/newsfirstlive-kannada/media/post_attachments/wp-content/uploads/2024/10/M-CHINNASWAMY.jpg)
ನಾಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ನಡುವೆ ಮೊದಲ ಟೆಸ್ಟ್​ ಪಂದ್ಯ ನಡೆಯಲಿದೆ. ಆದರೆ ನಾಳೆ ನಡೆಯುವ ಟೆಸ್ಟ್​ ಪಂದ್ಯವು ರದ್ದಾದರೂ ಅಚ್ಚರಿ ಇಲ್ಲ.
ಬಂಗಾಳ ಕೊಲ್ಲೆಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಭಾರೀ ಮಳೆಯಾಗುತ್ತಿದೆ. ನಾಳೆಯೂ ಕೂಡ ಇದೇ ರೀತಿ ಮಳೆ ಬಂದರೆ ಪಂದ್ಯ ನಡೆಸೋದು ಕಷ್ಟ. ಇಂದು ಎರಡು ತಂಡಗಳು ಅಭ್ಯಾಸ ನಡೆಸಬೇಕಿತ್ತು. ಆದರೆ ಮಳೆಯಿಂದಾಗಿ ಅಭ್ಯಾಸ ಪಂದ್ಯವು ರದ್ದಾಗಿದೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ ಕೆಂಗಣ್ಣಿಗೆ ಗುರಿಯಾಗಿದ್ದ ಈ ನಿಯಮವನ್ನು ರದ್ದು ಮಾಡಿದ ಬಿಸಿಸಿಐ, ಆದರೆ..!
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ.. ಅಕ್ಟೋಬರ್ 18ವರೆಗೆ ಬೆಂಗಳೂರಲ್ಲಿ ಮಳೆ ಬರುವ ನಿರೀಕ್ಷೆ ಇದೆ ಎಂದು ಎಚ್ಚರಿಕೆ ನೀಡಿದೆ. ಹೀಗಾಗಿ ನಾಳೆ ನಡೆಯುವ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ.
ಟೀಂ ಇಂಡಿಯಾ: ಕೆ.ಎಲ್.ರಾಹುಲ್, ರೋಹಿತ್ ಶರ್ಮಾ (ಕ್ಯಾಪ್ಟನ್), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ಧ್ರುವ ಜುರೇಲ್, ರಿಷಬ್ ಪಂತ್, ಆಕಾಶ್ ದೀಪ್, ಜಸ್​ಪ್ರೀತ್ ಬೂಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಸರ್ಫರಾಜ್ ಖಾನ್, ರವಿಚಂದ್ರನ್ ಅಶ್ವಿನ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us