newsfirstkannada.com

ಪಂದ್ಯಕ್ಕೆ ಅನಿರೀಕ್ಷಿತ ಟ್ವಿಸ್ಟ್​ ಕೊಟ್ಟ ಅಸಲಂಕಾ.. ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತ ಟೀಂ ಇಂಡಿಯಾ..!

Share :

Published August 3, 2024 at 10:44am

Update August 3, 2024 at 11:29am

    1 ರನ್​ ಬೇಕಿದ್ದಾಗ 2 ವಿಕೆಟ್ ಕೈಚೆಲ್ಲಿದ ಇಂಡಿಯಾ!

    ಲಂಕಾ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್

    ನಿಸ್ಸಾಂಕಾ ಫಿಫ್ಟಿ.. ವೆಲ್ಲಾಲಗೆ ಆಲ್​ರೌಂಡರ್ ಆಟ

ಚುಟುಕು ಸರಣಿ ಕ್ಲೀನ್​ಸ್ವೀಪ್​ ಮಾಡಿದ ಟೀಮ್​ ಇಂಡಿಯಾ, ಏಕದಿನ ಸರಣಿಯಲ್ಲೂ ಶುಭಾರಂಭ ಮಾಡುವ ಕನಸು ಭಗ್ನವಾಯ್ತು. ಕೊಲಂಬೋದಲ್ಲಿ ಕಮಾಲ್ ಮಾಡೋ ಲೆಕ್ಕಚಾರ ಉಲ್ಟಾ ಆಯ್ತು. ಹಾವು ಏಣಿಯಂತೆ ಸಾಗಿದ ಈ ಪಂದ್ಯದಲ್ಲಿ ಕೊನೆಯಲ್ಲಿ ಮೇಲುಗೈ ಸಾಧಿಸಿದ ಶ್ರೀಲಂಕಾ, ಪಂದ್ಯವನ್ನ ಟೈ ಮಾಡಿಕೊಳ್ತು.

ಹಾಫ್​ ಸೆಂಚುರಿ ಸಿಡಿಸಿ ಮಿಂಚಿದ ನಿಸ್ಸಾಂಕ
ಪಂದ್ಯದಲ್ಲಿ ಟಾಸ್​ ಗೆದ್ದು ಬಿಗ್​ಸ್ಕೋರ್​ ಕಲೆ ಹಾಕೋ ಲೆಕ್ಕಾಚಾರದಲ್ಲಿ ಬ್ಯಾಟಿಂಗ್​ಗಿಳಿದ ಶ್ರೀಲಂಕಾ ಆರಂಭದಲ್ಲೇ ಶಾಕ್​ ಎದುರಿಸಿತು. ಅವಿಷ್ಕಾ ಫರ್ನಾಂಡೋ ಸಿರಾಜ್​ಗೆ ಸುಲಭದ ಬಲಿಯಾದ್ರು. ಬಳಿಕ ಕಣಕ್ಕಿಳಿದ ಕುಸಾಲ್​ ಮೆಂಡಿಸ್​ ಆಟ 14 ರನ್​​ಗಳಿಗೆ ಅಂತ್ಯವಾಯ್ತು. ಸಮರವಿಕ್ರಮ, ಕ್ಯಾಪ್ಟನ್​ ಚರಿತ ಅಸಲಂಕ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ರು. ಪರಿಣಾಮ ಲಂಕಾ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ದಿಟ್ಟ ಹೋರಾಟ ನಡೆಸಿದ ಫಾತುಮ್​ ನಿಸ್ಸಾಂಕ ಹಾಫ್​ ಸೆಂಚುರಿ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಆದ್ರೆ, ಹಾಫ್​ ಸೆಂಚುರಿ ಪೂರೈಸಿದ ಬೆನ್ನಲ್ಲೇ ನಿಸ್ಸಾಂಕ, ವಾಷಿಂಗ್ಟನ್​ ಸುಂದರ್​ ಸ್ಪಿನ್​ ಬಲೆಗೆ ಬೀಳಿಸಿದರು.

ಇದನ್ನೂ ಓದಿ:ಪಿಎಸ್ಐ ಪರಶುರಾಮ ಸಾವು; ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ, ಮೃತ ಅಧಿಕಾರಿಯ ಪತ್ನಿಯೂ ಭಾಗಿ

ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ ದುನಿತ್​ ವೆಲ್ಲಲಗೆ
ಲಂಕಾಗೆ ಜನಿತ್​ ಲಿಯನಗೆ, ದುನಿತ್​ ವೆಲ್ಲಲಗೆ 41 ರನ್​ಗಳ ಜೊತೆಯಾಟದೊಂದಿಗೆ ಚೇತರಿಕೆ ನೀಡಲು ಯತ್ನಿಸಿದರು. ಅಕ್ಷರ್​ ಪಟೇಲ್​ ಅದಕ್ಕೆ ಅವಕಾಶ ನೀಡಲಿಲ್ಲ. 20 ರನ್​ಗಳಿಸಿ ಜನಿತ್​ ಔಟಾದರೆ, ಬಳಿಕ ಬಂದ ವನಿಂದು ಹಸರಂಗ 24, ಅಖಿಲ ಧನಂಜಯ 17 ರನ್​ಗಳ ಕೊಡುಗೆ ನೀಡುವ ಮೂಲಕ ಧುನಿತ್​ ವೆಲ್ಲಲಗೆಗೆ ಸಾಥ್​ ನೀಡಿದರು. ಟೀಮ್​ ಇಂಡಿಯಾ ಬೌಲರ್​ಗಳನ್ನ ದಿಟ್ಟವಾಗಿ ಎದುರಿಸಿದ ವೆಲ್ಲಲಗೆ ಅಜೇಯ 67 ರನ್​ಗಳ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು. ಪರಿಣಾಮ ಶ್ರೀಲಂಕಾ 50 ಓವರ್​ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡು 230 ರನ್​ಗಳಿಸಿತು.

ಕೊಲಂಬೋದಲ್ಲಿ ರೋಹಿತ್​ ಉಗ್ರಾವತಾರ
231 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಟೀಮ್​ ಇಂಡಿಯಾಗೆ ಸಾಲಿಡ್​ ಓಪನಿಂಗ್​ ಸಿಗ್ತು. ಸಿಕ್ಸ್​ ಸಿಡಿಸಿ ಅಕೌಂಟ್​ ಓಪನ್​ ಮಾಡಿದ ರೋಹಿತ್​ ಶರ್ಮಾ, 33 ಎಸೆತಕ್ಕೆ ಹಾಫ್​ ಸೆಂಚುರಿ ಕಂಪ್ಲೀಟ್​ ಮಾಡಿದ್ರು. 7 ಬೌಂಡರಿ, 3 ಸಿಕ್ಸರ್​ ಸಹಿತ 58 ರನ್​ ಚಚ್ಚಿದ್ರು.

ಇದನ್ನೂ ಓದಿ:‘ಮಗು ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನ್ ಹೇಳಲಿ..’ ಪಿಎಸ್​ಐ ಪರಶುರಾಮ್ ಪತ್ನಿ ಕಣ್ಣೀರು

ಅಬ್ಬರದ ಆರಂಭ.. ಬಳಿಕ ದಿಢೀರ್​ ಕುಸಿತ
ರನ್​ಗಳಿಕೆಗೆ ತಿಣುಕಾಡಿದ ಶುಭ್​ಮನ್​ ಗಿಲ್​ 35 ಎಸೆತ ಎದುರಿಸಿ 16 ರನ್​ಗಳಿಸಿ ಔಟಾದ್ರೆ, ಇದ್ರ ಬೆನ್ನಲ್ಲೇ ರೋಹಿತ್​ ಶರ್ಮಾ ಪೆವಿಲಿಯನ್​ ಸೇರಿದ್ರು. ವಾಷಿಂಗ್ಟನ್​ ಸುಂದರ್​ 1 ಬೌಂಡರಿಗೆ ಸುಸ್ತಾದರು. ಬಿಗ್ ಇನ್ನಿಂಗ್ಸ್​ ಕಟ್ಟುವ ಭರವಸೆ ಮೂಡಿದ್ದ ವಿರಾಟ್ ಕೊಹ್ಲಿ, ಶ್ರೇಯಸ್​ ಅಯ್ಯರ್​ ನಿರಾಸೆ ಮೂಡಿಸಿದರು. ವಿಕೆಟ್​ ನಷ್ಟವಿಲ್ಲದೇ 75 ರನ್​ಗಳಿಸಿದ್ದ ಟೀಮ್​ ಇಂಡಿಯಾ, 132 ರನ್​ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್​ ಕಳೆದುಕೊಳ್ತು. ಸಂಕಷ್ಟಕ್ಕೆ ಸಿಲುಕಿತ್ತು.

ರಾಹುಲ್​-ಅಕ್ಷರ್​ ತಾಳ್ಮೆಯ ಆಟಕ್ಕೆ ಲಂಕಾ ಕಂಗಾಲ್​
ಸತತ ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾಗೆ ಕೆ.ಎಲ್​ ರಾಹುಲ್, ಅಕ್ಷರ್​ ಪಟೇಲ್​ ಆಸರೆಯಾದ್ರು. ಶ್ರೀಲಂಕಾ ಮೇಲುಗೈ ಸಾಧಿಸಿದ್ದ ಸಂದರ್ಭದಲ್ಲಿ ತಾಳ್ಮೆಯ ಆಟವಾಡಿದ ಜೋಡಿ 57 ರನ್​ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ರಾಹುಲ್​ 31 ರನ್​ಗಳಿಸಿದ್ರೆ, ಅಕ್ಷರ್​ ಪಟೇಲ್​ 33 ರನ್​ಗಳಿಸಿ ಔಟಾದ್ರು.

ಗೆಲುವಿನ ಆಸೆ ಚಿಗುರಿಸಿದ್ದ ಶಿವಂ ದುಬೆ
ಆಕ್ಷರ್ ಔಟಾದರೂ ಶಿವಂ ದುಬೆ ಗೆಲುವಿನ ಆಸೆ ಜೀವಂತವಾಗಿರಿಸಿದ್ದರು. 2 ಸಿಕ್ಸರ್​​​, 1 ಬೌಂಡರಿ ಒಳಗೊಂಡ 25 ರನ್ ಸಿಡಿಸಿದ್ದ ಶಿವಂ ದುಬೆ, ಪಂದ್ಯವನ್ನು ಟೈ ಮಾಡಿಕೊಂಡಿದ್ದರು. ಇನ್ನೇನು ಟೀಮ್ ಇಂಡಿಯಾ ಗೆದ್ದೇ ಬಿಟ್ಟಿತು ಎಂಬ ನಿರೀಕ್ಷೆಯಲ್ಲೇ ಇತ್ತು.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ..?

ಅನಿರೀಕ್ಷಿತ ತಿರುವು ನೀಡಿದ್ದೇ ಅಸಲಂಕಾ..!
48ನೇ ಓವರ್​ನ 3ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಶಿವಂ ದುಬೆ, ಪಂದ್ಯವನ್ನೈ ಟೈ ಮಾಡಿಕೊಂಡಿದ್ದರು. 15 ಎಸೆತಗಳಲ್ಲಿ 1 ರನ್​ ಗಳಿಸಬೇಕಾದ ಸವಾಲು ಟೀಮ್ ಇಂಡಿಯಾ ಮುಂದಿತ್ತು. ಬಿಗ್ ಹಿಟ್ಟರ್​ ಶಿವಂ ದುಬೆ ಕ್ರೀಸ್​ನಲ್ಲಿದ್ದರು. ಟೀಮ್ ಇಂಡಿಯಾ ಕ್ಯಾಂಪ್​ನಲ್ಲಿ ಗೆಲುವಿನ ಆಸೆ ಮೂಡಿತ್ತು. ಇದೇ ಓವರ್​ನ 4ನೇ ಎಸೆತದಲ್ಲೇ ಅಸಲಂಕಾ, ಶಿವಂ ದುಬೆ ವಿಕೆಟ್ ಪಡೆದು ಶಾಕ್ ನೀಡಿದರು.
ಈ ಬಳಿಕ ಬಂದ ಅರ್ಷದೀಪ್, ಸಿಂಗಲ್​​​ ರನ್ ಹೊಡೆದಾದ್ರು ಗೆಲ್ಲಿಸ್ತಾರೆ ಅನ್ನೋ ನಿರೀಕ್ಷಕ್ಷೆ ಇತ್ತು. ಭಾರೀ ಹೊಡೆತಕ್ಕೆ ಕೈ ಹಾಕಿದ ಅರ್ಷದೀಪ್ ಸಿಂಗ್, ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಗೆಲ್ಲಬೇಕಿದ್ದ ಪಂದ್ಯ ಟೈನಲ್ಲೇ ಅಂತ್ಯವಾಯ್ತು. ಸ್ವಯಃಕೃತ ಅಪರಾಧಕ್ಕೆ ಬೆಲೆ ತೆತ್ತುವಂತಾಯ್ತು.

ಇದನ್ನೂ ಓದಿ:ವರ್ಗಾವಣೆಗೊಂಡಿದ್ದ PSI ಪರಶುರಾಮ ಹಠಾತ್ ಸಾವು; ಕುಟುಂಬಸ್ಥರಿಂದ ಗಂಭೀರ ಆರೋಪ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಂದ್ಯಕ್ಕೆ ಅನಿರೀಕ್ಷಿತ ಟ್ವಿಸ್ಟ್​ ಕೊಟ್ಟ ಅಸಲಂಕಾ.. ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತ ಟೀಂ ಇಂಡಿಯಾ..!

https://newsfirstlive.com/wp-content/uploads/2024/08/Team-India-4.jpg

Load More