/newsfirstlive-kannada/media/post_attachments/wp-content/uploads/2025/06/GILL-1.jpg)
ಆಂಗ್ಲರ ವಿರುದ್ಧದ ಅಸಲಿ ಟೆಸ್ಟ್ ಕದನಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ವಾರ್ಮ್ಅಪ್ ಅಖಾಡಕ್ಕಿಳಿದಿದ್ರು. ಬೆಕೆನ್ಹ್ಯಾಮ್ನಲ್ಲಿ ಟೀಮ್ ಇಂಡಿಯಾ vs ಇಂಡಿಯಾ A ನಡುವೆ ನಡೆದ ವಾರ್ಮ್ ಅಪ್ ಪಂದ್ಯದಲ್ಲಿ ಭರ್ಜರಿ ಫೈಟ್ ನಡೀತು.
ಇಂಗ್ಲೆಂಡ್ ಎದುರಿನ ಪ್ರತಿಷ್ಟಿತ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸಿದ್ಧತೆ ಜೋರಾಗಿ ನಡೀತಿದೆ. ಸಿದ್ಧತೆಯ ಭಾಗವಾಗಿ ಬೆಕೆನ್ಹ್ಯಾಮ್ನಲ್ಲಿ ನಡೆದ ಇಂಡಿಯಾ ಎ ತಂಡದ ವಿರುದ್ಧ ಟೀಮ್ ಇಂಡಿಯಾ ಟೆಸ್ಟ್ ಟೀಮ್ ವಾರ್ಮ್ಅಪ್ ಮ್ಯಾಚ್ ಆಡಿತ್ತು. ನಡೆದ 3 ದಿನಗಳ ಆಟದಲ್ಲಿ ಟೀಮ್ ಇಂಡಿಯಾಗೆ ಪಾಸಿಟಿವ್-ನೆಗೆಟಿವ್ ಎರಡೂ ರಿಸಲ್ಟ್ ಸಿಕ್ಕಿದೆ.
ಇದನ್ನೂ ಓದಿ: ಮೊದಲ ಪಂದ್ಯದಲ್ಲಿ ಕರುಣ್ ನಾಯರ್ ಸ್ಥಾನ ಫಿಕ್ಸ್.. ಕನ್ನಡಿಗನ ಹಠ, ಪರಿಶ್ರಮಕ್ಕೆ ಫಲ ಸಿಗುತ್ತಾ?
ಅರ್ಧಶತಕ ಸಿಡಿಸಿ ರಾಹುಲ್, ಶುಭ್ಮನ್ ಶೈನ್
ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಕ್ಯಾಪ್ಟನ್ ಶುಭ್ಮನ್ ಗಿಲ್ ಇಂಡಿಯಾ ಎ ವಿರುದ್ಧದ ಕದನದಲ್ಲಿ ಮಿಂಚಿದ್ದಾರೆ. ಕಳೆದ 3 ತಿಂಗಳಿನಿಂದ ಸತತವಾಗಿ ವೈಟ್ಬಾಲ್ ಕ್ರಿಕೆಟ್ ಆಡಿದ್ದ ಇವರಿಬ್ರು ರೆಡ್ ಬಾಲ್ ರಿಧಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನ್ಅಫಿಶಿಯಲ್ ಟೆಸ್ಟ್ನಲ್ಲಿ 116 ಹಾಗೂ 51 ರನ್ಗಳಿಸಿ ಮಿಂಚಿದ್ದ ರಾಹುಲ್, ಇಂಡಿಯಾ ಎ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದಾರೆ. ಕ್ಯಾಪ್ಟನ್ ಶುಭ್ಮನ್ ಗಿಲ್ ಕೂಡ ಹಾಫ್ ಸೆಂಚುರಿ ಸಿಡಿಸಿ ಶೈನ್ ಆಗಿದ್ದಾರೆ.
3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಡಿಸೆಂಟ್ ಆಟ
ಇಷ್ಟು ದಿನ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸ್ತಾ ಇದ್ದ ಶುಭ್ಮನ್ ಗಿಲ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ 4ನೇ ಕ್ರಮಾಂಕಕ್ಕೆ ಶಿಫ್ಟ್ ಆಗಲಿದ್ದಾರೆ. ಇದೀಗ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸೋದ್ಯಾರು ಎಂಬ ಪ್ರಶ್ನೆಗೆ ಮ್ಯಾನೇಜ್ಮೆಂಟ್ ಉತ್ತರ ಕಂಡುಕೊಂಡತಿದೆ. ಇಂಡಿಯಾ ಎ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಸಾಯಿ ಸುದರ್ಶನ್ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಕೌಂಟಿ ಕ್ರಿಕೆಟ್ ಆಡಿದ ಅನುಭವನ್ನ ಎನ್ಕ್ಯಾಚ್ ಮಾಡಿಕೊಂಡ ಸಾಯಿ ಸುದರ್ಶನ್ ಟಫ್ ಕಂಡಿಷನ್ಸ್ನಲ್ಲಿ 38 ರನ್ಗಳಿಸಿದ್ದಾರೆ.
ಇದನ್ನೂ ಓದಿ: ಯಂಗ್ ಕ್ರಿಕೆಟರ್ ಶ್ರೇಯಸ್ ಅಯ್ಯರ್ 2 ಮಕ್ಕಳ ತಂದೆ..? ನನ್ನ ಗಂಡ ಎಂದ ಬ್ಯೂಟಿ ನಟಿ!
ವಿಕೆಟ್ ಕಬಳಿಸಲು ಜಸ್ಪ್ರಿತ್ ಬೂಮ್ರಾ ಪರದಾಟ.!
ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಮೇಲೆ ಟೀಮ್ ಇಂಡಿಯಾ ಡಿಪೆಂಡ್ ಆಗಿದೆ. ಸಿಂಗಲ್ ಹ್ಯಾಂಡೆಡ್ಲಿ ಮ್ಯಾಚ್ ಗೆಲ್ಲಿಸಿ ಕೊಡೋ ಸಾಮರ್ಥ್ಯ ಹೊಂದಿರೋ ಬೂಮ್ರಾ, ಟೀಮ್ ಇಂಡಿಯಾದ ಬೌಲಿಂಗ್ ಬಲ ಎನಿಸಿದ್ದಾರೆ. ಬೂಮ್ರಾ ಮ್ಯಾಜಿಕ್ ನಡೆದ್ರೆ ಮಾತ್ರ ಇಂಡಿಯಾದ ಗೆಲುವು ಸಾಧ್ಯ ಅನ್ನೋದು ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಯಾಗ್ತಿರೋ ವಿಚಾರ. ಆದ್ರೆ, ಬೂಮ್ರಾ ರಿಧಮ್ ಕಂಡುಕೊಳ್ಳುವಲ್ಲಿ ಫೇಲ್ ಆಗಿದ್ದಾರೆ. ವಾರ್ಮ್ಅಪ್ ಗೇಮ್ನಲ್ಲಿ ಬೂಮ್ರಾ ವಿಕೆಟ್ಲೆಸ್ ಆಗಿರೋದು ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಆತಂಕಕ್ಕೆ ಕಾರಣವಾಗಿದೆ.
ಎಡಗೈ ವೇಗಿ ಆರ್ಷ್ದೀಪ್ ಸಿಂಗ್ ವಿಕೆಟ್ ಲೆಸ್.!
ಮೊದಲ ಬಾರಿ ಟೆಸ್ಟ್ ಫಾರ್ಮೆಟ್ಗೆ ಆಯ್ಕೆಯಾಗಿರೋ ಆರ್ಷ್ದೀಪ್ ಸಿಂಗ್ ವಾರ್ಮ್ಅಪ್ ಗೇಮ್ನಲ್ಲಿ ಇಂಪ್ರೆಸ್ ಮಾಡುವಲ್ಲಿ ಫೇಲ್ ಆಗಿದ್ದಾರೆ. 12 ಓವರ್ ಬೌಲಿಂಗ್ ಮಾಡಿದ ಆರ್ಷ್ದೀಪ್ 52 ರನ್ ಬಿಟ್ಟುಕೊಟ್ಟಿದ್ದು ಒಂದೂ ವಿಕೆಟ್ ಬೇಟೆಯಾಡದೆ ನಿರಾಸೆ ಮೂಡಿಸಿದ್ದಾರೆ.
ಇದನ್ನೂ ಓದಿ: 29ನೇ ವಯಸ್ಸಿನಲ್ಲೇ ವಿರಾಟ್ ಕೊಹ್ಲಿನ ಮದುವೆ ಆಗಿದ್ದು ಏಕೆ.. ಕಾರಣ ಹೇಳಿದ ಪತ್ನಿ ಅನುಷ್ಕಾ ಶರ್ಮಾ!
ಸಿರಾಜ್-ಪ್ರಸಿದ್ಧ್ ಕೃಷ್ಣ ಬೊಂಬಾಟ್ ಬೌಲಿಂಗ್.!
ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ವಾರ್ಮ್ಅಪ್ ಗೇಮ್ನಲ್ಲಿಬೊಂಬಾಟ್ ಬೌಲಿಂಗ್ ಮಾಡಿದ್ದಾರೆ. ಟೈಟ್ ಸ್ಪೆಲ್ಗಳನ್ನ ಹಾಕಿರೋ ಸಿರಾಜ್, ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಬೇಟೆಯಾಡಿದ್ದಾರೆ. ಸಿರಾಜ್, ಪ್ರಸಿದ್ಧ್ ಕೃಷ್ಣ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ವಾರ್ಮ್ಅಪ್ ಪಂದ್ಯದಲ್ಲಿ ಇವರಿಬ್ಬರು ನೀಡಿರುವ ಪ್ರದರ್ಶನ ಸದ್ಯ ಭರವಸೆ ಹುಟ್ಟುಹಾಕಿದೆ.
ಆಲ್ರೌಂಡರ್ ಶಾರ್ದೂಲ್ ಠಾಕೂರ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಮಿಂಚಿದ್ದಾರೆ. ಭರ್ಜರಿ ಬ್ಯಾಟಿಂಗ್ ನಡೆಸಿದ ಶಾರ್ದೂಲ್ ಠಾಕೂರ್ ಅಜೇಯ 122 ರನ್ಗಳಿಸಿ ಪ್ಲೇಯಿಂಗ್ ಇಲೆವೆನ್ನಲ್ಲಿ ತಮ್ಮ ಸ್ಥಾನವನ್ನ ಬಹುತೇಕ ಸೀಲ್ ಮಾಡಿಕೊಂಡಿದ್ದಾರೆ. ಅತ್ತ ನಿತೀಶ್ ಕುಮಾರ್ ರೆಡ್ಡಿ ಕೂಡ ವಾರ್ಮ್ಅಪ್ ಪಂದ್ಯದ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಆಲ್ರೌಂಡರ್ ಕೋಟಾದಲ್ಲಿ ಸ್ಥಾನಕ್ಕಾಗಿ ಇಬ್ಬರ ನಡುವೆ ಪೈಪೋಟಿ ನಡೀತಿದ್ದು, ಈ ಪರ್ಫಾಮೆನ್ಸ್ನಿಂದ ಫೈಟ್ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಶುಭ್ಮನ್ ಗಿಲ್ಗೆ ಬಿಗ್ ಶಾಕ್.. ನೂತನ ನಾಯಕನ ಮೇಲೆ ವಿರಾಟ್ ಕೊಹ್ಲಿ, ಸಚಿನ್ ಫ್ಯಾನ್ಸ್ ಕೆಂಡ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ