/newsfirstlive-kannada/media/post_attachments/wp-content/uploads/2024/12/RAJANATH-SINGH.jpg)
ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಪಾಕಿಸ್ತಾನ ಭಾರೀ ಮುಜುಗರಕ್ಕೆ ಒಳಗಾಗಿದೆ. ಹೀಗಿದ್ದೂ ಪಾಕಿಸ್ತಾನಿ ಮಂತ್ರಿಗಳು ಭಾರತಕ್ಕೆ ಯುದ್ಧದ ಬೆದರಿಕೆ ಹಾಕ್ತಿದ್ದಾರೆ. ಪಾಕ್ ಸಚಿವರ ಪರಮಾಣು ಯುದ್ಧದ ಬೆದರಿಕೆ ನಂತರ ಇದೀಗ, ಅಲ್ಲಿನ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್ ಯುದ್ಧದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿರೋದ್ರಿಂದ ನಮ್ಮ ಪಡೆಗಳನ್ನು ಬಲಪಡಿಸಿದ್ದೇವೆ ಎಂದಿದ್ದಾನೆ.
ಅಂದರೆ ಭಯೋತ್ಪಾದಕ ದಾಳಿ ನಂತರ ಪಾಕ್ ಮೇಲೆ ಯುದ್ಧದ ಸಾಧ್ಯತೆ ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗಿದೆ. ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆದರೆ ಸರ್ಕಾರಗಳು ನಾಗರಿಕರನ್ನು ಶತ್ರು ದೇಶದ ವಿರುದ್ಧ ಹೋರಾಡಲು ಒತ್ತಾಯಿಸಬಹುದಾ ಅನ್ನೋದು.
ಇದನ್ನೂ ಓದಿ: ಏರ್ಸ್ಪೇಸ್ ಬ್ಯಾನ್ ಮಾಡಿ ಕೈಸುಟ್ಟುಕೊಂಡ ಪಾಕ್.. ಎಷ್ಟು ಲಕ್ಷ ಕೋಟಿ ನಷ್ಟ ಆಗಿದೆ ಗೊತ್ತಾ..?
ಕೆಲವು ದೇಶಗಳಲ್ಲಿ ಯುದ್ಧ ನಡೆದಾಗ ಸರ್ಕಾರಗಳು ಸಾಮಾನ್ಯ ನಾಗರಿಕರನ್ನ ಯುದ್ಧಕ್ಕಾಗಿ ಒತ್ತಾಯಿಸಬಹುದು. ಇದಕ್ಕೆ ಕೆಲವು ಕಾನೂನು ಮತ್ತು ಸಾಂವಿಧಾನಿಕ ಕಟ್ಟುಪಾಡುಗಳಿವೆ. ಆದರೆ ಯುದ್ಧದ ಪರಿಸ್ಥಿತಿ ಉಂಟಾದಾಗ ಸರ್ಕಾರಗಳು ಸಾಮಾನ್ಯ ನಾಗರಿಕರನ್ನು ಸೈನ್ಯಕ್ಕೆ ಸೇರುವಂತೆ ಒತ್ತಾಯಿಸುವ ಹಕ್ಕು ಹೊಂದಿರುತ್ತವೆ. ಈ ಹಕ್ಕು ಸಂವಿಧಾನದಲ್ಲಿದ್ದರೂ ಅದನ್ನು ‘ಮಿಲಿಟರಿ ಬಲ’ ಎನ್ನಲಾಗುತ್ತದೆ.
ಭಾರತದಲ್ಲಿ ಈ ನಿಯಮ ಇದೆಯಾ..?
ಯುದ್ಧದ ಸಮಯದಲ್ಲಿ ಹೋರಾಡಲು ನಾಗರಿಕರ ಒತ್ತಾಯಿಸಲ್ಪಡುವ ದೇಶಗಳಲ್ಲಿ ಅದನ್ನು ‘ಕಡ್ಡಾಯ ಮಿಲಿಟರಿ ಸೇವೆ’ ಎಂದು ಕರೆಯಲಾಗುತ್ತದೆ. ಸರ್ಕಾರ ನಿರ್ದಿಷ್ಟ ವಯಸ್ಸಿನ ಜನರನ್ನು ಒತ್ತಾಯಿಸುತ್ತದೆ. ಸೈನ್ಯಕ್ಕೆ ಹೆಚ್ಚಾಗಿ ಕಿರಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಆದರೆ ಇದು ಕೆಲವು ದೇಶಗಳಲ್ಲಿ ಕಡ್ಡಾಯವಲ್ಲ. ನಾಗರಿಕರು ತಮ್ಮ ಸ್ವಂತ ಇಚ್ಛೆಯಿಂದ ಸೇನೆಗೆ ಸೇರುತ್ತಾರೆ. ಭಾರತದಲ್ಲಿ ಕಡ್ಡಾಯ ಮಿಲಿಟರಿ ಸೇವೆಗೆ ಅವಕಾಶ ಇಲ್ಲ. ಸ್ವಯಂಸೇವಕರಾಗಿ ಸೇನೆಗೆ ಸೇವೆ ಸಲ್ಲಿಸಬಹುದು. ಆದರೆ ರಾಷ್ಟ್ರೀಯ ಭದ್ರತೆ ಅಥವಾ ಯುದ್ಧದ ಸಂದರ್ಭದಲ್ಲಿ ನಾಗರಿಕರನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವ ಹಕ್ಕು ಸರ್ಕಾರಕ್ಕೆ ಇದೆ. ಇದು ಸಾಂವಿಧಾನಿಕ ಮತ್ತು ಕಾನೂನುಬದ್ಧವಾಗಿದೆ.
ಇದನ್ನೂ ಓದಿ: POK ಅಂದರೆ ಏನು..? ಕಾಶ್ಮೀರದ ಎಷ್ಟು ಭಾಗವನ್ನು ಪಾಕಿಸ್ತಾನ ಹೊಂದಿದೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್