ರೋಹಿತ್ ಪಡೆಗೆ ಭಾರೀ ಮುಖಭಂಗ; ಸೊನ್ನೆ ಸುತ್ತಿದ 5 ಬ್ಯಾಟ್ಸ್​ಮನ್, ಕೇವಲ 46 ರನ್​ಗೆ ಎಲ್ಲಾ ವಿಕೆಟ್ ಢಮಾರ್..!

author-image
Ganesh
Updated On
MCA ಅಧಿಕಾರಿಗಳಿಂದ ಶಾಕಿಂಗ್ ಹೇಳಿಕೆ; ಗೊಂದಲದಲ್ಲಿ ಟೀಂ ಇಂಡಿಯಾ..!
Advertisment
  • ಪಂತ್, ಜೈಸ್ವಾಲ್ ಬಿಟ್ಟರೆ ಯಾರೂ ಎರಡಂಕಿ ದಾಟಲಿಲ್ಲ
  • ಆರ್​. ಅಶ್ವಿನ್ ಗೋಲ್ಡನ್ ಡಕ್​ ಆಗಿ ಕೆಟ್ಟ ದಾಖಲೆ
  • ಮಳೆಯಿಂದಾಗಿ ಭಾರತಕ್ಕೆ ಹಿನ್ನಡೆ ಆಗೋಯ್ತಾ?

ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಭಾರತಕ್ಕೆ ಭಾರೀ ಮುಖಭಂಗ ಆಗಿದೆ. ಟೀಂ ಇಂಡಿಯಾದ ಐದು ಬ್ಯಾಟ್ಸ್​​ಮನ್​​ಗಳು ಸೊನ್ನೆ ಸುತ್ತಿ, ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ನ್ಯೂಜಿಲೆಂಡ್ ಬೌಲರ್ಸ್ ವಿರುದ್ಧ ಆಡಲು ಪರದಾಡಿದ್ದು, ಪಂತ್ ಮತ್ತು ಜೈಸ್ವಾಲ್ ಬಿಟ್ಟರೆ ಯಾವೊಬ್ಬ ಬ್ಯಾಟ್ಸ್​​ಮನ್ ಕೂಡ ಎರಡಂಕಿ ದಾಟಲಿಲ್ಲ. ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಆರ್​. ಅಶ್ವಿನ್ ಒಂದೇ ಒಂದು ರನ್​ ಗಳಿಸಿದೇ ಔಟ್ ಆಗಿದ್ದಾರೆ. ಅದರಲ್ಲೂ ಆರ್ ಅಶ್ವಿನ್ ಗೋಲ್ಡನ್ ಡಕ್ ಆಗಿ ಕೆಟ್ಟ ದಾಖಲೆ ಬರೆದರು.

ಇದನ್ನೂ ಓದಿ:2, 0, 0 ಇದು ಟಾಪ್ ಆರ್ಡರ್ ಬ್ಯಾಟ್ಸ್​ಮನ್​​ಗಳು​ ಗಳಿಸಿದ ಸ್ಕೋರ್; ಟೀಂ ಇಂಡಿಯಾಗೆ ದೊಡ್ಡ ಆಘಾತ..!

ಯಶಸ್ವಿ ಜೈಸ್ವಾಲ್ 13, ರೋಹಿತ್ ಶರ್ಮಾ 2, ರಿಷಬ್ ಪಂತ್ 20, ಬೂಮ್ರಾ 1, ಕುಲ್ದೀಪ್ ಯಾದವ್ 2, ಸಿರಾಜ್ 4 ರನ್​ಗಳಿಸಿದರು. ಪರಿಣಾಮ 28.6 ಓವರ್​ಗಳನ್ನು ಆಡಿರುವ ಭಾರತ 46 ರನ್​ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ. ನ್ಯೂಜಿಲೆಂಡ್ ಪರ ಹೆನ್ಸಿ 5 ಹಾಗೂ ವಿಲಿಯಮ್ 4 ವಿಕೆಟ್ ಪಡೆದುಕೊಂಡರೆ, ಟಿಮ್ ಸೌಥಿ ಒಂದು ವಿಕೆಟ್ ಕಿತ್ತರು.

ಇದನ್ನೂ ಓದಿ:ಸಂಜು ಸ್ಯಾಮ್ಸನ್ ಸಿಕ್ಸರ್‌ಗೆ ದಾಖಲೆಗಳು ಉಡೀಸ್‌.. ಟೀಂ ಇಂಡಿಯಾ ಹೊಸ ಇತಿಹಾಸ ಸೃಷ್ಟಿ; ಏನದು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment