/newsfirstlive-kannada/media/post_attachments/wp-content/uploads/2024/10/KOHLI_SARFRAJ_NEW.jpg)
ಇಂಡೋ-ಕಿವೀಸ್​ ಫಸ್ಟ್​ ಟೆಸ್ಟ್​ ಫೈಟ್​​ ರೋಚಕ ಘಟ್ಟ ತಲುಪಿದೆ. ಟೀಮ್​ ಇಂಡಿಯಾ ಅಭಿಮಾನಿಗಳೆಲ್ಲಾ ಸದ್ಯ ಮಿರಾಕಲ್​ನ ನಿರೀಕ್ಷೆಯಲ್ಲಿದ್ದಾರೆ. ಯಾಕಂದ್ರೆ, ಇಂದಿನ ದಿನದಾಟ ಇಡೀ ಪಂದ್ಯದ ಹಣೆಬರಹವನ್ನೇ ನಿರ್ಧರಿಸಲಿದೆ. ಹಾಗಾದ್ರೆ, 4ನೇ ದಿನದಾಟದಲ್ಲಿ ಟೀಮ್​ ಇಂಡಿಯಾ ಮುಂದಿರೋ ಚಾಲೆಂಜ್​ ಏನು.?
ಇಂಡೋ-ನ್ಯೂಜಿಲೆಂಡ್​​ ಬೆಂಗಳೂರು ಟೆಸ್ಟ್​ ಪಂದ್ಯ ರಣರೋಚಕ ಘಟ್ಟ ತಲುಪಿದೆ. 46ಕ್ಕೆ ಫಸ್ಟ್​ ಇನ್ನಿಂಗ್ಸ್​​ನಲ್ಲಿ ಆಲೌಟಾದ ಟೀಮ್​ ಇಂಡಿಯಾ, 2ನೇ ಇನ್ನಿಂಗ್ಸ್​ನಲ್ಲಿ ಟಫ್​ ಫೈಟ್​ ನಡೆಸ್ತಿದೆ. ಆದ್ರೆ, 3ನೇ ದಿನದಾಟದ ಕೊನೆಯ ಎಸೆತದಲ್ಲಿ ಕೊಹ್ಲಿ ಔಟಾದ ಬಳಿಕ ಅಭಿಮಾನಿಗಳನ್ನ ನಿರಾಸೆ ಆವರಿಸಿದೆ. ಈ ಪಂದ್ಯವನ್ನ ಗೆಲ್ಲಬೇಕಂದ್ರೆ, ಇಂದಿನ ದಿನದಾಟದಲ್ಲಿ ಹಲವು ಸವಾಲುಗಳನ್ನ ಟೀಮ್​ ಇಂಡಿಯಾ ಮೆಟ್ಟಿನಿಲ್ಲಬೇಕಿದೆ. ಎಲ್ಲಾ ಅಂದುಕೊಂಡತೆ ಆದ್ರೆ ಮಾತ್ರ ಗೆಲುವು ಸಾಧ್ಯ.
ಇದನ್ನೂ ಓದಿ: Breaking: ಸರ್ಫರಾಜ್ ಖಾನ್ ಭರ್ಜರಿ ಶತಕ; ಮತ್ತೆ ಚಿಗುರಿತು ಭಾರತಕ್ಕೆ ಗೆಲ್ಲುವ ಕನಸು..!
/newsfirstlive-kannada/media/post_attachments/wp-content/uploads/2024/10/KOHLI_SARFRAJ.jpg)
ಇಂದಿನ ದಿನದಾಟದ ಫಸ್ಟ್​ ಸೆಷನ್​ ಆಟವೇ ನಿರ್ಣಾಯಕ.!
ಇಂದಿನ ದಿನದಾಟದ ಮೊದಲ ಸೆಷನ್​ ಟೀಮ್​ ಇಂಡಿಯಾ ಪಾಲಿಗೆ ಕ್ರೂಶಿಯಲ್​. ನಿನ್ನೆಯ ದಿನದಾಟದ ಬಳಿಕ ಪಿಚ್​ನ ಕಂಪ್ಲೀಟ್​ ಕವರ್​ ಮಾಡಿರಲಾಗಿದೆ. ಹೀಗಾಗಿ ಪಿಚ್ ಮೇಲೆ ಮಂಜು ಇರಲಿದ್ದು, ತೇವಾಂಶ ಇರುತ್ತೆ. ಕಿವೀಸ್​ ಪೇಸರ್​ಗಳಿಗೆ ಇದು ಅಡ್ವಾಂಟೇಜ್​.! ಪೇಸ್​ ಮತ್ತು ಸ್ವಿಂಗ್​ನಿಂದ ಬ್ಯಾಟ್ಸ್​ಮನ್​ಗಳನ್ನ ಟ್ರಬಲ್​ ಮಾಡೋ ಸಾಧ್ಯತೆಯಿದೆ. ಹೀಗಾಗಿ ಎಚ್ಚರಿಕೆಯ ಆಟ ಅಗತ್ಯ.!
ಸರ್ಫರಾಜ್​ ಖಾನ್​​ರಿಂದ ಬೇಕಿದೆ ಬಿಗ್​ ಇನ್ನಿಂಗ್ಸ್​.!
ಸದ್ಯ ಕ್ರಿಸ್​ನಲ್ಲಿರೋ ಬ್ಯಾಟ್ಸ್​ಮನ್​ ಸರ್ಫರಾಜ್​ ಖಾನ್​ ಟೀಮ್​ ಇಂಡಿಯಾದ ದೊಡ್ಡ ಭರವಸೆಯಾಗಿದ್ದಾರೆ. ಸೆಂಚುರಿ ಸಿಡಿಸಿ ಕ್ರಿಸ್​ನಲ್ಲಿ ಸೆಟ್​ ಆಗಿರೋ ಸರ್ಫರಾಜ್​, ಇಂದು ಬಿಗ್​ ಇನ್ನಿಂಗ್ಸ್​ ಕಟ್ಟಬೇಕಿದೆ. ನ್ಯೂಜಿಲೆಂಡ್​ನ ಅಟ್ಯಾಕಿಂಗ್​ ಮಂತ್ರಕ್ಕೆ ಕೌಂಟರ್​ ಅಟ್ಯಾಕ್​ ನೀಡ್ತಿರೋ ಸರ್ಫರಾಜ್ ಕ್ರಿಸ್​ನಲ್ಲಿದ್ದಷ್ಟು ಹೊತ್ತು ಕಿವೀಸ್​ ಪಡೆಯ ಒತ್ತಡ ಹೆಚ್ಚಾಗಲಿದೆ. ಈ ಕಾರಣದಿಂದ ಇಂದು ಸರ್ಫರಾಜ್​ ಆಟ ಮೋಸ್ಟ್​ ಇಂಪಾರ್ಟೆಂಟ್​.!
‘ಮನೆ ಮಗ’ ರಾಹುಲ್​ ಮೇಲಿದೆ ಅಪಾರವಾದ ನಿರೀಕ್ಷೆ.!
ಮೊದಲ ಇನ್ನಿಂಗ್ಸ್​ನಲ್ಲಿ ಡಕೌಟ್​ ಆಗಿದ್ರೂ, 2ನೇ ಇನ್ನಿಂಗ್ಸ್​ನಲ್ಲಿ ಮನೆ ಮಗ ಕೆ.ಎಲ್​ ರಾಹುಲ್​ ಮೇಲೆ ನಿರೀಕ್ಷೆ ಹೆಚ್ಚಿದೆ. ಚಿಕ್ಕ ವಯಸ್ಸಿನಿಂದ ಆಡಿ-ಬೆಳೆದಿರೋ ರಾಹುಲ್​ಗೆ, ಚಿನ್ನಸ್ವಾಮಿ ಮೈದಾನದ ಆಳ-ಅಗಲ ಚನ್ನಾಗೇ ಗೊತ್ತಿದೆ. ಇಲ್ಲಿನ ಪಿಚ್​, ಪ್ಲೇಯಿಂಗ್​ ಕಂಡಿಷನ್​ ಬಗ್ಗೆ ಹೆಚ್ಚು ಅರಿವಿರೋ ರಾಹುಲ್​, ಹೋಮ್​​ಗ್ರೌಂಡ್​​ನಲ್ಲಿ ಉತ್ತಮ ಇನ್ನಿಂಗ್ಸ್​ ಕಟ್ಟಬೇಕಿದೆ. ಸಂಕಷ್ಟದಲ್ಲಿರೋ ವೇಳೆ ರಾಹುಲ್​, ಒಂದೊಳ್ಳೆ ಇನ್ನಿಂಗ್ಸ್​ ಕಟ್ಟಿದ್ರೆ, ಗೆಲುವಿನ ರೂವಾರಿಯಾಗಲಿದ್ದಾರೆ.
ರಿಷಭ್​ ಪಂತ್​ ಕಮ್​ಬ್ಯಾಕ್​ಗೆ ಪ್ರಾರ್ಥನೆ.!
2ನೇ ದಿನದಾಟದ ವೇಳೆ ಇಂಜುರಿಗೆ ತುತ್ತಾಗಿ ಮೈದಾನದಿಂದ ಹೊರಬಿದ್ದ ರಿಷಭ್​​ ಪಂತ್​, 3ನೇ ದಿನದಾಟದಲ್ಲಿ ಕಣಕ್ಕಿಳಿಯಲಿಲ್ಲ. ಆದ್ರೆ, ಇಂದು ಬ್ಯಾಟಿಂಗ್​ಗೆ ಆಗಮಿಸಿದ್ದು ಉತ್ತಮ ಲಯದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಸದ್ಯ ಟೀಮ್​ ಇಂಡಿಯಾ ಇರೋ ಸಿಚ್ಯುವೇಶನ್​ನಲ್ಲಿ ಪಂತ್​​ರ ಡೇರ್​ ಡೆವಿಲ್​​, ಆಟದ ಅಗತ್ಯತೆ ತಂಡಕ್ಕಿದೆ. ಫುಲ್​ ಫಿಟ್​ ಆಗಿ ಇಂದು ಪಂತ್​ ಬ್ಯಾಟಿಂಗ್​ಗೆ ಬರಲಿ ಅನ್ನೋದು ಫ್ಯಾನ್ಸ್​ ಪ್ರಾರ್ಥನೆಯಾಗಿದೆ.
/newsfirstlive-kannada/media/post_attachments/wp-content/uploads/2024/10/Sarfaraz-Khan-1.jpg)
ಬೇಕಿದೆ ಬಿಗ್​ ಪಾರ್ಟ್​ನರ್​ಶಿಪ್​ & 200+ ಲೀಡ್​.!
295 ರನ್​ಗಳಿಸಿರೋ ಟೀಮ್​ ಇಂಡಿಯಾ ಸದ್ಯ 61 ರನ್​ಗಳ ಹಿನ್ನಡೆಯಲ್ಲಿದೆ. ಹಿನ್ನಡೆಯನ್ನ ಮೀರಿ ಕನಿಷ್ಟ 200+ ರನ್​ಗಳ ಲೀಡ್​​ ಸಿಕ್ಕರಷ್ಟೇ ಗೆಲುವಿನ ಕನಸು ಚಿಗುರೊಡೆಯಲಿದೆ. ಹಾಗಗಬೇಕಂದ್ರೆ, ಬಿಗ್​ ಪಾರ್ಟ್​​ನರ್​ಶಿಪ್​ಗಳ ಅಗತ್ಯತೆ ಇದೆ. 3ನೇ ದಿನದಾಟದಲ್ಲಿ ಕೊಹ್ಲಿ-ಪಂತ್​ ಆಡಿದಂತೆ, ಉಳಿದ ಆಟಗಾರರು ಪಾರ್ಟ್​ನರ್​ಶಿಪ್​ಗಳನ್ನ ಬ್ಯುಲ್ಡ್​ ಮಾಡಬೇಕಿದೆ. ಆಗ ಮಾತ್ರ ಬಿಗ್​ ಸ್ಕೋರ್​ಗಳಿಸೋಕೆ ಸಾಧ್ಯ.
ಬೆಂಗಳೂರು ಟೆಸ್ಟ್​ ಪಂದ್ಯದ ರಿಸಲ್ಟ್​ ಇಂದಿನ ದಿನದಾಟದಲ್ಲಿ ಬಹುತೇಕ ನಿರ್ಧಾರವಾಗಲಿದೆ. ತವರಿನಲ್ಲಿ ಮಾನ ಉಳಿಸಿಕೊಳ್ಳೋ ಸವಾಲು ಟೀಮ್​ ಇಂಡಿಯಾ ಮುಂದಿದೆ. ಇವತ್ತಿನ ಆಟದಲ್ಲಿ ಸ್ವಲ್ಪ ಎಡವಟ್ಟಾದ್ರೂ, ಹೀನಾಯ ಸೋಲಿನ ಮುಖಭಂಗಕ್ಕೆ ಗುರಿಯಾಗಬೇಕಾಗುತ್ತೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us