newsfirstkannada.com

ಕ್ಯಾಪ್ಟನ್​ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸೋಱರು.. ಶುಭ್​ಮನ್​ ಗಿಲ್ ಬದಲಿಗೆ ಇಶನ್​ಗೆ ಚಾನ್ಸ್​ ಕೊಡ್ತಾರಾ?

Share :

Published September 2, 2023 at 12:00pm

  ಪಾಕ್​​​​ ಬೇಟೆಗೆ ಟೀಮ್ ಇಂಡಿಯಾ ಸರ್ವ ಸನ್ನದ್ಧ..!

  ಸೂರ್ಯಕುಮಾರ್- ತಿಲಕ್ ವರ್ಮಾ ಕಥೆ ಏನು..?

  ಏಷ್ಯಾಕಪ್​​​​​​​​​​ ವಾರ್​​ನಲ್ಲಿ ಇಂಡೋ-ಪಾಕ್​​​​​​​​​​ ಸೆಣಸಾಟ

ಬುಧವಾರ ಏಷ್ಯಾಕಪ್​​​​​​ಗೆ ಅಧಿಕೃತ ಚಾಲನೆ ಸಿಕ್ಕಿದೆ ನಿಜ. ಆದ್ರೆ ಟೂರ್ನಿಗೆ ಅಸಲಿ ಕಿಕ್​ಸ್ಟಾರ್ಟ್​​​​​ ಸಿಗೋದೆ ಇಂದಿನಿಂದ. ಬದ್ಧವೈರಿ ಭಾರತ-ಪಾಕಿಸ್ತಾನ ತಂಡಗಳು ಏಷ್ಯಾ ಕದನದಲ್ಲಿ ತೊಡೆಟ್ಟಲು ಸಜ್ಜಾಗಿವೆ. ಇಂದಿನ ಕ್ರಿಕೆಟ್​ ವಾರ್​​ನಲ್ಲಿ ಮೆನ್​​ ಇನ್​​ ಬ್ಲೂ ಪಡೆಯ ಪ್ಲೇಯಿಂಗ್​ -11 ಹೇಗಿರುತ್ತೆ. ಭಾರತದ ತಂತ್ರಕ್ಕೆ ಪಾಕ್​​​ ಪ್ರತಿ ತಂತ್ರವೇನು?.

ಏಷ್ಯಾಕಪ್​​ ಕಾಳಗದಲ್ಲಿಂದು ಇಂಡೋ-ಪಾಕ್​​ ಫೈಟ್​​.!

ಇಂದು ನಡೆಯುವ ಏಷ್ಯಾಕಪ್​ ಹೈವೋಲ್ಟೇಜ್​ ಪಂದ್ಯದಲ್ಲಿ ಇಂಡೋ-ಪಾಕ್​​​ ತಂಡಗಳು ಎದುರಾಗಲಿವೆ. ಇದೊಂದು ಬರೀ ಪಂದ್ಯವಲ್ಲ. ಪ್ರತಿಷ್ಠೆಯ ಮಹಾಕಾಳಗ. ಈ ಎಕ್ಸೈಟಿಂಗ್ ಮ್ಯಾಚ್​​​​​ನಲ್ಲಿ ಭಾರತ, ಪಾಕ್​​ ತಂಡವನ್ನ ಹಣಿಯಲು ಸಜ್ಜಾಗಿದೆ. ಬದ್ಧವೈರಿಯನ್ನ ಮಟ್ಟ ಹಾಕಲು ಟೀಮ್ ಇಂಡಿಯಾದ ಪ್ಲೇಯಿಂಗ್​​-11 ಹೇಗಿರಲಿದೆ. ಯಾರಿಗೆಲ್ಲ ವೈರಿಯನ್ನ ಸದೆಬಡಿಯುವ ಚಾನ್ಸ್ ಸಿಗಲಿದೆ ಅನ್ನೋ ಪಿನ್​​ ಟು ಪಿನ್ ಡಿಟೈಲ್ಸ್ ಇಲ್ಲಿದೆ.

ರೋಹಿತ್ ಶರ್ಮಾ ಬ್ಯಾಟಿಂಗ್ ಸ್ಟೈಲ್​

ರೋಹಿತ್​​​ ಜೊತೆ ಇನ್ನಿಂಗ್ಸ್ ಆರಂಭಿಸೋಱರು..?

ಇಂಡೋ-ಪಾಕ್​​​​ ಅಸಲಿ ಕ್ರಿಕೆಟ್​ ಹಬ್ಬಕ್ಕೆ ಕೌಂಟ್​ಡೌನ್ ಸ್ಟಾರ್ಟ್​ ಆಗಿದೆ ನಿಜ. ಈ ಹೈ ಪ್ರೆಶರ್ ಗೇಮ್​​ನಲ್ಲಿ ಇನ್ನಿಂಗ್ಸ್​​ ಆರಂಭಿಸೋ ಜೋಡಿ ಯಾರು ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ರೋಹಿತ್​ ಶರ್ಮಾಗೆ ಸಾಥ್​​ ನೀಡಲು ಶುಭ್​​ಮನ್ ಗಿಲ್​ ಹಾಗೂ ಇಶಾನ್ ಕಿಶನ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ರೋಹಿತ್ ಜೊತೆ ಗಿಲ್​​ ಇನ್ನಿಂಗ್ಸ್​ ಆರಂಭಿಸೋದು ಬಹುತೇಕ ಖಚಿತ. ಒಂದು ವೇಳೆ ಲೆಫ್ಟಿ-ರೈಟಿ ಕಾಂಬಿನೇಷನ್ ಸ್ಟ್ರಾಟಜಿ ಮೊರೆ ಹೋದ್ರೆ ಹಿಟ್​ಮ್ಯಾನ್​ ಜೊತೆ ಕಿಶನ್​​​ ಓಪನ್​​ ಮಾಡಲಿದ್ದಾರೆ. ಆಗ ಶುಭ್​​ಮನ್​​​ ಗಿಲ್​ 3ನೇ ಕ್ರಮಾಂಕದಲ್ಲಿ ಆಡಬೇಕಾಗುತ್ತೆ. ಫೇವರಿಟ್ ಸ್ಲಾಟ್ ಬಿಟ್ಟು ಕೊಟ್ಟು ನಂಬರ್​ 4ರಲ್ಲಿ ಕಿಂಗ್ ಕೊಹ್ಲಿ ಆಡುವ ಅನಿವಾರ್ಯತೆ ಎದುರಾಗಲಿದೆ.

ಫಿಟ್​ & ಫೈನ್​​​ ಆಗಿದ್ದಾರಾ ಶ್ರೇಯಸ್​ ಅಯ್ಯರ್​​..?

ಶ್ರೇಯಸ್ ಅಯ್ಯರ್ ಕಮ್​ಬ್ಯಾಕ್​ ಟೀಮ್ ಇಂಡಿಯಾ ಬ್ಯಾಟಿಂಗ್​ ಬಲ ಹೆಚ್ಚಿಸಿದೆ. ಆದ್ರೂ, ಪಾಕ್​​​​​ ಎದುರು ರಾಕ್​ಸ್ಟಾರ್​​​​ ಶ್ರೇಯಸ್​ ಆಡ್ತಾರಾ, ಇಲ್ವಾ.? ಅನ್ನೋ ಪ್ರಶ್ನೆ ಕಾಡ್ತಿದೆ. ಇಂಜುರಿಯಿಂದ ಚೇತರಿಸಿಕೊಂಡು ತಂಡ ಸೇರಿರೋ ಮುಂಬೈಕರ್ ಎಷ್ಟರ ಮಟ್ಟಿಗೆ ಫಿಟ್ ಆಗಿದ್ದಾರೆ ಎಂಬ ಪ್ರಶ್ನೆ ಇದ್ದೇ ಇದೆ. ಒಂದು ವೇಳೆ ಶ್ರೇಯಸ್​ ಆಡಿದ್ರೆ ತಂಡದ ಬಲ ಹೆಚ್ಚೋದು ಗ್ಯಾರಂಟಿ. ಆದ್ರೆ, ತಿಲಕ್ ವರ್ಮಾ ಹಾಗೂ ಸೂರ್ಯಕುಮಾರ್​ ಯಾದವ್ ಕಥೆ ಏನು ಅನ್ನೋದು ಉತ್ತರವಿಲ್ಲದ ಪ್ರಶ್ನೆಯಾಗಿದೆ.

ವಿಕೆಟ್ ಟೇಕರ್​ ಜಡ್ಡುಗೆ ಸಾಥ್​​​​ ಕೊಡೋದ್ಯಾರು ?

ಪಾಕ್​​​​ ಬಗ್ಗುಬಡಿಯಲು ಟೀಮ್ ಇಂಡಿಯಾ ಕ್ವಾಲಿಟಿ ಸ್ಪಿನ್ನರ್​ಗಳನ್ನ ಹೊಂದಿದೆ. ಆದರೆ ರವೀಂದ್ರ ಜಡೇಜಾ ಜೊತೆಗಾರನ ಆಯ್ಕೆ ಗುಟ್ಟಾಗಿ ಉಳಿದಿದೆ. 2ನೇ ಸ್ಪಿನ್ನರ್​​​​​​​​​​​​ ಆಗಿ ಕುಲ್ದೀಪ್​​​​ ಹಾಗೂ ಅಕ್ಷರ್ ಪಟೇಲ್​​ ನಡುವೆ ರೇಸ್​ ಏರ್ಪಟ್ಟಿದೆ. ಬೇಸಿಕಲಿ ಜಡ್ಡು-ಅಕ್ಷರ್​​​ ಒಂದೇ ಬಗೆಯ ಸ್ಪಿನ್​ ಶೈಲಿ ಹೊಂದಿದ್ದಾರೆ. ಹೀಗಾಗಿ ಚೈನಾಮೆನ್​​​ ಕುಲ್​ದೀಪ್​​ಗೆ ಜಾಕ್​​ಪಾಟ್​ ಹೊಡೆಯುವ ಸಾಧ್ಯತೆ ಹೆಚ್ಚಿದೆ.

ಕ್ಯಾಪ್ಟನ್ ರೋಹಿತ್, ಶುಭ್​ಮನ್ ಗಿಲ್, ಇಶನ್ ಕಿಶನ್

ಶಾರ್ದುಲ್​​-ಪ್ರಸಿದ್ಧ್​​​​​​ಗೆ ಚಾನ್ಸ್​ ಸಿಗುತ್ತಾ..?

ಬರೀ ಸ್ಪಿನ್ ವಿಭಾಗ ಅಷ್ಟೇ ಅಲ್ಲ, ವೇಗದ​ ಬೌಲಿಂಗ್​​ ವಿಭಾಗದ ಆಯ್ಕೆನೂ ಟೀಮ್ ಮ್ಯಾನೇಜ್​​ಮೆಂಟ್​ಗೆ ಕಠಿಣವೆನಿಸಿದೆ. ಜಸ್​​ಪ್ರೀತ್ ಬೂಮ್ರಾ​ ಹಾಗೂ ಮೊಹಮ್ಮದ್​ ಸಿರಾಜ್​​ ಆಡುವುದು ಖಚಿತ. ಆದರೆ 3ನೇ ಪೇಸರ್ ಯಾರು? ಒಂದು ಸ್ಲಾಟ್​​​ಗಾ​​ಗಿ ಶಾರ್ದುಲ್ ಠಾಕೂರ್​​​​, ಪ್ರಸಿದ್ಧ್​ ಕೃಷ್ಣ ಹಾಗೂ​ ಶಮಿ ಮಧ್ಯೆ ತ್ರಿಕೋನ ಸ್ಪರ್ಧೆ ನಡೆದಿದೆ.

ಹೀಗಾಗಿ ಈ ಎಲ್ಲ ಪ್ರಶ್ನೆಗಳಿಗೆ ಕ್ಯಾಪ್ಟನ್​ ರೋಹಿತ್ ಶರ್ಮಾ​​ ಹಾಗೂ ಕೋಚ್​ ದ್ರಾವಿಡ್ ಆದಷ್ಟು ಬೇಗನೇ ಆನ್ಸರ್​ ಕಂಡುಕೊಂಡುಕೊಳ್ಳಬೇಕಿದೆ. ಏಷ್ಯಾ ದಂಗಲ್​ನಲ್ಲಿ ಅಧಿಪತಿಯಾಗಿರುವ ಟೀಮ್ ಇಂಡಿಯಾ, ಗೆದ್ದು ಬೀಗಲಿ ಅನ್ನೋದೇ ಭಾರತೀಯರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ಯಾಪ್ಟನ್​ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸೋಱರು.. ಶುಭ್​ಮನ್​ ಗಿಲ್ ಬದಲಿಗೆ ಇಶನ್​ಗೆ ಚಾನ್ಸ್​ ಕೊಡ್ತಾರಾ?

https://newsfirstlive.com/wp-content/uploads/2023/09/ISHAN_KISHAN.jpg

Load More