/newsfirstlive-kannada/media/post_attachments/wp-content/uploads/2024/11/RINKU_TILAK.jpg)
ಫಸ್ಟ್ ಹಾಫ್ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳ ಆರ್ಭಟ ನಡೆದ್ರೆ, ಸೆಕೆಂಟ್ ಹಾಫ್ನಲ್ಲಿ ನಡೆದಿದ್ದು ಬೌಲರ್ಗಳ ಮೆರೆದಾಟ. ಅದ್ರಲ್ಲೂ, ಟೀಮ್ ಇಂಡಿಯಾ ಸ್ಪಿನ್ನರ್ಗಳ ಬಲೆಗೆ ಬಿದ್ದ ದಕ್ಷಿಣ ಆಫ್ರಿಕನ್ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದರು. ಟೀಮ್ ಇಂಡಿಯಾ ಬೌಲರ್ಗಳ ವಿಕೆಟ್ ಬೇಟೆಯ ಹೈಲೆಟ್ಸ್ ಇಲ್ಲಿದೆ.
203 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ಯಾಪ್ಟನ್ ಎಡೆನ್ ಮಾರ್ಕರಂ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿ ಭರ್ಜರಿ ಆರಂಭ ಕೊಟ್ಟರು. ಆದರೆ, ನಂತರದ ಎಸೆತದಲ್ಲೆ ಆರ್ಷ್ದೀಪ್ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಯುವ ಬ್ಯಾಟ್ಸ್ಮನ್ ಟ್ರಿಸ್ಟನ್ ಸ್ಟಬ್ಸ್ ಕೂಡ ತಂಡಕ್ಕೆ ನೆರವಾಗಲಿಲ್ಲ. ಸ್ಟಬ್ಸ್ ಆಟಕ್ಕೆ ಆವೇಶ್ ಖಾನ್ ಬ್ರೇಕ್ ಹಾಕಿದರು. 30 ರನ್ಗಳಿಗೆ ಸೌತ್ ಆಫ್ರಿಕಾ 2 ವಿಕೆಟ್ ಕಳೆದುಕೊಂಡಿತ್ತು.
ಇದನ್ನೂ ಓದಿ:ಸಿಕ್ಸ್, ಸಿಕ್ಸ್, ಸಿಕ್ಸ್! ಸಂಜು ಸ್ಯಾಮ್ಸನ್ ಸ್ಟ್ರೈಕ್ರೇಟ್ ಬಗ್ಗೆ ಯಾರೂ ಕೆಮ್ಮಂಗಿಲ್ಲ..!
ಟೀಮ್ ಇಂಡಿಯಾ ಬೌಲರ್ಗಳನ್ನ ಕಾಡಿದ ರಿಯಾನ್ ರಿಕಲ್ಟನ್ 11 ಎಸೆತಗಳಲ್ಲೇ 21 ರನ್ಗಳಿಸಿದರು. 3 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಬ್ಬರಿಸೋ ಸೂಚನೆ ನೀಡಿದ ರಿಕಲ್ಟನ್ಗೆ ವರುಣ್ ಚಕ್ರವರ್ತಿ ಪೆವಿಲಿಯನ್ ದಾರಿ ತೋರಿಸಿಯೇ ಬಿಟ್ಟರು. ಬಳಿಕ ಕ್ರಿಸ್ನಲ್ಲಿ ಜೊತೆಯಾದ ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್ ತಂಡಕ್ಕೆ ಚೇತರಿಕೆ ನೀಡುವ ಯತ್ನ ಮಾಡಿದರು. ಆದರೆ, ಇದಕ್ಕೂ ವರುಣ್ ಚಕ್ರವರ್ತಿ ಅವಕಾಶ ನೀಡಲಿಲ್ಲ. ಸಿಕ್ಸರ್ ಸಿಡಿಸಿದ ಮರು ಎಸೆತದಲ್ಲೇ ಕ್ಲಾಸೆನ್ ವಿಕೆಟ್ ಎಗರಿಸಿದರು.
ಕ್ಲಾಸೆನ್ ಬೆನ್ನಲ್ಲೇ ಡೇವಿಡ್ ಮಿಲ್ಲರ್ ಕೂಡ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ಕಣಕ್ಕಿಳಿದ ಪ್ಯಾಟ್ರಿಕ್ ಕ್ರುಗರ್, ಎಂಡಿಲ್ ಸಿಮಾಲಾನೆ ರವಿ ಬಿಷ್ಣೋಯ್ ಬೌಲಿಂಗ್ನಲ್ಲಿ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದರು.
ಇದನ್ನೂ ಓದಿ: ಯೋಗ ಶಿಕ್ಷಕಿಯ ಅಪಹರಣ ಕೇಸ್; ರಾಯರ ಸನ್ನಿಧಿಯಲ್ಲಿ ಸಿಕ್ಕಿಬಿದ್ದ ಆರೋಪಿಗಳ ಫೊಟೋಸ್ ಈಗ ಲಭ್ಯ
ಅಂತಿಮ ಹಂತದಲ್ಲಿ ಜೆರಾಲ್ಡ್ ಕೋಟ್ಜಿ ಹೋರಾಟ ನಡೆಸಿದ್ದು ಬಿಟ್ರೆ, ಉಳಿದೆಲ್ಲಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ರು. 202 ರನ್ಗಳನ್ನ ಗಳಿಸಲಾಗದೇ ಕೇವಲ 141 ರನ್ಗೆ ಸೌತ್ ಆಫ್ರಿಕಾ ಆಲೌಟ್ ಆಯಿತು. 61 ರನ್ಗಳಿಂದ ಗೆದ್ದ ಟೀಮ್ ಇಂಡಿಯಾ 4 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ