/newsfirstlive-kannada/media/post_attachments/wp-content/uploads/2025/03/MS-DHONI-RUN-OUT.jpg)
ಚಾಂಪಿಯನ್ಸ್​ ಟ್ರೋಫಿ ಫೈನಲ್​ಗೆ ನ್ಯೂಜಿಲೆಂಡ್​ ಎಂಟ್ರಿ ಕೊಟ್ಟಿದೆ. ಕಿವೀಸ್ ಕಣ್ಣು ಪ್ರಶಸ್ತಿ ಗೆಲುವಿನತ್ತ ನಟ್ಟಿದೆ. ಐಸಿಸಿ ಟೂರ್ನಿಗಳಲ್ಲಿ ಖತರ್ನಾಕ್ ಪ್ರದರ್ಶನ ನೀಡುವ ನ್ಯೂಜಿಲೆಂಡ್, ಟೀಮ್ ಇಂಡಿಯಾ ವಿರುದ್ಧವೂ ಗೆಲ್ಲುವ ವಿಶ್ವಾಸದಲ್ಲಿದೆ.
ನ್ಯೂಜಿಲೆಂಡ್ ವಿಶ್ವಕ್ರಿಕೆಟ್​​ನ ಬಲಿಷ್ಟ ತಂಡಗಳಲ್ಲಿ ಒಂದು. ಅದು ಯಾವುದೇ ಫಾರ್ಮೆಟ್ ಇರಲಿ, ಕಿವೀಸ್ ಎದುರಾಳಿಗಳ ನಿದ್ದೆಗೆಡಿಸುತ್ತೆ. ಅದ್ರಲ್ಲೂ ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್​​ ತಂಡಕ್ಕೆ ಸರಿಸಾಟಿ ಯಾರೂ ಇಲ್ಲ. ಎದುರಾಳಿಗಳನ್ನ ಮಟ್ಟಹಾಕಿ, ಗೆಲುವಿನ ಕೇಕೆ ಹಾಕುತ್ತೆ. ಇದಕ್ಕೆ ಟೀಮ್ ಇಂಡಿಯಾ ವಿರುದ್ಧ ನಡೆದ ಆ ಮೂರು ಪಂದ್ಯಗಳೇ ಎಕ್ಸಾಂಪಲ್.
2019, ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲು
ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿ ನಡೆದ ಆ ಸೆಮಿಫೈನಲ್ ಪಂದ್ಯ ಯಾರು ತಾನೇ ಮರೆಯೋಕೆ ಸಾಧ್ಯ ಹೇಳಿ. ತಂಡವನ್ನ ಗೆಲುವಿನತ್ತ ಕೊಂಡೊಯ್ತಿದ್ದ ಧೋನಿಯ ‘ಓಟ’ಕ್ಕೆ ಬ್ರೇಕ್ ಹಾಕಿದ್ದೇ ಕಿವೀಸ್. 239 ರನ್​ಗಳನ್ನ ಡಿಫೆಂಡ್ ಮಾಡಿಕೊಂಡ ನ್ಯೂಜಿಲೆಂಡ್, ಟೀಮ್ ಇಂಡಿಯಾವನ್ನ ವಿಶ್ವಕಪ್​ನಿಂದ ಕಿಕ್​ ಔಟ್ ಮಾಡಿತು.
ಇದನ್ನೂ ಓದಿ: ಈ ದೇಶದ ಯುವತಿಯರಿಗೆ ಈ ಹಣೆಪಟ್ಟಿ ಬೀಳುತ್ತೆ.. ಲೆಫ್ಟ್​ ಓವರ್, ಹೀಗಂದ್ರೆ ಏನು?
/newsfirstlive-kannada/media/post_attachments/wp-content/uploads/2025/03/Rohit-sharma-6.jpg)
2021, T20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾಕ್ಕೆ ಶಾಕ್
ದುಬೈನಲ್ಲಿ ನಡೆದ T20 ವಿಶ್ವಕಪ್​ ಗ್ರೂಪ್​​ ಸ್ಟೇಜ್​ನಲ್ಲಿ ಕಿವೀಸ್​​​ ಟೀಮ್ ಇಂಡಿಯಾಗೆ ಶಾಕಿಂಗ್ ರಿಸಲ್ಟ್ ನೀಡ್ತು. ಟೀಮ್ ಇಂಡಿಯಾವನ್ನ ಕೇವಲ 110 ರನ್​ಗಳಿಗೆ ಕಟ್ಟಿಹಾಕಿದ ಕಿವೀಸ್, ಮೆನ್-ಇನ್-ಬ್ಲೂ ಪಡೆಯನ್ನ ವಿಶ್ವಕಪ್​ನಿಂದಲೇ ಹೊರದಬ್ಬಿತು. ಆ ಸೋಲನ್ನ ಕ್ರಿಕೆಟ್ ಅಭಿಮಾನಿಗಳು, ಇಂದಿಗೂ ಅಗರಿಸಿಕೊಳ್ಳಲು ಸಾಧ್ಯವಾಗ್ತಿಲ್ಲ.
2021, WTC​​ ಫೈನಲ್ಸ್​ನಲ್ಲಿ ಮುಖಭಂಗ​​
ನಾವೇ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್ ಗೆಲ್ಲೋ ಫೇವರಿಟ್ಸ್ ಅಂತ ಸೌತ್​ ಹ್ಯಾಂಪ್ಟನ್​ಗೆ ಕಾಲಿಟ್ಟ ಟೀಮ್ ಇಂಡಿಯಾಕ್ಕೆ, ಭಾರೀ ಮುಖಭಂಗ ಉಂಟಾಯ್ತು. ಸ್ವಿಂಗ್ ಌಂಡ್ ಸೀಮಿಂಗ್ ಕಂಡೀಷನ್ಸ್​ನಲ್ಲಿ ನ್ಯೂಜಿಲೆಂಡ್ ವೇಗಿಗಳು, ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನ ಗಿರಿಗಿಟ್ಲೆ ಆಡಿಸಿಬಿಟ್ರು. ಪರಿಣಾಮ, ಚೊಚ್ಚಲ ವರ್ಲ್ಡ್ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್ಸ್​ನಲ್ಲಿ, 8 ವಿಕೆಟ್​ಗಳ ಹೀನಾಯ ಸೋಲು.​
ಪ್ರಸಕ್ತ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ, ಲೀಗ್​ ಸ್ಟೇಜ್​ನಲ್ಲಿ ನ್ಯೂಜಿಲೆಂಡ್ ತಂಡವನ್ನ ಸೋಲಿಸಿದೆ. ಆ ಮೂರೂ ಪ್ರಮುಖ ಪಂದ್ಯಗಳ ಸೋಲು, ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನೂ ಇನ್ನೂ ಕಾಡ್ತಿದೆ. ನ್ಯೂಜಿಲೆಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್​​ ಗೆದ್ದರೆ ಮಾತ್ರ ಅಭಿಮಾನಿಗಳು ಆ ನೋವನ್ನ ಮರೆಯಲು ಸಾಧ್ಯ.
ಇದನ್ನೂ ಓದಿ: ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us