..!

ಎಡ್ಜ್​ಬಾಸ್ಟನ್​ನಲ್ಲಿ ಕ್ರೂಶಿಯಲ್ ರೋಲ್ ಪ್ಲೇ ಮಾಡಿದ್ದು ರವೀಂದ್ರ ಜಡೇಜಾ ಅನ್ನೋದ್ರಲ್ಲಿ ನೋ ಡೌಟ್. ಎರಡೂ ಇನ್ನಿಂಗ್ಸ್​ಗಳಲ್ಲಿ ಅರ್ಧಶತಕ ಸಿಡಿಸಿದ ಜಡೇಜಾ, ಮೊದಲ ಇನ್ನಿಂಗ್ಸ್​ನಲ್ಲಿ ಶುಭ್​ಮನ್ ಗಿಲ್ ಜೊತೆ 203 ರನ್​ಗಳ ಜೊತೆಯಾಟ, 2ನೇ ಇನ್ನಿಂಗ್ಸ್​ನಲ್ಲಿ ಇದೇ ಶುಭ್​ಮನ್ ಜೊತೆ 175 ರನ್​ಗಳ ಜೊತೆಯಾಟವಾಡಿದ್ರು. ಇದು ಟೀಮ್ ಇಂಡಿಯಾ ಬಿಗ್ ಟಾರ್ಗೆಟ್ ಸೆಟ್ ಮಾಡುವಲ್ಲಿ ಮೇಜರ್ ರೋಲ್ ಪ್ಲೇ ಮಾಡ್ತು.

ಇದನ್ನೂ ಓದಿ: 336 ರನ್​ಗಳ ಭರ್ಜರಿ ಗೆಲುವು.. 58 ವರ್ಷಗಳ ಇತಿಹಾಸ ಅಳಿಸಿ ಹಾಕಿದ ಟೀಂ ಇಂಡಿಯಾ..!

publive-image

ಸಿರಾಜ್ ಸಿಡಿಗುಂಡು.. ಇಂಗ್ಲೆಂಡ್ ಸ್ಟನ್

ಬೂಮ್ರಾ ಇಲ್ಲದ ಟೀಮ್ ಇಂಡಿಯಾದ ಬೌಲಿಂಗ್ ಅಟ್ಯಾಕ್​​​​​​​​​​​​​​​​​​​​​ಗೆ ಬಲ ಇದೆಯಾ ಎಂಬ ಪ್ರಶ್ನೆ ಸಹಜವಾಗೇ ಹುಟ್ಟಿತ್ತು. ಈ ಪ್ರಶ್ನೆಗೆ ಸಿರಾಜ್ ಉತ್ತರ ನೀಡಿದರು. ಮೊದಲ ಇನ್ನಿಂಗ್ಸ್​ನಲ್ಲಿ 70 ರನ್ ನೀಡಿ 6 ವಿಕೆಟ್ ಬೇಟೆಯಾಡಿದ್ದ ಸಿರಾಜ್​, 2ನೇ ಇನ್ನಿಂಗ್ಸ್​ನಲ್ಲೂ ಎಫೆಕ್ಟೀವ್ ಸ್ಪೆಲ್ ಹಾಕಿದ್ರು.

ಆಕಾಶ್ ಮುಂದೆ ನಡೀಲಿಲ್ಲ ಆಂಗ್ಲರ ಆಟ

ಎಡ್ಜ್​ಬಾಸ್ಟನ್​ನಲ್ಲಿ ಮೋಸ್ಟ್ ಆಫ್ ದಿ ಕ್ರೆಡಿಟ್ ಆಕಾಶ್ ದೀಪ್​ಗೆ ಸಲ್ಲಬೇಕು. ಯಾಕಂದ್ರೆ ಎರಡೂ ಇನ್ನಿಂಗ್ಸ್​ಗಳಲ್ಲಿ ಟೀಮ್ ಇಂಡಿಯಾ ಆರಂಭಿಕ ಬ್ರೇಕ್ ಥ್ರೂ ನೀಡಿದ್ದೆ ಆಕಾಶ್ ದೀಪ್. ಮೊದಲ ಇನ್ನಿಂಗ್ಸ್​ 4 ವಿಕೆಟ್ ಬೇಟೆಯಾಡಿದ್ದ ಆಕಾಶ್ ದೀಪ್​, 2ನೇ ಇನ್ನಿಂಗ್ಸ್​ನಲ್ಲಿ ಬೆನ್ ಡಕೆಟ್​, ಒಲಿ ಪೊಪ್​, ಜೋ ರೂಟ್​, ಹ್ಯಾರಿ ಬ್ರೂಕ್​ರಂಥ ಮ್ಯಾಚ್ ವಿನ್ನರ್​ಗಳನ್ನೇ ಖೆಡ್ಡಾಗೆ ಕೆಡವಿದ್ರು. ಇದರೊಂದಿಗೆ 2ನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್ ಉರುಳಿಸಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ರು.

publive-image

ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್ ಓಪನಿಂಗ್ ಪಾರ್ಟ್​ನರ್ ಶಿಪ್​, ರಿಷಭ್ ಪಂತ್​ರ ಫೈರಿ ಬ್ಯಾಟಿಂಗ್.. ಇವೆಲ್ಲವೂ ಎಡ್ಜ್ ಬಾಸ್ಟನ್​ ಟೆಸ್ಟ್​ ಗೆಲುವಲ್ಲಿ ಮಹತ್ತರ ಪಾತ್ರವನ್ನೇ ವಹಿಸಿದ್ದು ಸುಳ್ಳಲ್ಲ. ಲೀಡ್ಸ್​ನಲ್ಲಿ ಸೋತಿದ್ದ ಟೀಮ್ ಇಂಡಿಯಾ, ಬರ್ಮಿಂಗ್​ಹ್ಯಾಮ್​​ನಲ್ಲಿ ಬ್ಲಾಕ್​ಬಾಸ್ಟರ್​ ಪರ್ಪಾಮೆನ್ಸ್ ನೀಡಿದೆ. ಆ ಮೂಲಕ ಸ್ಟ್ರಾಂಗ್ ಕಮ್​​ಬ್ಯಾಕ್ ಮಾಡಿರೋ ಟೀಮ್ ಇಂಡಿಯಾ, ಎಡ್ಜ್​ ಬಾಸ್ಟನ್​ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

ಇದನ್ನೂ ಓದಿ: 336 ರನ್​ಗಳ ಭರ್ಜರಿ ಗೆಲುವು.. ಬೆನ್ನಲ್ಲೇ ಮೂವರು ಆಟಗಾರರಿಗೆ ಗೆಲುವಿನ ಕ್ರೆಡಿಟ್ ಕೊಟ್ಟ ಕೊಹ್ಲಿ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment