/newsfirstlive-kannada/media/post_attachments/wp-content/uploads/2025/05/battle-tanks-3.jpg)
ಇಂದು ಬೆಳ್ಳಂಬೆಳಗ್ಗೆ ಗಡಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಭಾರತದ ಪಂಜಾಬ್ ಗಡಿಗೆ ಯುದ್ಧ ಟ್ಯಾಂಕ್ಗಳನ್ನು ಭಾರತದ ಸೇನೆ ರವಾನಿಸಿದೆ. ಗಡಿಯಲ್ಲಿ ಯುದ್ಧ ಟ್ಯಾಂಕ್ಗಳು, ಬೋಪೋರ್ಸ್ ಫಿರಂಗಿಗಳನ್ನು ನಿಯೋಜಿಸಿದೆ. ಅತ್ತ ಪಾಕಿಸ್ತಾನದ ಕಡೆಯಿಂದಲೂ ಗಡಿಯಲ್ಲಿ ಯುದ್ಧ ಟ್ಯಾಂಕ್, ಶಸ್ತ್ರಾಸ್ತ್ರ ನಿಯೋಜನೆ ಮಾಡಿದೆ. ಹೀಗಾಗಿ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಆ ಮೂಲಕ ಗಡಿಯಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದೆ.
ಇದನ್ನೂ ಓದಿ: ಉಗ್ರರ ವಿರುದ್ಧದ Operation akraman ಬ್ಲೂ ಪ್ರಿಂಟ್ ರೆಡಿ.. ಟಾರ್ಗೆಟ್ ಫಿಕ್ಸ್..!
ಜಾಮರ್ ಅಳವಡಿಕೆ
ಭಾರತದಿಂದ ಪಶ್ಚಿಮ ಗಡಿಯಲ್ಲಿ ಜಾಮರ್ ಅಳವಡಿಕೆ ಮಾಡಲಾಗಿದೆ. ಪಾಕಿಸ್ತಾನದ ಯುದ್ಧ ವಿಮಾನಗಳಿಗೆ ನಾವಿಗೇಷನ್ ಸಿಗದಂತೆ ಜಾಮರ್ ಅಳವಡಿಕೆ ಮಾಡಲಾಗಿದೆ. ಗ್ಲೋಬಲ್ ನಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಅನ್ನು ಪಾಕ್ ಮಿಲಿಟರಿ ಬಳಸುತ್ತಿದೆ. ರಷ್ಯಾ, ಅಮೆರಿಕಾದ ಸ್ಯಾಟಲೈಟ್ ಮೂಲಕ ನಾವಿಗೇಷನ್ ಸಿಸ್ಟಮ್ ಬಳಸುತ್ತಿದೆ. ಜಾಮರ್ ಅಳವಡಿಕೆಯಿಂದ ಪಾಕ್ ನಿಂದ ನಿಖರವಾದ ದಾಳಿ ನಡೆಸಲು ಸಾಧ್ಯವಾವುದಿಲ್ಲ.
ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಸಂಸದ, ಭಾರತದಲ್ಲಿ ಕುಲ್ಫಿ ಐಸ್ ಕ್ರೀಮ್ ಮಾರಾಟ ಮಾಡ್ತಾರೆ.. ಈಗ ಎಲ್ಲಿದ್ದಾರೆ?
ಎನಿ ಟೈಮ್ ಅಟ್ಯಾಕ್.. ಪಾಪಿಸ್ತಾನದ ಉಗ್ರರು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆಸಿದ ನರಮೇಧದಿಂದ ಶತಕೋಟಿ ಭಾರತೀಯರು ಪಾಕ್ ವಿರುದ್ಧ ನಿಗಿನಿಗಿ ಕೆಂಡವಾಗಿದ್ದಾರೆ. ಹೀಗಾಗಿ ಭಾರತದ ಸರ್ಕಾರ ಜಲಾಘಾತ ಬಳಿಕ ಪ್ರಧಾನಿ ಮೋದಿ ಮೇಲಿಂದ ಮೇಲೆ ಸಭೆ ನಡೆಸಿ ಪಾಕಿಸ್ತಾನಕ್ಕೆ ಮರ್ಮಾಘಾತ ಕೊಡ್ತಿದ್ದಾರೆ.
ಇದನ್ನೂ ಓದಿ: ಪಾಕ್ ಸೇನೆಗೆ ತನ್ನ ದೇಶದಲ್ಲೇ ದೊಡ್ಡ ಅವಮಾನ.. ಕವಡೆ ಕಾಸಿನ ಕಿಮ್ಮತ್ತೂ ಅಲ್ಲಿಲ್ಲ..! VIDEO
ಈ ನಡುವೆ ಸೇನೆಗೆ ಪರಮಾಧಿಕಾರ ಕೊಟ್ಟ ಬೆನ್ನಲ್ಲೇ ಪಾಕಿಸ್ತಾನ ಪತರುಗುಟ್ಟಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಭಾರತದ ವಿಮಾನಗಳ ಬಳಿಕ ಎಲ್ಲಾ ವಿಮಾನ ಹಾರಾಟ ರದ್ದು ಮಾಡಿ ಇಸ್ಲಾಮಾಬಾದ್, ಲಾಹೋರ್ ವಾಯುಪ್ರದೇಶದಲ್ಲಿ ನೋ ಫ್ಲೈ ಝೋನ್ ಘೋಷಣೆ ಮಾಡಿದೆ. ಇದಕ್ಕೆ ಭಾರತ ಕೂಡ ಕೌಂಟರ್ ನೀಡಿ, ಪಾಕಿಸ್ತಾನಿ ವಿಮಾನಗಳಿಗೆ ಭಾರತದ ವಾಯುಪ್ರದೇಶ ಎಂಟ್ರಿಗೆ ನೋ ಎಂದಿದೆ. ಮಾತ್ರವಲ್ಲ, ಎರಡೂ ದೇಶಗಳು ಜಿದ್ದಿಗೆ ಬಿದ್ದು ಸಮರಾಭ್ಯಾಸ ಕೂಡ ನಡೆಸ್ತಿವೆ.
ಇದನ್ನೂ ಓದಿ: ಪಾಪರ್ ಪಾಕ್ಗೆ ಭಾರತದಿಂದ ಮತ್ತೊಂದು ಪೆಟ್ಟು.. ತಳಮಳಗೊಂಡ ನಟ, ನಟಿಯರು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್