ಗಂಭೀರ್ ಅಧ್ಯಕ್ಷತೆಯಲ್ಲಿ ಎಲ್ಲರೂ ಬೌಲರ್​ಗಳೇ​​.. 4 ವಿಕೆಟ್ ಕಿತ್ತ ಸೂರ್ಯ, ರಿಂಕು ಸಿಂಗ್..!

author-image
Ganesh
Updated On
IND vs BAN T20; ಈ ಪಿಚ್​ನಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡಿದ್ರೆ ಸೂರ್ಯಗೆ ಅದೃಷ್ಟ, ಯಾಕೆ?
Advertisment
  • ಬೌಲರ್​ಗಳೇ ನಾಚುವಂತೆ ವಿಕೆಟ್ ಕಿತ್ತುಕೊಟ್ಟ ಸೂರ್ಯ, ರಿಂಕು ಸಿಂಗ್
  • ಇನ್ಮುಂದೆ ಟೀಂ ಇಂಡಿಯಾಗೆ ಕಾಡಲ್ಲ ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ
  • ಪರಾಗ್, ಸೂರ್ಯ, ರಿಂಕುನಲ್ಲಿರುವ ಮತ್ತೊಂದು ಕೌಶಲ್ಯ ಕೆದಕಿದ ಗಂಭೀರ್

ಶ್ರೀಲಂಕಾ ವಿರುದ್ಧ ಟಿ-20 ಸರಣಿಯನ್ನು ಟೀಂ ಇಂಡಿಯಾ ಕ್ಲೀನ್​ಸ್ವೀಪ್ ಮಾಡಿದೆ. ನಿನ್ನೆ ನಡೆದ ಕೊನೆಯ ಹಾಗೂ ಮೂರನೇ ಪಂದ್ಯವನ್ನು ಭಾರತ ತಂಡ ಸೋತು ಗೆದ್ದಿದೆ. ಸಮ ಬಲದ ಹೋರಾಟ ಹಾಗೂ ಕೊನೆಯಲ್ಲಿ ನಡೆದ ಸೂಪರ್​ ಓವರ್ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕವಾಗಿ ಗೆಲುವು ಸಾಧಿಸಿದೆ.

ಗಂಭೀರ್ ಯಶಸ್ವಿ..!

ಗೌತಮ್ ಗಂಭೀರ್, ಟೀಂ ಇಂಡಿಯಾದ ಮುಖ್ಯ ಕೊಚ್ ಆದಮೇಲೆ ಮೊದಲ ಟಿ-20 ಸರಣಿ ಇದಾಗಿತ್ತು. ಟೀಂ ಇಂಡಿಯಾದಲ್ಲಿ ಒಂದಷ್ಟು ಕಂಡೀಷನ್​ಗಳ ಜೊತೆಗೆ ಬಿಗಿ ಹಿಡಿತದೊಂದಿಗೆ ತಂಡಕ್ಕೆ ಎಂಟ್ರಿಯಾಗಿದ್ದ ಗಂಭೀರ್​ ಅದರಲ್ಲಿ ಯಶಸ್ವಿ ಆದಂತೆ ಕಾಣ್ತಿದೆ. ಮೊದಲ ಸರಣಿಯಲ್ಲೇ ಒಂದಷ್ಟು ಪ್ರಯೋಗಕ್ಕೆ ಮುಂದಾಗಿದ್ದರು.

ಇದನ್ನೂ ಓದಿ:ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..!

ಕೆಲವು ಆಟಗಾರರು ಅದನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜು ಸ್ಯಾಮ್ಸನ್ ಅವರಂಥ ಆಟಗಾರರು ಮತ್ತೆ ಫೇಲ್ ಆಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತ ತಂಡ ಮೊದಲಿನಿಂದಲೂ ಹಿನ್ನಡೆ ಅನುಭವಿಸುತ್ತಿತ್ತು. ಇನ್ಮುಂದೆ ಆ ಕೊರತೆ ಭಾರತ ತಂಡಕ್ಕೆ ಇರಲ್ಲ ಎಂದೆನಿಸುತ್ತದೆ. ಯಾಕೆಂದರೆ ಗಂಭೀರ್ ಅವರು, ರಿಯಾನ್ ಪರಾಗ್​ ಅವರಲ್ಲಿರುವ ಬೌಲಿಂಗ್ ಕಲೆಯನ್ನು ಹುಡುಕಿ ಮೇಲೆತ್ತಿದ್ದಾರೆ.

ಬಲಿಷ್ಠ ಬೌಲರ್​ಗಳಿಗೆ ಸೇಫ್ ಔಟ್..!

ಅದರಂತೆ ನಿನ್ನೆಯ ಪಂದ್ಯದಲ್ಲಿ ಯಾರೂ ನಿರೀಕ್ಷೆ ಮಾಡಿರದ ಅಚ್ಚರಿಗಳು ನಡೆದವು. ರಿಂಕು ಸಿಂಗ್ ಗಾಗೂ ಸರ್ಯಕುಮಾರ್ ಯಾದವ್ ಕೂಡ ಬೌಲಿಂಗ್ ಮಾಡಿ ಸೈ ಎನಿಸಿಕೊಂಡರು. ವಿಶೇಷ ಅಂದರೆ ಯಾವ ಬೌಲರ್ಸ್​​ಗೂ ಕಮ್ಮಿ ಇಲ್ಲದ ರೀತಿಯಲ್ಲಿ ಬೌಲಿಂಗ್ ಮಾಡಿದ ಅವರು ಇಬ್ಬರು ಸೇರಿ 4 ವಿಕೆಟ್ ಪಡೆದುಕೊಂಡರು.

ಇದನ್ನೂ ಓದಿ:ಕೇರಳ ಗುಡ್ಡ ಕುಸಿತದಲ್ಲಿ ಕರ್ನಾಟಕದ ಅಜ್ಜಿ, ಮೊಮ್ಮಗ ನಾಪತ್ತೆ.. ಇದೇ ಕುಟುಂಬದ ಮೂವರ ರೋಚಕ ರಕ್ಷಣೆ

ಕ್ಯಾಪ್ಟನ್ ಸೂರ್ಯ ಒಂದು ಓವರ್ ಮಾಡಿ ಕೇವಲ ಐದು ರನ್​ ನೀಡಿ 2 ವಿಕೆಟ್ ಪಡೆದರು. ಇನ್ನು ಬೆಂಕಿ ಬೌಲಿಂಗ್ ಮಾಡಿದ ರಿಂಕು ಸಿಂಗ್ 6 ಬಾಲ್ ಹಾಕಿ ಕೇವಲ ಮೂರು ರನ್ ನೀಡಿ ಎರಡು ವಿಕೆಟ್ ಪಡೆದರು. ಈ ಮೂಲಕ ಬೌಲರ್​​ಗಳ ಬಳಿ ಆಗದಿದ್ದನ್ನು ಸ್ಫೋಟಕ ಬ್ಯಾಟ್ಸ್​​ಮನ್​​ಗಳಿಬ್ಬರು ಮಾಡಿ ತೋರಿಸಿದ್ದಾರೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment