31ರನ್​ ಅಂತರದಲ್ಲಿ 7 ವಿಕೆಟ್ ಬೇಟೆ.. ಅದ್ಭುತ ಆರಂಭ ಕಂಡರೂ ಲಂಕನ್ನರ ಕಟ್ಟಿಹಾಕಿದ್ದು ಈ ಆಟಗಾರರು..!

author-image
Ganesh
Updated On
31ರನ್​ ಅಂತರದಲ್ಲಿ 7 ವಿಕೆಟ್ ಬೇಟೆ.. ಅದ್ಭುತ ಆರಂಭ ಕಂಡರೂ ಲಂಕನ್ನರ ಕಟ್ಟಿಹಾಕಿದ್ದು ಈ ಆಟಗಾರರು..!
Advertisment
  • ಸಿಂಹಳೀಯರ ಬೇಟೆಯಾಡಿದ ಇಂಡಿಯನ್​ ಟೈಗರ್ಸ್​
  • ಉತ್ತಮ ಆರಂಭ ಪಡೆದ ಲಂಕಾ ದಿಢೀರ್​ ಕುಸಿದಿದ್ದೇಗೆ..?
  • ಭಾರತದ ಭರ್ಜರಿ ಆಟ, ತವರಿನಲ್ಲಿ ತಡವರಿಸಿದ ಲಂಕಾ

ಪಲ್ಲೆಕೆಲೆಯಲ್ಲಿ ನಡೆದ ಶ್ರೀಲಂಕಾ ಎದುರಿನ 2ನೇ T20 ಪಂದ್ಯದಲ್ಲೂ ಟೀಮ್​ ಇಂಡಿಯನ್​ ಬೌಲರ್ಸ್​​ಗಳದ್ದೇ ದರ್ಬಾರ್​. ಉತ್ತಮ ಆರಂಭವನ್ನೇ ಪಡೆದ ಶ್ರೀಲಂಕಾ ತಂಡ ಅಂತಿಮ ಹಂತದಲ್ಲಿ ದಿಢೀರ್​ ಕುಸಿತ ಕಾಣ್ತು. ಜಸ್ಟ್​ 31 ರನ್​ಗಳಿಗೆ ಲಂಕನ್ನರ 7 ವಿಕೆಟ್​ಗಳು​ ಉಡೀಸ್​​ ಆದ್ವು.

ಟಾಸ್​ ಸೋತರೂ ಬಿಗ್​ ಸ್ಕೋರ್​ ಕಲೆ ಹಾಕೋ ಲೆಕ್ಕಾಚಾರದಲ್ಲೇ ಶ್ರೀಲಂಕಾ ಪೆಲ್ಲೆಕೆಲೆ ಗ್ರೌಂಡ್​ನಲ್ಲಿ ಬ್ಯಾಟಿಂಗ್​ಗಿಳಿಯಿತು. ಅತ್ಯದ್ಭುತ ಆರಂಭವನ್ನೂ ಮಾಡ್ತು. ಅಂತ್ಯದಲ್ಲಿ ಭಾರತದ ಬೌಲಿಂಗ್​ ಮುಂದೆ ಮಂಡಿಯೂರಿತು. ಇಂಡಿಯನ್​​ ಟೈಗರ್ಸ್​, ಲಂಕನ್​ ಲಯನ್ಸ್​ ಅವರದ್ದೇ ನೆಲದಲ್ಲಿ ಬೇಟೆಯಾಡಿ ಬಿಟ್ಟರು.

ಇದನ್ನೂ ಓದಿ:Good News.. ಸುನಿತಾ ವಿಲಿಯಮ್ಸ್​ ಬಗ್ಗೆ ಬಿಗ್​ ಅಪ್​ಡೇಟ್ ಕೊಟ್ಟ NASA

publive-image

ಮೊದಲು ಬ್ಯಾಟಿಂಗ್​ಗಿಳಿದ ಶ್ರೀಲಂಕಾ ಪವರ್​ ಪ್ಲೇನಲ್ಲಿ ಸಖತ್​ ಆಟವಾಡಿತು. ಆರಂಭಿಕ ಆಟಗಾರ 10 ರನ್​ಗಳಿಸಿ ಆರ್ಷ್​​ದೀಪ್​ ಸಿಂಗ್​ ಬೌಲಿಂಗ್​ನಲ್ಲಿ ಔಟಾದ್ರು. ಬಳಿಕ ಕುಸಾಲ್​ ಪೇರೆರಾ, ಫಾತುಮ್​ ನಿಸಂಕ ತಂಡಕ್ಕೆ ಚೇತರಿಕೆ ನೀಡಿದ್ರು. ಪವರ್​ ಪ್ಲೇನಲ್ಲಿ ಪವರ್​ ಫುಲ್ ಆಟವಾಡಿ 54 ರನ್​ಗಳಿಸಿದ್ರು. 1 ವಿಕೆಟ್​ ಕಳೆದುಕೊಂಡ ಲಂಕಾ 9ರ ರನ್​ರೇಟ್​ನಲ್ಲಿ ರನ್​ಗಳಿಸ್ತು.

ಪವರ್​ ಪ್ಲೇನಲ್ಲಿ ಸಾಲಿಡ್​ ಆರಂಭ ಪಡೆದ ಲಂಕನ್ನರು ಮಿಡಲ್​ ಓವರ್​ನಲ್ಲೂ ಡಿಸೆಂಟ್​ ರನ್​ರೇಟ್​ ಮೆಂಟೇನ್​ ಮಾಡಿದ್ರು. 32 ರನ್​ಗಳಿಸಿ ಫಾತುಮ್​ ನಿಸಂಕ ಔಟಾದ್ರು. ಬಳಿಕ ಜೊತೆಯಾದ ಕಮಿಂದು ಮೆಂಡೀಸ್​- ಕುಸಾಲ್​ ಪರೇರಾ, ಭಾರತೀಯ ಬೌಲರ್​ಗಳನ್ನ ಸಮರ್ಥವಾಗಿ ಎದುರಿಸಿದ್ರು. 7ರಿಂದ 15ನೇ ಓವರ್​ನಲ್ಲಿ 8.4ರ ರನ್​​ರೇಟ್​ನಲ್ಲಿ ರನ್​ಗಳಿಸಿದ ಲಂಕಾ, 76 ರನ್​ ಕಲೆ ಹಾಕ್ತು. 15 ಓವರ್​ ಅಂತ್ಯಕ್ಕೆ ಕೇವಲ 2 ವಿಕೆಟ್​ ಕಳೆದುಕೊಂಡು 130 ರನ್​ಗಳಿಸಿತ್ತು.

ಇದನ್ನೂ ಓದಿ:‘ಇನ್ನೆಷ್ಟು ಅವಕಾಶ ಕೊಡಬೇಕು..’ ಗೋಲ್ಡನ್ ಡಕ್ ಆದ ಟೀಂ ಇಂಡಿಯಾ ಆಟಗಾರನ ವಿರುದ್ಧ ಆಕ್ರೋಶ

publive-image

ಡೆತ್​ ಓವರ್​
ಪವರ್​ ಪ್ಲೇ, ಮಿಡಲ್​ ಓವರ್​ಗಳಲ್ಲಿ ಉತ್ತಮ ಆಟವಾಡಿದ ಸಿಂಹಳೀಯರನ್ನ ಡೆತ್​ ಓವರ್​ಗಳಲ್ಲಿ ಭಾರತೀಯ ಬೌಲರ್ಸ್​ ಬೇಟೆಯಾಡಿದ್ರು. 16ರಿಂದ 20ನೇ ಓವರ್​ನಲ್ಲಿ ಕೇವಲ 31 ರನ್​ ಬಿಟ್ಟು ಕೊಟ್ಟು 7 ವಿಕೆಟ್​ ಕಬಳಿಸಿದರು.

ರವಿ ಬಿಷ್ನೋಯ್​ ಮ್ಯಾಜಿಕ್​ಗೆ ಶ್ರೀಲಂಕಾ ಸ್ಟನ್​..!
16ನೇ ಓವರ್​ ಬೌಲಿಂಗ್​ ಮಾಡಿದ ರವಿ ಬಿಷ್ನೋಯ್​, ಡಬಲ್​ ಶಾಕ್​ ಕೊಟ್ರು. ದಶುನ ಶನಕ, ವನಿಂದ ಹಸರಂಗಗೆ ಬ್ಯಾಕ್​ ಟು ಬ್ಯಾಕ್​ ಗೇಟ್​ಪಾಸ್ ನೀಡಿದರು. 4 ಓವರ್​ ಬೌಲಿಂಗ್​ ಮಾಡಿ ಕೇವಲ 26 ರನ್​ ಬಿಟ್ಟುಕೊಟ್ಟ ಬಿಷ್ನೋಯ್​, ಒಟ್ಟು 3 ವಿಕೆಟ್ ಕಬಳಿಸಿದರು.

ಇದನ್ನೂ ಓದಿ:RCB ಇಂದ ಈ 3 ಆಟಗಾರರು ಮಾತ್ರ ರಿಟೈನ್; ಉಳಿದವರಿಗೆ ಗೇಟ್​ಪಾಸ್​..!

publive-image

ಸಿಂಹಳೀಯರ ಬೇಟೆಯಾಡಿದ ಅಕ್ಷರ್​, ಆರ್ಷ್​​ದೀಪ್
ಬಿಷ್ನೋಯ್​ ಜೊತೆಗೆ ಅಕ್ಷರ್​ ಪಟೇಲ್, ಆರ್ಷ್​ದೀಪ್​ ಸಿಂಗ್​ ಕೂಡ ಎಕಾನಮಿಕಲ್​ ಸ್ಪೆಲ್​ ಹಾಕಿದ್ರು. ಸಿಂಹಳೀಯರನ್ನ ಬಿಡದೇ ಕಾಡಿದ್ರು ಇವರಿಬ್ಬರು ತಲಾ 2 ವಿಕೆಟ್​ ಬೇಟೆಯಾಡಿದ್ರು. 2 ಓವರ್​ ಬೌಲಿಂಗ್​ ಮಾಡಿದ ಹಾರ್ದಿಕ್​ ಪಾಂಡ್ಯ ಎಕ್ಸ್​ಪೆನ್ಸಿವ್​ ಅನ್ನಿಸಿದ್ರೂ 2 ವಿಕೆಟ್​ ಕಬಳಿಸುವಲ್ಲಿ ಯಶಸ್ವಿಯಾದರು. ಪರಿಣಾಮ 161 ರನ್​ಗಳಿಗೆ ಶ್ರೀಲಂಕಾದ ಆಟ ಅಂತ್ಯವಾಯ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಭಾರತ ತಂಡಕ್ಕೆ ಮಳೆ ಅಡ್ಡಿಯಾಯ್ತು. ಕೊನೆಗೆ ಡಿಎಲ್​ಎಸ್ ನಿಯಮದ ಪ್ರಕಾರ ಜಾರಿಯಾಗಿ 8 ಓವರ್​ ಕಡಿತಗೊಂಡಿತು. ಭಾರತ ಗೆಲ್ಲಲು 78 ರನ್​ಗಳಿಸಬೇಕಿತ್ತು. ಅದನ್ನು ಟೀಂ ಇಂಡಿಯಾ ಮೂರು ವಿಕೆಟ್ ಕಳೆದುಕೊಂಡು ನಿಗಧಿತ ಗುರಿಯನ್ನು ಮುಟ್ಟಿತು. ಈ ಮೂಲಕ ಭಾರತ ತಂಡ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿ, ಟಿ20 ಸರಣಿಯನ್ನು ವಶಪಡಿಸಿಕೊಂಡಿತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment