/newsfirstlive-kannada/media/post_attachments/wp-content/uploads/2024/11/SURYA_SANJU.jpg)
ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ಮಧ್ಯೆ ನಡೆಯುತ್ತಿರುವ 4 ಟಿ20 ಪಂದ್ಯಗಳ ಸರಣಿ ಕೊನೆಯ ಹಂತಕ್ಕೆ ಬಂದು ತಲುಪಿದೆ. ಸರಣಿಯಲ್ಲಿ ಟೀಮ್ ಇಂಡಿಯಾ ಮುನ್ನಡೆ ಸಾಧಿಸಿದ್ದರೂ ಇಂದಿನ ಪಂದ್ಯ ಎರಡೂ ತಂಡಗಳಿಗೂ ಮಹತ್ವದ್ದಾಗಿದೆ.
ಸೂರ್ಯಕುಮಾರ್ ನೇತೃತ್ವದ ಭಾರತ ತಂಡ 4 ಪಂದ್ಯಗಳ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದಿದ್ದು ದಕ್ಷಿಣ ಆಫ್ರಿಕಾ 1 ಮ್ಯಾಚ್ ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯ ಎರಡೂ ತಂಡಗಳಿಗೂ ಬಹು ಮುಖ್ಯವಾಗಿದೆ. ಏಕೆಂದರೆ ಭಾರತ ತಂಡ ಈ ಪಂದ್ಯವನ್ನು ಗೆದ್ದರೇ ಸರಣಿ ಕೈವಶ ಮಾಡಿಕೊಳ್ಳಲಿದೆ. ಒಂದು ವೇಳೆ ಸೌತ್ ಆಫ್ರಿಕಾ ಪಡೆ ಇವತ್ತು ಮ್ಯಾಚ್ ವಿನ್ ಆದರೆ ಸರಣಿ 2- 2 ರಿಂದ ಸಮಬಲವಾಗಲಿದೆ.
ಇದನ್ನೂ ಓದಿ:IPL ಮೆಗಾ ಹರಾಜು; ಮುಂಬೈನ ಈ ಮೂವರು ಸ್ಟಾರ್ ಆಟಗಾರರೇ ಆರ್ಸಿಬಿ ಟಾರ್ಗೆಟ್
ಇನ್ನು ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಇದ್ದು ಪಂದ್ಯ ಆರಂಭದ ನಂತರ ಎಲ್ಲ ತಿಳಿದು ಬರಲಿದೆ. ಪಂದ್ಯದ ಆರಂಭದ ಬಳಿಕ ಶೇಕಡಾ 70 ರಷ್ಟು ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಮೈದಾನದ ಸುತ್ತ ಗಾಳಿ 14 ಕಿ.ಮೀ ವೇಗದಲ್ಲಿ ಬೀಸಲಿದ್ದು ತೇವಾಂಶ ಶೇಕಡಾ 55ರಷ್ಟು ಇರಲಿದೆ. ಇನ್ನು ಪಂದ್ಯಕ್ಕೆ ವರುಣ ಆಗಮಿಸಿ ಮ್ಯಾಚ್ ರದ್ದಾದರೆ 2 ತಂಡಕ್ಕೂ ಪಾಯಿಂಟ್ಸ್ ಹಂಚಿಕೆ ಮಾಡಿದರು 2 ಪಂದ್ಯ ಗೆದ್ದಿರುವ ಭಾರತ ತೆಕ್ಕೆಗೆ ಸರಣಿ ಬರಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4ನೇ ಪಂದ್ಯ ಇಂದು ರಾತ್ರಿ 8:30ಕ್ಕೆ ಆರಂಭವಾಗಲಿದೆ. ಜೋಹಾನ್ಸ್‌ಬರ್ಗ್ ನಗರದ ವಾಂಡರರ್ಸ್ ಸ್ಟೇಡಿಯಂನಲ್ಲಿ ಎರಡು ತಂಡಗಳು ಗೆಲುವಿಗಾಗಿ ಹಣಾಹಣಿ ನಡೆಸಲಿವೆ. ವಾಂಡರರ್ಸ್ ಸ್ಟೇಡಿಯಂನಲ್ಲಿ ಒಟ್ಟು 34,000 ಕ್ರಿಕೆಟ್ ಅಭಿಮಾನಿಗಳು ಪಂದ್ಯವನ್ನ ವೀಕ್ಷಣೆ ಮಾಡಬಹುದು.
ಭಾರತದ ಸಂಭಾವ್ಯ ತಂಡ-
ಸೂರ್ಯಕುಮಾರ್ (ನಾಯಕ), ಸಂಜು (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಪಾಂಡ್ಯ, ರಿಂಕು ಸಿಂಗ್, ರಮಣದೀಪ್ ಸಿಂಗ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ,
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ