Advertisment

ಟಿ-20 ವಿಶ್ವಕಪ್​, ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತ ಕೌರ್ ಪಡೆ

author-image
Ganesh
Updated On
ಟಿ-20 ವಿಶ್ವಕಪ್​, ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತ ಕೌರ್ ಪಡೆ
Advertisment
  • ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಭಾರತಕ್ಕೆ ಸೋಲು
  • ದುಬೈನಲ್ಲಿ ನಡೀತಿರುವ ವಿಶ್ವಕಪ್​ ಟೂರ್ನಿ
  • ನಾಳೆ ಪಾಕಿಸ್ತಾನದ ವಿರುದ್ಧ ಭಾರತ ಸೆಣಸಾಟ

ಮಹಿಳಾ ಟಿ-20 ವಿಶ್ವಕಪ್​​ನಲ್ಲಿ ಭಾರತಕ್ಕೆ ಹೀನಾಯ ಸೋಲಾಗಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್​ ತಂಡವನ್ನು ಹರ್ಮನ್ ಪ್ರೀತ್ ಕೌರ್ ಪಡೆ ಎದುರಿಸಿತ್ತು.

Advertisment

ಟಾಸ್​ ಗೆದ್ದು ಬ್ಯಾಟ್ ಮಾಡಿದ ನ್ಯೂಜಿಲೆಂಡ್, 20 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 160 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ 19 ಓವರ್​ಗೆ ಎಲ್ಲಾ ವಿಕೆಟ್ ಕಳೆದುಕೊಂಡು 102 ರನ್​ಗಳಿಸಿ 58 ರನ್​​ಗಳ ಅಂತರದಿಂದ ಸೋಲಿಗೆ ಶರಣಾಯ್ತು.
ಟೀಂ ಇಂಡಿಯಾ ಪರ ಸ್ಮೃತಿ ಮಂದಾನ 12, ಕ್ಯಾಪ್ಟನ್ ಕೌರ್ 15, ಜೆಮೈ ರೋಡ್ರಿಗೆಸ್​ 13, ರಿಚಾ ಘೋಷ್ 12, ದೀಪ್ತಿ ಶರ್ಮಾ 13 ರನ್​ಗಳಿಸಿದರು. ಟಾಪ್ ಆರ್ಡರ್ ಬ್ಯಾಟರ್ಸ್​ ವೈಫಲ್ಯದಿಂದ ಭಾರತ ತಂಡ ಮೊದಲ ಪಂದ್ಯವನ್ನು ಸೋಲಬೇಕಾಯಿತು.

ಇದನ್ನೂ ಓದಿ:ಜೈಸ್ವಾಲ್ ಆಯ್ಕೆಗೆ ಮುಳ್ಳಾಗಿತ್ತು ಅಗ್ರೆಸ್ಸಿವ್ ಬ್ಯಾಟಿಂಗ್​​! ತಂಡದ ಆಯ್ಕೆಗೆ ಚಕಾರ ಬಂದಿದ್ದೇಕೆ ಗೊತ್ತೇ?

publive-image

ರೇಣುಕಾ ಸಿಂಗ್ 2 ವಿಕೆಟ್ ಪಡೆದುಕೊಂಡರು. ಅರುಂಧತಿ ರೆಡ್ಡಿ ಹಾಗೂ ಶೋಭನಾ ತಲಾ ಒಂದು ವಿಕೆಟ್ ಪಡೆದುಕೊಂಡರು. ಶ್ರೇಯಾಂಕಾ ಪಾಟೀಲ್ ಯಾವುದೇ ವಿಕೆಟ್ ಪಡೆದುಕೊಂಡಿರಲಿಲ್ಲ. ನಾಳೆ ಪಾಕಿಸ್ತಾನದ ವಿರುದ್ಧ ಪಂದ್ಯ ನಡೆಯಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment