/newsfirstlive-kannada/media/post_attachments/wp-content/uploads/2024/11/INDVSNZ_1-1.jpg)
ಪೇಪರ್ ಟೈಗರ್ಸ್ ಎಂಬ ಮಾತು ಇದೆಯಲ್ಲ, ಈ ಮಾತು ನ್ಯೂಜಿಲೆಂಡ್ ಎದುರು ಸೋತ ಟೀಮ್ ಇಂಡಿಯಾಗೆ ಸರಿಯಾಗಿ ಅನ್ವಯಿಸುತ್ತೆ. ಯಾಕಂದ್ರೆ, ಸೋತ ಟೀಮ್ ಇಂಡಿಯಾ, ಆನ್ ಪೇಪರ್ ನ್ಯೂಜಿಲೆಂಡ್ಗಿಂತ ಡಬಲ್ ಸ್ಟ್ರಾಂಗ್ ಇತ್ತು. ದಿಗ್ಗಜ ಆಟಗಾರರ ದಂಡೇ ತಂಡದಲ್ಲಿತ್ತು. ಹೋಮ್ನಲ್ಲೇ ನಾವೇ ಕಿಂಗ್ ಎಂಬ ರೆಕಾರ್ಡ್ ಇತ್ತು. ಆದ್ರೆ. ಇದೆಲ್ಲವೂ ಆನ್ಪೇಪರ್ಗೆ ಮಾತ್ರ ಸಿಮೀತವಾಗಿತ್ತು. ಆನ್ಫೀಲ್ಡ್ನಲ್ಲಿ ಆಟ ನಡೀಲಿಲ್ಲ.
ಹೀನಾಯ ವೈಫಲ್ಯ.. ತವರಿನಲ್ಲಿ ಟೀಮ್ ಇಂಡಿಯಾದ ಕ್ಲೀನ್ಸ್ವೀಪ್ ಮುಖಭಂಗ. ಟೀಮ್ ಇಂಡಿಯಾ ಅಭಿಮಾನಿಗಳಂತೂ ಕನಸಲ್ಲೂ ಊಹಿಸದ ಸೋಲಿದು. ಅಲ್ಲ ಅಲ್ಲ.. ತವರಿನಲ್ಲಾದ ಅತ್ಯಂತ ದೊಡ್ಡ ಅವಮಾನ.
ಇದನ್ನೂ ಓದಿ: 147 ರನ್ ಟಾರ್ಗೆಟ್ ಮುಟ್ಟಲಾಗದ ಟೀಮ್ ಇಂಡಿಯಾ.. ಸ್ವಲ್ಪ ಮಾನ ಉಳಿಸಿದ ರಿಷಬ್ ಪಂತ್!
ಬೆಂಗಳೂರು, ಪುಣೆಯಲ್ಲಿ ಸೋಲು ಕಂಡಿದ್ದ ಟೀಮ್ ಇಂಡಿಯಾ, ಮುಂಬೈನಲ್ಲಾದರೂ ಗೆದ್ದು ಮಾನ ಉಳಿಸಿಕೊಳ್ಳುತ್ತೆ ಎಂಬ ನಿರೀಕ್ಷೆ ಇತ್ತು. ಆದ್ರೆ, ಜಸ್ಟ್ 147 ರನ್‌ಗಳ ಗುರಿ ಬೆನ್ನಟ್ಟಲು ವಿಫಲವಾಗಿ ನ್ಯೂಜಿಲೆಂಡ್ ಮುಂದೆ ಶರಣಾಗಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರಿನಲ್ಲಿ ಮೊದಲ ವೈಟ್‌ವಾಷ್ ಮುಖಭಂಗ ಅನುಭವಿಸಿದೆ. ಈ ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಸೋಲಿಗೆ ಕಾರಣ ಏನು ಎಂಬ ಚರ್ಚೆ ಶುರುವಾಗಿದೆ.
ಕಾರಣ- ನಂ.1- 3 ಟೆಸ್ಟ್.. ಮೂರಂಕಿ ದಾಟಲಿಲ್ಲ ರೋಹಿತ್-ವಿರಾಟ್
ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಪ್ರಮುಖ ಕಾರಣ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ. ಸರಣಿಯುದ್ದಕ್ಕೂ ಪರದಾಡಿದ ಇವರು, ಬೆಂಗಳೂರು ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದು ಬಿಟ್ರೆ, ಉಳಿದ್ಯಾವ ಇನ್ನಿಂಗ್ಸ್ನಲ್ಲೂ ಪರ್ಫಾಮೆನ್ಸ್ ನೀಡಿಲ್ಲ. ಎಲ್ಲಾ ಇನ್ನಿಂಗ್ಸ್ ಸೇರಿ ಇವ್ರ ಸ್ಕೋರ್ 100ರ ಗಡಿದಾಡಲಿಲ್ಲ.
ಕಾರಣ- ನಂ.2; ಬಲವೇ ಇಲ್ಲದ ಮಿಡಲ್ ಆರ್ಡರ್
ಪ್ರವಾಸಿ ನ್ಯೂಜಿಲೆಂಡ್ ಇಂಡಿಯನ್ ಕಂಡೀಷನ್ಸ್ಗೆ ಒಗ್ಗಿಕೊಂಡು ಬ್ಯಾಟಿಂಗ್ ನಡೆಸ್ತು. ಟಾಪ್-3 ವೈಫಲ್ಯವಾದ್ರೆ, ಮಿಡಲ್ ಆರ್ಡರ್ನಲ್ಲಿ ವಿಲ್ ಯಂಗ್, ರಚಿನ್ ರವೀಂದ್ರ ತಂಡಕ್ಕೆ ಆಸರೆಯಾಗ್ತಿದ್ದರು. ಆದ್ರೆ, ಟೀಮ್ ಇಂಡಿಯಾ ಪರಿಸ್ಥಿತಿ ಭಿನ್ನವಾಗಿತ್ತು. ಸರ್ಫರಾಜ್ ಬೆಂಗಳೂರಿನ ಫ್ಲಾಟ್ ಪಿಚ್ನಲ್ಲಿ ಗಳಿಸಿದ 150 ಹೊರತು ಪಡೆಸಿದ್ರೆ, ನಮ್ಮ ಮಿಡಲ್ ಆರ್ಡರ್ ಬ್ಯಾಟರ್ಸ್ ಉಳಿದೆಲ್ಲ ಮ್ಯಾಚ್ಗಳಲ್ಲಿ ನಡೆಸಿದ್ದು ಪೆವಿಲಿಯನ್ ಪರೇಡ್..
ಕಾರಣ- ನಂ.3- ಅಶ್ವಿನ್-ಜಡೇಜಾರಿಂದ ಬರಲಿಲ್ಲ ನಿರೀಕ್ಷಿತ ಪ್ರದರ್ಶನ
ಇಂಡಿಯನ್ ಕಂಡೀಷನ್ಸ್ ಅಲ್ಲಿ ಆಲ್ರೌಂಡರ್ಗಳಾದ ಅಶ್ವಿನ್, ರವೀಂದ್ರ ಜಡೇಜಾ ಮ್ಯಾಚ್ ವಿನ್ನರ್ಸ್. ಇವರ ಸ್ಪಿನ್ ಮೋಡಿಗೆ ಭಾರತದ ನೆಲದಲ್ಲಿ ಲೆಂಜಡರಿ ಬ್ಯಾಟ್ಸ್ಮನ್ಗಳೇ ಹೆಣಗಾಡಿದ್ದಾರೆ. ಆದ್ರೆ, ಈ ಸರಣಿಯಲ್ಲಿ ಆರ್.ಅಶ್ವಿನ್, ವಿಕೆಟ್ ಪಡೆಯಲು ಪರದಾಡಿದರು. ಸರಣಿಯಲ್ಲಿ ಅಶ್ವಿನ್ ಜಸ್ಟ್ 9 ವಿಕೆಟ್ ಪಡೆದರು. ಇನ್ನು ಆಲ್ರೌಂಡರ್ ಜಡೇಜಾ ಕೊನೆ ಟೆಸ್ಟ್ನಲ್ಲಿ 10 ವಿಕೆಟ್ ಉರುಳಿಸಿದ್ದು ಬಿಟ್ರೆ, ಮೊದಲ 2 ಪಂದ್ಯದಲ್ಲಿ, ಆಟಕ್ಕಿದ್ರೂ, ಲೆಕ್ಕಕ್ಕಿರಲಿಲ್ಲ.
ಕಾರಣ- ನಂ.4- ನಾಯಕನಾಗಿ ರೋಹಿತ್ ಶರ್ಮಾ ಫೇಲ್ಯೂರ್..!
ನ್ಯೂಜಿಲೆಂಡ್ ಎದುರಿನ ಸರಣಿಯಲ್ಲೂ ರೋಹಿತ್, ಕ್ಲೂ ಲೆಸ್ ಕ್ಯಾಪ್ಟನ್ ಕ್ಯಾಪ್ಟನ್ ಆಗಿದ್ರು. ಆನ್ ಫೀಲ್ಡ್ನಲ್ಲಿ ನಾಯಕನಾಗಿ ಡಿಸಿಷನ್ ತೆಗೆದುಕೊಳ್ಳೋದ್ರಲ್ಲಿ ಎಡವಿದ್ದ ರೋಹಿತ್, ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲೂ ಪ್ರಮಾದ ಮಾಡಿದರು. ಪುಣೆ ಹಾಗೂ ಮುಂಬೈನಲ್ಲಿ ಟರ್ನಿಂಗ್ ಟ್ರ್ಯಾಕ್ನಲ್ಲಿ ನಾಲ್ವರು ಸ್ಪಿನ್ನರ್ಗಳು ಕಣಕ್ಕಿಳಿಸಿದ್ರೆ ತಂಡಕ್ಕೆ ಪ್ಲಸ್ ಪಾಯಿಂಟ್ ಆಗ್ತಿತ್ತು. ಆದ್ರೆ, ಆಯ್ಕೆಯಲ್ಲೇ ಎಡವಿದ್ರು. ಜೊತೆಗೆ ಬೆಂಗಳೂರಿನ ಟೆಸ್ಟ್ ವೈಫಲ್ಯ ನೋಡಿ ಅನುಭವಿ ಕೆ.ಎಲ್.ರಾಹುಲ್ಗೆ ಕೊಕ್ ನೀಡಿದ್ದೂ ಸೋಲಿಗೆ ಕಾರಣವಾಯಿತು.
ಇದನ್ನೂ ಓದಿ:IND vs NZ; ಕಿವೀಸ್ಗೆ 25 ರನ್‌ಗಳ ಗೆಲುವು.. ಟೀಮ್ ಇಂಡಿಯಾ ವೈಟ್ ವಾಶ್
ನನ್ನ ನಿರ್ಧಾರಗಳು ಸರಿ ಇರಲಿಲ್ಲ. ಬೆಂಗಳೂರು ಪಿಚ್ನಲ್ಲಿ ಬ್ಯಾಟಿಂಗ್ ನಿರ್ಣಯ ಸರಿ ಇರಲಿಲ್ಲ. ಕೆಲವೊಂದು ಟ್ಯಾಕ್ಟಿಕಲ್ ತಪ್ಪಾಗಿವೆ. ನಾವು ಕೆಲವೊಂದು ಚಾನ್ಸ್ ತೆಗೆದುಕೊಳ್ಳಬಹುದಿತ್ತು. ಈ ಹಾದಿಯಲ್ಲಿ ಕೆಲವೊಂದು ನಿರ್ಧಾರ ನಾನೇ ಮಾಡಿದೆ. ನಾನು ನಾಯಕನಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಲಿಲ್ಲ. ಇದರಿಂದ ಸರಣಿಯಲ್ಲಿ ಬೆಲೆ ತೆರಬೇಕಾಯಿತು.
ರೋಹಿತ್ ಶರ್ಮಾ, ನಾಯಕ
ಕಾರಣ- ನಂ.5- ಕೈ ಕೊಟ್ಟ ಸ್ಪಿನ್ ಟು ವಿನ್ ಸೂತ್ರ..!
ಸ್ಪಿನ್ ಟು ವಿನ್ ಸೂತ್ರ ಟೀಮ್ ಇಂಡಿಯಾಗೆ ಕೈಕೊಟ್ಟಿತು. ಸ್ಪಿನ್ನಲ್ಲೇ ನ್ಯೂಜಿಲೆಂಡ್ನ ಕಟ್ಟಿ ಹಾಕುವ ಲೆಕ್ಕಾಚಾರದಲ್ಲಿದ್ದ ಟೀಮ್ ಇಂಡಿಯಾ, ಪುಣೆ ಹಾಗೂ ಮುಂಬೈನಲ್ಲಿ ಸ್ಪಿನ್ ಟ್ರ್ಯಾಕ್ಗೆ ಒತ್ತು ನೀಡಿತು. ಆದ್ರೆ, ಇಲ್ಲಿ ಬಲ ಪ್ರದರ್ಶನ ಮಾಡಬೇಕಿದ್ದ ಬ್ಯಾಟರ್ಗಳು, ಪೆವಿಲಿಯನ್ ಪರೇಡ್ ನಡೆಸಿದರು. ಪುಣೆಯಲ್ಲಿ 18 ವಿಕೆಟ್ ಸ್ಪಿನ್ನರ್ಗಳಿಗೆ ನೀಡಿದ್ರೆ. ಮುಂಬೈನಲ್ಲಿ 16 ವಿಕೆಟ್ ಸ್ಪಿನ್ಗೆ ಬಲಿಯಾದರು. ಪರಿಣಾಮ ತವರಿನಲ್ಲೇ ವೈಟ್ವಾಶ್ ಮುಖಭಂಗಕ್ಕೆ ಗುರಿಯಾಗುವಂತೆ ಆಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ