newsfirstkannada.com

ಲಂಕಾ ವಿರುದ್ಧ ಮೊದಲ ಟಿ20 ಪಂದ್ಯ.. ಟೀಂ ಇಂಡಿಯಾದ ಪ್ಲೇಯಿಂಗ್ 11..!

Share :

Published July 27, 2024 at 12:25pm

    ಓಪನರ್ಸ್​ ಫಿಕ್ಸ್​.. 3ನೇ ಕ್ರಮಾಂಕಕ್ಕೆ ಯಾರು..?

    ಸಿರಾಜ್ ಸಿಡಿಗುಂಡಿನ ದಾಳಿಗೆ ದಹನವಾಗುತ್ತಾ ಲಂಕಾ..?

    ಫಿನಿಷರ್ ಕೋಟಾದಲ್ಲಿ ರಿಂಕು ಸಿಂಗ್​​ಗಾ..? ಶಿವಂ ದುಬೆಗಾ..?

ಇಂಡೋ-ಶ್ರೀಲಂಕಾ ನಡುವಿನ ಮೊದಲ ಟಿ20 ಸರಣಿಗೆ ವೇದಿಕೆ ಸಜ್ಜಾಗಿದೆ. ಈ ಸರಣಿಯೊಂದಿಗೆ ಟಿ20ಯಲ್ಲಿ ಟೀಮ್‌ ಇಂಡಿಯಾದ ಹೊಸ ಶಕೆ ಆರಂಭವಾಗಲಿದೆ. ಹೊಸ ಕೋಚ್ ಆ್ಯಂಡ್ ಕ್ಯಾಪ್ಟನ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್​-XI ಹೇಗಿರಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಅಷ್ಟೊಂದು ಗೊಂದಲುಗಳು ತಂಡದ ಆಯ್ಕೆಯಲ್ಲಿವೆ.

ಇಂಡೋ ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಕೌಂಟ್​​ಡೌನ್ ಶುರುವಾಗಿದೆ. 3 ಪಂದ್ಯಗಳ ಮೊದಲ ಹಣಾಹಣಿಗೆ ಪಲ್ಲೆಕಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ವೇದಿಕೆಯಾಗಿದೆ. ಇಂದಿನ ಮೊದಲ ಕದನ ಗೆದ್ದು, ಶುಭಾರಂಭ ಮಾಡುವ ಕನಸು ಕಾಣುತ್ತಿರುವ ಉಭಯ ತಂಡಗಳು, ಟಿ20 ಯುದ್ಧಕ್ಕೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿವೆ.

ಇದನ್ನೂ ಓದಿ:ಬೂಮ್ರಾಗೆ ಬಿಗ್ ಶಾಕ್.. ಟೆಸ್ಟ್​ ತಂಡದ ಉಪನಾಯಕನ ಪಟ್ಟದಿಂದ ಕೊಕ್..!

ಹೊಸ ನಾಯಕ.. ಹೊಸ ಕೋಚ್.. ಹೊಸ ಆರಂಭ..!
ರೋಹಿತ್ ಶರ್ಮಾ ನಿವೃತ್ತಿಯೊಂದಿಗೆ ಸೂರ್ಯಕುಮಾರ್, ಟೀಮ್ ಇಂಡಿಯಾದ ಕಮಾಂಡರ್ ಆಗಿದ್ದಾರೆ. ಹೆಡ್​​ ಕೋಚ್ ಗಂಭೀರ್ ಮಾರ್ಗದರ್ಶನದಲ್ಲಿ ಮೊದಲ ಸವಾಲಿಗೆ ರೆಡಿಯಾಗಿರುವ ಟೀಮ್ ಇಂಡಿಯಾ, ಗೆಲುವಿನ ಸಿಹಿಯ ನಿರೀಕ್ಷೆಯಲ್ಲಿದೆ. ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿರುವ ಟೀಮ್ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​​​​​​​​ ಹೇಗಿರಲಿದೆ ಅನ್ನೋದು ಕುತೂಹಲ ಹೆಚ್ಚಿಸಿದೆ.

ಓಪನರ್ಸ್​ ಫಿಕ್ಸ್​.. 3ನೇ ಕ್ರಮಾಂಕಕ್ಕೆ ಯಾರು?
ಯಶಸ್ವಿ ಜೈಸ್ವಾಲ್ ಆ್ಯಂಡ್ ಶುಭ್​ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯೋದು ಖಾಯಂ. 3ನೇ ಕ್ರಮಾಂಕದಲ್ಲಿ ಯಾರ್ ಆಡ್ತಾರೆ ಅನ್ನೋ ಗೊಂದಲ ಇದೆ. ಟಿ20 ವಿಶ್ವಕಪ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ರಿಷಭ್ ಪಂತ್ ಹಾಗೂ ಸೂರ್ಯಕುಮಾರ್​ ನಡುವೆ ನೇರಾನೇರ ಪೈಪೋಟಿ ನಡೀತಿದೆ. ನ್ಯೂ ಹೆಡ್ ಕೋಚ್ ಪಂತ್​ರನ್ನೇ ಮುಂದುವರಿಸ್ತಾರಾ? ಇಲ್ಲ ಸೂರ್ಯಗೆ ಮತ್ತೆ ಪ್ರಮೋಷನ್ ನೀಡ್ತಾರಾ ಎಂಬ ಕ್ಯೂರಿಯಾಟಿಸಿ ಇದೆ. ಖಾಯಂ ವಿಕೆಟ್ ಕೀಪರ್ ರಿಷಭ್ ಇರೋದ್ರಿಂದ ಸಂಜು ಸ್ಯಾಮ್ಸನ್, ಮತ್ತೆ ಬೆಂಚ್ ಬಿಸಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ:ಹಾಸನದಲ್ಲಿ ಬೆಳ್ಳಂಬೆಳಗ್ಗೆ ಅನಾಹುತ.. ರೈಲು ಬರುತ್ತಿದ್ದಾಗಲೇ ಕುಸಿದ ಗುಡ್ಡ, ಹಳಿಯಿಂದ ಜಾರಿದ ಟ್ರೈನ್..

ಫಾಸ್ಟ್​ ಬೌಲಿಂಗ್ ಆಲ್​ರೌಂಡರ್ ಆಗಿ ಪಾಂಡ್ಯ ಫಿಕ್ಸ್!
ಹಾರ್ದಿಕ್ ಪಾಂಡ್ಯ, ಫಾಸ್ಟ್​ ಬೌಲಿಂಗ್ ಆಲ್​ರೌಂಡರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಜವಾಬ್ದಾರಿ ಹೊರಲಿದ್ದಾರೆ. ಫಿನಿಷರ್ ಕೋಟಾದಲ್ಲಿ ಸ್ಥಾನ ಪಡೆಯಲು ಯಂಗ್ ಗನ್ ರಿಂಕು ಸಿಂಗ್ ಹಾಗೂ ಆಲ್​ರೌಂಡರ್ ಶಿವಂ ದುಬೆ ನಡುವೆ ಪೈಪೋಟಿ ನಡೀತಿದೆ. ಸ್ಪಿನ್ ಫ್ರೆಂಡ್ಲಿ ಪಿಚ್​ನಲ್ಲಿ ಭಯಾನಕ ಆಟವಾಡಬಲ್ಲ ತಾಕತ್ತು ಹೊಂದಿರುವ ಇಬ್ಬರಲ್ಲಿ ಮ್ಯಾನೇಜ್​ಮೆಂಟ್​ ಯಾರಿಗೆ ಮಣೆ ಹಾಕುತ್ತೆ ಅನ್ನೋದೇ ಸದ್ಯ ಸಸ್ಪೆನ್ಸ್​ ಆಗುಳಿದಿದೆ.

ಇಬ್ಬರು ಸ್ಪಿನ್ ಆಲ್​ರೌಂಡರ್..!
ಪಲ್ಲೆಕಲೆ ಸ್ಪಿನ್ನರ್​ಗಳ ಸ್ವರ್ಗ.. ಬ್ಯಾಟಿಂಗ್​ ಆ್ಯಂಡ್ ಬೌಲಿಂಗ್​ಗೆ ಸಮಾನ ನೆರವೇ ಸಿಕ್ಕರೂ ಇಲ್ಲಿ ಮೇಲುಗೈ ಸಾಧಿಸಿರುವುದೇ ಸ್ಪಿನ್ನರ್​ಗಳು. ಈ ಕಾರಣಕ್ಕೆ ಬ್ಯಾಟಿಂಗ್ ಜೊತೆ ಸ್ಪಿನ್​​​​​​​​​​ ಬೌಲಿಂಗ್​ನಲ್ಲಿ ಕಮಾಲ್ ಮಾಡೋ ಆಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯಲಿದ್ದಾರೆ. ಜೊತೆಗೆ ಸ್ಪೆಷಲಿಸ್ಟ್ ಸ್ಪಿನ್ನರ್​​​​​​​​ ಆಗಿ ಲೆಗ್ ಸ್ಪಿನ್ನರ್ ರವಿ ಬಿಷ್ನೋಯಿ ಮ್ಯಾಜಿಕ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಫಾಸ್ಟ್​ ಬೌಲಿಂಗ್ ಅಟ್ಯಾಕ್!
ಟೀಮ್ ಇಂಡಿಯಾದ ಫಾಸ್ಟ್ ಬೌಲಿಂಗ್ ಅಟ್ಯಾಕರ್​ಗಳಾಗಿ ಮೊಹಮ್ಮದ್ ಸಿರಾಜ್ ಹಾಗೂ ಅರ್ಷ್​​ದೀಪ್ ಸಿಂಗ್ ಚೆಂಡು ಹಂಚಿಕೊಳ್ಳುವುದು ಗ್ಯಾರಂಟಿ. ಸಿರಾಜ್ ಇವತ್ತಿನ ಬೌಲಿಂಗ್​ನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಏಷ್ಯಾಕಪ್ ಹಾಗೂ ವಿಶ್ವಕಪ್​ನಲ್ಲಿ ಸಿರಾಜ್​ ಶ್ರೀಲಂಕಾ ಸಂಹಾರ ಮಾಡಿದ್ದರು. ಇವತ್ತೂ ಅದೇ ರಿದಮ್​​​​​​​​​ನಲ್ಲಿ ದಂಡಯಾತ್ರೆ ನಡೆಸ್ತಾರಾ ಅನ್ನೋ ಕುತೂಹಲ ಇದೆ.

ಇದನ್ನೂ ಓದಿ:ಬ್ಯಾಂಕ್ ಕೆಲಸ ಐದು ದಿನದಲ್ಲಿ ಮುಗಿಸಿಕೊಳ್ಳಿ.. ಆಗಸ್ಟ್​ನಲ್ಲಿ ಬ್ಯಾಂಕ್​ಗಳಿಗೆ ಭರ್ಜರಿ ರಜೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಂಕಾ ವಿರುದ್ಧ ಮೊದಲ ಟಿ20 ಪಂದ್ಯ.. ಟೀಂ ಇಂಡಿಯಾದ ಪ್ಲೇಯಿಂಗ್ 11..!

https://newsfirstlive.com/wp-content/uploads/2024/07/RINKU-SINGH.jpg

Load More