/newsfirstlive-kannada/media/post_attachments/wp-content/uploads/2025/03/Shreyas-iyer-2.jpg)
ಸತತ 2 ಪಂದ್ಯ ಗೆದ್ದ ಆತ್ಮವಿಶ್ವಾಸದಲ್ಲಿ ಅಲೆಯಲ್ಲಿ ತೇಲ್ತಿದ್ದ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳಿಗೆ ನಿನ್ನೆ ಕಿವೀಸ್​ ಪಡೆ ಶಾಕ್​ ಟ್ರೀಟ್​ಮೆಂಟ್​ ಕೊಡ್ತು. ದುಬೈ ಅಂಗಳಲ್ಲಿ ನ್ಯೂಜಿಲೆಂಡ್​ ಬೌಲರ್​ಗಳ ದಾಳಿಗೆ ಇಂಡಿಯನ್​ ಬ್ಯಾಟರ್ಸ್​ ಪರದಾಡಿದ್ರು. ಇದ್ರ ನಡುವೆ ಹೋರಾಟ ನಡೆಸಿದ ಶ್ರೇಯಸ್​ ಅಯ್ಯರ್​, ಅಕ್ಷರ್ ಪಟೇಲ್​​, ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾ ಮಾನ ಉಳಿಸಿದ್ರು.
ಶರ್ಮಾ, ಗಿಲ್​, ಕೊಹ್ಲಿ ಶಾಕ್
ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ ಆರಂಭದಲ್ಲಿ ಆಘಾತದ ಮೇಲೆ ಆಘಾತ ಎದುರಿಸಿತು. ತಂಡ 22 ರನ್​ಗಳಿಸುವಷ್ಟರಲ್ಲೇ ಓಪನರ್ಸ್​​​ ಪೆವಿಲಿಯನ್​ ಸೇರಿದ್ರು. ಕ್ಯಾಪ್ಟನ್​ ರೋಹಿತ್​ ಶರ್ಮಾ 15 ರನ್​ಗಳಿಸಿ ಔಟಾದ್ರೆ, ಶುಭ್​ಮನ್​ ಗಿಲ್​ ಆಟ 7 ರನ್​ಗಳಿಗೆ ಅಂತ್ಯವಾಯ್ತು. ಆಘಾತ ಕಂಡಿದ್ದ ತಂಡಕ್ಕೆ ವಿರಾಟ್​ ಕೊಹ್ಲಿ ಕೂಡ ಆಸರೆಯಾಗಲಿಲ್ಲ. ಗ್ಲೇನ್​ ಫಿಲಿಪ್ಸ್​ ಹಿಡಿದ ಸ್ಟನ್ನಿಂಗ್​ ಕ್ಯಾಚ್​​ಗೆ ವಿರಾಟ್​ ಕೊಹ್ಲಿ ಹೌಹಾರಿದ್ರು.
ಇದನ್ನೂ ಓದಿ: ಕಲ್ಲಂಗಡಿ ಹಣ್ಣು, ಕರ್ಬೂಜ.. ಸಕ್ಕರೆ ಕಾಯಿಲೆಗೆ ಎರಡರಲ್ಲಿ ಯಾವ ಹಣ್ಣು ಉತ್ತಮ? ತಜ್ಞರು ಏನು ಹೇಳುತ್ತಾರೆ?
/newsfirstlive-kannada/media/post_attachments/wp-content/uploads/2025/03/Shreyas-iyer-2.jpg)
ಆಸರೆಯಾದ ಶ್ರೇಯಸ್, ಅಕ್ಷರ್
4ನೇ ವಿಕೆಟ್​ಗೆ ಕ್ರಿಸ್​ನಲ್ಲಿ ಜೊತೆಯಾದ ಶ್ರೇಯಸ್​​ ಅಯ್ಯರ್​ - ಅಕ್ಷರ್​ ಪಟೇಲ್​ ನ್ಯೂಜಿಲೆಂಡ್ ಪಾರಮ್ಯಕ್ಕೆ ಬ್ರೇಕ್​ ಹಾಕಿದ್ರು. ತಾಳ್ಮೆ ಹಾಗೂ ಎಚ್ಚರಿಕೆಯ ಆಟದಿಂದಲೇ ಕಿವೀಸ್​ ಕಿವಿ ಹಿಂಡಿದ್ರು. ಸಂದರ್ಭಕ್ಕೆ ತಕ್ಕಂತೆ ಇನ್ನಿಂಗ್ಸ್​ ಕಟ್ಟಿದ ಈ ಜೋಡಿ 98 ರನ್​ಗಳ ಜೊತೆಯಾಟವಾಡಿದ್ರು. 61 ಎಸೆತಗಳನ್ನ ಎದುರಿಸಿದ ಅಕ್ಷರ್​ ಪಟೇಲ್ 3 ಬೌಂಡರಿ, 1 ಸಿಕ್ಸರ್​ ಸಿಡಿಸಿದ್ರು. ನ್ಯೂಜಿಲೆಂಡ್​ ಬೌಲರ್​ಗಳಿಗೆ ಸಖತ್​​​ ಕಾಟ ಕೊಟ್ಟ ಅಕ್ಷರ್​ 42 ರನ್​ಗಳಿಸಿ ಔಟಾದ್ರು.
ಶ್ರೇಯಸ್​​ ಅಯ್ಯರ್​ ದುಬೈ ಅಂಗಳದಲ್ಲಿ ಮತ್ತೊಮ್ಮೆ ಶೈನಿಂಗ್​ ಪರ್ಫಾಮೆನ್ಸ್​ ನೀಡಿದ್ರು. 4 ಬೌಂಡರಿ, 2 ಸಿಕ್ಸರ್​​ಗಳನ್ನ ಸಿಡಿಸಿದ ಶ್ರೇಯಸ್​ ಕುಸಿದ ಟೀಮ್​ ಇಂಡಿಯಾಗೆ ಆಸರೆಯಾದ್ರು. ತಾಳ್ಮೆಯ ಆಟವಾಡಿದ ಶ್ರೇಯಸ್​ ಎದುರಿಸಿದ 75ನೇ ಎಸೆತಕ್ಕೆ ಅರ್ಧಶತಕ ಪೂರೈಸಿದ್ರು.
ಅರ್ಧಶತಕದ ಬಳಿಕ ಬಿರುಸಿನ ಆಟವಾಡಿದ ಶ್ರೇಯಸ್​ ಶತಕದ ಹಾದಿಯಲ್ಲಿ ಎಡವಿದ್ರು. 98 ಎಸೆತ ಎದುರಿಸಿದ ಶ್ರೇಯಸ್​​​ 79 ರನ್​ಗಳಿಸಿದ್ರು. ಬಳಿಕ ಕಣಕ್ಕಿಳಿದ ಕೆ.ಎಲ್​ ರಾಹುಲ್​ ಅಲ್ಪ ಕಾಣಿಕೆ ನೀಡಿದ್ರು. 1 ಬೌಂಡರಿ ಬಾರಿಸಿದ ರಾಹುಲ್​ ಆಟ 23 ರನ್​ಗಳಿಗೆ ಅಂತ್ಯವಾಯ್ತು. ಆಲ್​​ರೌಂಡರ್​ ರವಿಂದ್ರ ಜಡೇಜಾ 16 ರನ್​ಗಳಿಸಿದ್ದ ವೇಳೆ ಕೇನ್​ ವಿಲಿಯಮ್ಸನ್ ಹಿಡಿದ ಅತ್ಯಾದ್ಭುತ ಕ್ಯಾಚ್​ಗೆ ಬಲಿಯಾದ್ರು.
ಹಾರ್ದಿಕ್​ ಏಕಾಂಗಿ ಹೋರಾಟ
ಅಂತಿಮ ಹಂತದಲ್ಲಿ ಏಕಾಂಗಿ ಹೋರಾಟ ನಡೆಸಿದ ಹಾರ್ದಿಕ್​ ಪಾಂಡ್ಯ 45 ರನ್​ಗಳಿಸಿದ್ರು. 4 ಬೌಂಡರಿ, 2 ಸಿಕ್ಸರ್​ ಚಚ್ಚಿ ಅಂತಿಮ ಓವರ್​​ಗಳಲ್ಲಿ ತಂಡದ ಮೊತ್ತ ಹೆಚ್ಚಿಸಿದ್ರು. 49.3ನೇ ಎಸೆತದಲ್ಲಿ ಹಾರ್ದಿಕ್​ ಪಾಂಡ್ಯ ಔಟಾದ್ರೆ, ಇನ್ನಿಂಗ್ಸ್​ನ ಕೊನೆ ಬಾಲ್​ನಲ್ಲಿ ಮೊಹಮ್ಮದ್​ ಶಮಿ ವಿಕೆಟ್ ಒಪ್ಪಿಸಿದ್ರು. ಇದ್ರೊಂದಿಗೆ ವೇಗಿ ಮ್ಯಾಟ್​ ಹೆನ್ರಿ 5 ವಿಕೆಟ್​ ಕಬಳಿಸಿದ ಸಾಧನೆ ಮಾಡಿದ್ರು.
50 ಓವರ್​​ಗಳ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 249 ರನ್​ಗಳಿಸಿತು. ಕಿವೀಸ್​ ಪರ ಮ್ಯಾಟ್​ ಹೆನ್ರಿ 5 ವಿಕೆಟ್​ ಬೇಟೆಯಾಡಿದ್ರೆ, ಕೈಲ್​ ಜೆಮಿಸನ್​, ವಿಲಿಯಮ್ ರೂರ್ಕ್​​, ಮಿಚೆಲ್​ ಸ್ಯಾಂಟ್ನೆರ್​ ಹಾಗೂ ರಚಿನ್​ ರವಿಂದ್ರ ತಲಾ 1 ವಿಕೆಟ್​ ಬೇಟೆಯಾಡಿದ್ರು.
ಇದನ್ನೂ ಓದಿ: ಕರಾವಳಿಗೆ ಮತ್ತೆ ಉಷ್ಣ ಅಲೆ ಎಚ್ಚರಿಕೆ; ಕಾರವಾರದಲ್ಲಿ ಗರಿಷ್ಠ ತಾಪಮಾನ ದಾಖಲು
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us