newsfirstkannada.com

ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!

Share :

Published July 19, 2024 at 10:02am

    ಲಂಕಾ ಪ್ರವಾಸದ T20 ತಂಡಕ್ಕೆ ಸೂರ್ಯ ಸಾರಥಿ..!

    ಹಾರ್ದಿಕ್​ ಪಾಂಡ್ಯಗೆ ಶಾಕ್​, ಸೂರ್ಯನಿಗೆ ಸರ್​ಪ್ರೈಸ್​

    ತ್ರಿಮೂರ್ತಿಗಳ ಬ್ಯಾಟಿಂಗ್​, ಸೂರ್ಯನಿಗೆ ಪಟ್ಟ..?

ಕಳೆದ ಕೆಲವು ದಿನಗಳಿಂದ ಕ್ರಿಕೆಟ್​ ವಲಯದಲ್ಲಿದ್ದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಶ್ರೀಲಂಕಾ ಪ್ರವಾಸಕ್ಕೆ ಕೊನೆಗೂ ಟೀಮ್​ ಇಂಡಿಯಾ ಪ್ರಕಟಗೊಂಡಿದೆ. ಮಿಸ್ಟರ್​​​ 360 ಡಿಗ್ರಿ ಬ್ಯಾಟರ್​​ಗೆ ಟಿ20 ನಾಯಕತ್ವ ಒಲಿದಿದ್ದೇಗೆ ಅನ್ನೋ ಮಿಸ್ಟ್ರಿ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಸೂರ್ಯನಿಗೆ ಸರ್​​ಪ್ರೈಸ್​​​ ರೀತಿಯಲ್ಲಿ ಸಾರಥ್ಯ ಸಿಕ್ಕಿದ್ದೇಗೆ?

ಶ್ರೀಲಂಕಾ ಪ್ರವಾಸಕ್ಕೆ ಟೀಮ್​ ಇಂಡಿಯಾ ಕೊನೆಗೂ ಪ್ರಕಟಗೊಂಡಿದೆ. ಹೈವೋಲ್ಟೆಜ್​ ಮೀಟಿಂಗ್​ನ ಬಳಿಕ ಸಾಕಷ್ಟು ಲೆಕ್ಕಾಚಾರಗಳನ್ನ ಹಾಕಿ ಲಂಕಾ ಪ್ರವಾಸಕ್ಕೆ ಸೆಲೆಕ್ಷನ್​ ಕಮಿಟಿ ತಂಡವನ್ನ ಅನೌನ್ಸ್ ಮಾಡಿದೆ. ಏಕದಿನ ಸರಣಿಯ ತಂಡಕ್ಕಿಂತ ಟಿ20 ಸರಣಿಯ ತಂಡದ ಆಯ್ಕೆಯೇ ಸದ್ಯದ ಹಾಟ್​ ಟಾಪಿಕ್​. ಇದಕ್ಕೆಲ್ಲಾ ಕಾರಣ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​.

ಇದನ್ನೂ ಓದಿ:ಮೀಸಲಾತಿ ರದ್ದತಿಗಾಗಿ ಭಾರೀ ಹಿಂಸಾಚಾರ, 39 ಜನ ಸಾವು.. 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಲಂಕಾ ಪ್ರವಾಸದ T20 ತಂಡಕ್ಕೆ ಸೂರ್ಯ ಸಾರಥಿ..!
ಟೀಮ್​ ಅನೌನ್ಸ್​ಗೂ ಮುನ್ನ ಇದ್ದ ಅಂತೆ-ಕಂತೆಗಳಿಗೆಲ್ಲಾ ಇದೀಗ ಅಧಿಕೃತ ತೆರೆ ಬಿದ್ದಿದೆ. ಮಿಸ್ಟರ್​ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್​ ಯಾದವ್​ಗೆ ನಾಯಕತ್ವ ಒಲಿದಿದೆ. ಸೂರ್ಯಕುಮಾರ್​​ ಸಾರಥ್ಯದ ತಂಡವನ್ನು ಲಂಕಾ ಪ್ರವಾಸದ ಟಿ20 ಸರಣಿಗೆ ಸೆಲೆಕ್ಷನ್​​ ಕಮಿಟಿ ಪ್ರಕಟಿಸಿದೆ. ಈ ಬೆನ್ನಲ್ಲೇ ನಾಯಕತ್ವದ ರೇಸ್​ನಲ್ಲೇ ಇಲ್ಲದ ಮಿಸ್ಟರ್​ 360ಗೆ ಸಾರಥ್ಯ ಒಲಿದಿದ್ದು ಹೇಗೆ ​ಅನ್ನೋ ಮಿಸ್ಟ್ರಿ ಎಲ್ಲರನ್ನ ಕಾಡ್ತಿದೆ.

ಹಾರ್ದಿಕ್​​ನ ಹಿಂದಿಕ್ಕಿ ಸೂರ್ಯನಿಗೆ ಪಟ್ಟ ಒಲಿದಿದ್ದೇಗೆ?
ಹಾರ್ದಿಕ್​ ಪಾಂಡ್ಯ T20 ತಂಡದ ಉಪನಾಯಕನ ಪಟ್ಟದಲ್ಲಿದ್ದಿದ್ದರಿಂದ ಭವಿಷ್ಯದ ಕ್ಯಾಪ್ಟನ್​​ ಎಂದೇ ಬಿಂಬಿತವಾಗಿದ್ರು. ರೋಹಿತ್​ ಶರ್ಮಾ ಚುಟುಕು ಫಾರ್ಮೆಟ್​ಗೆ ಗುಡ್​ ಬೈ ಹೇಳಿದ ಬಳಿಕ ಪಾಂಡ್ಯ​ಗೆ ಪಟ್ಟಾಭಿಷೇಕ ಬಹುತೇಕ ಕನ್​ಫರ್ಮ್​ ಎನ್ನಲಾಗಿತ್ತು. ಆದ್ರೀಗ ಸರ್​ಪ್ರೈಸ್​ ಎನ್ನುವಂತೆ, ಕ್ಯಾಪ್ಟನ್ಸಿ ರೇಸ್​ನಲ್ಲೇ ಇರದ ಸೂರ್ಯಕುಮಾರ್​ ಯಾದವ್​ಗೆ ನಾಯಕತ್ವ ನೀಡಲಾಗಿದೆ. ತ್ರಿಮೂರ್ತಿಗಳ ಬ್ಯಾಕ್​ ಅಪ್​ನ ಬಲದಿಂದ ಸೂರ್ಯನಿಗೆ ತಂಡದ ಸಾರಥ್ಯ ಸಿಕ್ಕಿದೆ.

ಇದನ್ನೂ ಓದಿ:Breaking ಟ್ರ್ಯಾಕ್ ಮೇಲೆ ಮದ್ಯ ಸೇವನೆ.. ರೈಲು ಹರಿದು ಮೂವರು ಯುವಕರು ದಾರುಣ ಸಾವು

ಮಿಸ್ಟರ್​ 360 ಪರ ಗುರು ಗಂಭೀರ್​ ಬ್ಯಾಟಿಂಗ್​
ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ಕಾರಣಕ್ಕೆ ಸರಣಿಯಿಂದ ಸರಣಿಗೆ ವಿಶ್ರಾಂತಿ ಬೇಡುವ ನಾಯಕ ತಂಡಕ್ಕೆ ಬೇಡ. ಮುಂಬರೋ ಟಿ20 ವಿಶ್ವಕಪ್​ವರೆಗೆ ತಂಡದೊಂದಿಗೆ ಇರುವ ನಾಯಕ ಬೇಕು ಅನ್ನೋ ಬೇಡಿಕೆಯನ್ನ ಹೆಡ್​ ಕೋಚ್​ ಗೌತಮ್​ ಗಂಭೀರ್​ ಸೆಲೆಕ್ಷನ್​ ಕಮಿಟಿ ಮುಂದಿಟ್ಟಿದ್ರು. ಈ ಅಜೆಂಡಾ ಇಟ್ಟುಕೊಂಡೇ ಹಾರ್ದಿಕ್​ ಬದಲು ನಾಯಕತ್ವಕ್ಕೆ ಸೂರ್ಯಕುಮಾರ್​ ಹೆಸರನ್ನ ಪ್ರಸ್ತಾಪಿಸಿದ್ರು. ಆ ಪ್ರಸ್ತಾವಕ್ಕೆ ಇದೀಗ ಅಧಿಕೃತ ಮುದ್ರೆ ಬಿದ್ದಿದೆ.

ಸೂರ್ಯನಿಗೆ ನಿರ್ಗಮಿತ ನಾಯಕ ರೋಹಿತ್​ ಬೆಂಬಲ
ಟೀಮ್​ ಇಂಡಿಯಾದ ಟಿ20 ಮಾದರಿಯ ನಾಯಕತ್ವ ತ್ಯಜಿಸಿರುವ, ಏಕದಿನ ಹಾಗೂ ಟೆಸ್ಟ್​ ತಂಡದ ನಾಯಕನಾಗಿ ಮುಂದುವರೆದಿರೋ ರೋಹಿತ್​ ಶರ್ಮಾ ಬೆಂಬಲ ಕೂಡ ಸೂರ್ಯಕುಮಾರ್​ಗಿದೆ. ರೋಹಿತ್​ – ಸೂರ್ಯ ಒಟ್ಟಾಗಿ ಬೆಳೆದವರು. ಮುಂಬೈ ಹಾಗೂ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡಿದ್ದಾರೆ. ರೋಹಿತ್​ ಅಲಭ್ಯತೆಯಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನ ಸೂರ್ಯಕುಮಾರ್​ ಮುನ್ನಡೆಸಿದ್ದೂ ಇದೆ. ಈ ಎಲ್ಲಾ ಕಾರಣದಿಂದ ಗಂಭೀರ್​ ಸೂರ್ಯನ ಹೆಸರನ್ನು ನಾಯಕನ ಸ್ಥಾನಕ್ಕೆ ಪ್ರಸ್ತಾಪಿಸಿದಾಗ ರೋಹಿತ್​ ಕೂಡ ಸಮ್ಮತಿಸಿದ್ದಾರೆ.

ಅಗರ್ಕರ್​​ಗೂ ಸೂರ್ಯನ ಮೇಲೆ ಒಲವು..!
ಸೆಲೆಕ್ಷನ್​ ಕಮಿಟಿ ಚೇರ್​ ಪರ್ಸನ್​ ಅಜಿತ್​ ಅಗರ್ಕರ್​ಗೂ ಸೂರ್ಯನ ಮೇಲೆ ಒಲವಿತ್ತು. ಸೂರ್ಯ ತಮ್ಮ ತವರಿನ ಆಟಗಾರ ಅನ್ನೋದು ಒಂದು ಕಾರಣ. ಈ ಹಿಂದೆ ಗಂಭೀರ್​ ಕೆಕೆಆರ್​ ನಾಯಕನಾಗಿದ್ದಾಗ, ಸೂರ್ಯ ವೈಸ್​​ ಕ್ಯಾಪ್ಟನ್​ ಆಗಿದ್ದರು. ಇಬ್ಬರ ಕೆಮಿಸ್ಟ್ರಿ ಚನ್ನಾಗಿದೆ. ಯಾವುದೇ ವಿವಾದಗಳಾಗಿಲ್ಲ ಅನ್ನೋದು ಇನ್ನೊಂದು ಕಾರಣ. ಈ ಲೆಕ್ಕಾಚಾರ ಹಾಕಿ, ಸೆಲೆಕ್ಟರ್​ ಅಗರ್ಕರ್​​, ಸೂರ್ಯನನ್ನ ಕ್ಯಾಪ್ಟನ್​ ಆಗಿ ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಟ್ಯಾಂಕರ್​ ಡಿಕ್ಕಿ ಹೊಡೆದು MBBS ವಿದ್ಯಾರ್ಥಿ ಸಾವು.. ಸ್ನೇಹಿತನ ಭೇಟಿಗೆ ಬಂದಾಗ ದುರಂತ

ಒಟ್ಟಿನಲ್ಲಿ ಈ ತ್ರಿಮೂರ್ತಿಗಳ ಕೃಪಾಕಟಾಕ್ಷ ಹಾಗೂ ಭವಿಷ್ಯದ ಲೆಕ್ಕಾಚಾರದ ಬಲದಲ್ಲಿ ಸೂರ್ಯಕುಮಾರ್​ ಟೀಮ್​ ಇಂಡಿಯಾದ ಟಿ20 ನಾಯಕನ ಪಟ್ಟವೇರಿದ್ದಾರೆ. ಈ ಹಿಂದೆ 2 ಸರಣಿಗಳಲ್ಲಿ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಆದ್ರೂ, ಫುಲ್​ ಟೈಮ್​ ಕ್ಯಾಪ್ಟನ್ ಆಗಿ ಲಂಕಾ ಟೂರ್​​ನಲ್ಲಿ ಹೊಸ ಜವಾಬ್ದಾರಿಯನ್ನ ಸೂರ್ಯ ಹೇಗೆ ನಿಭಾಯಿಸ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!

https://newsfirstlive.com/wp-content/uploads/2024/07/SURYAKUMAR-YADAV.jpg

Load More