ಸಾಲಿಡ್ ಓಪನಿಂಗ್ ನೀಡಿದ ಜೈಸ್ವಾಲ್-ಶುಭ್ಮನ್
ಸೂರ್ಯನ ಆರ್ಭಟಕ್ಕೆ ಲಂಕಾ ಪಡೆ ತತ್ತರಿಸಿ ಹೋಯ್ತು
ಲಂಕಾ ವಿರುದ್ಧ ಭಾರತ ತಂಡಕ್ಕೆ 43 ರನ್ಗಳ ಜಯ
ಪಲ್ಲೆಕಲೆಯಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು, ಪವರ್ ಫುಲ್ ಬ್ಯಾಟಿಂಗ್ ಪರ್ಫಾಮೆನ್ಸ್ ನೀಡಿದ್ರು. ಟಾಪ್ ಆರ್ಡರ್ ಟಾಪ್ ಕ್ಲಾಸ್ ಇನ್ನಿಂಗ್ಸ್ ಕಟ್ಟಿದ್ರೆ. ಮಿಡಲ್ ಹಾರ್ಡರ್ನಲ್ಲಿ ಪಂತ್, ಸಮಯೋಚಿತನ ಇನ್ನಿಂಗ್ಸ್ ಕಟ್ಟಿ ಗಮನ ಸೆಳೆದರು. ಅದ್ರಲ್ಲೂ ಕ್ಯಾಪ್ಟನ್ ಸೂರ್ಯನ ಸ್ಫೋಟಕ ಬ್ಯಾಟಿಂಗ್ಗೆ ಲಂಕಾ ಬೌಲರ್ಗಳ ಆಕ್ಷರಶಃ ನಲುಗಿ ಹೋದರು.
ಸಾಲಿಡ್ ಓಪನಿಂಗ್ ನೀಡಿದ ಜೈಸ್ವಾಲ್-ಶುಭ್ಮನ್
ಟಾಸ್ ಸೋತ ಟೀಮ್ ಇಂಡಿಯಾಗೆ ಲಂಕಾ ಬ್ಯಾಟಿಂಗ್ಗೆ ಆಹ್ವಾನಿಸಿತು. ಇದರಂತೆ ಟೀಮ್ ಇಂಡಿಯಾ ಪರ ಬ್ಯಾಟಿಂಗ್ ಆರಂಭಿಸಿದ ಜೈಸ್ವಾಲ್, ಶುಭ್ಮನ್ ಗಿಲ್, ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಕೈಹಾಕಿದರು. ಬೌಂಡರಿಯೊಂದಿಗೆ ಅಕೌಂಟ್ ಓಪನ್ ಮಾಡಿದ ಜೈಸ್ವಾಲ್, ಲಂಕಾ ಬೌಲರ್ಗಳನ್ನ ಮನ ಬಂದಂತೆ ದಂಡಿಸಿದ್ರು.
ಇದನ್ನೂ ಓದಿ:ಬೂಮ್ರಾಗೆ ಬಿಗ್ ಶಾಕ್.. ಟೆಸ್ಟ್ ತಂಡದ ಉಪನಾಯಕನ ಪಟ್ಟದಿಂದ ಕೊಕ್..!
ಜೈಸ್ವಾಲ್ ಹೊಡಿಬಡಿ ಆಟದಿಂದ ಫ್ಯಾನ್ಸ್ಗೆ ಸಖತ್ ಎಂಟರ್ಟೈನ್ಮೆಂಟ್ ನೀಡಿದ್ರೆ, ಮತ್ತೊಂದು ತುದಿಯಲ್ಲಿ ಶುಭ್ಮನ್, ಕ್ಲಾಸ್ ಬ್ಯಾಟಿಂಗ್ನೊಂದಿಗೆ ಲಂಕಾ ಬೌಲಿಂಗ್ ದಾಳಿಯನ್ನ ಉಡೀಸ್ ಮಾಡಿದ್ರು. ನಾನಾ.. ನೀನಾ ಎಂಬಂತೆ ರನ್ ಗಳಿಸಿದ ಈ ಜೋಡಿ, ಪವರ್ ಪ್ಲೇನಲ್ಲೇ ಸಿಡಿಲಬ್ಬರದ 74 ರನ್ ಸಿಡಿಸಿ ಸಾಲಿಡ್ ಓಪನಿಂಗ್ ನೀಡಿದ್ರು.
ಗಿಲ್ 34 ರನ್.. ಜೈಸ್ವಾಲ್ 40ಕ್ಕೆ ಔಟ್..!
ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವಾಡಿದ ಈ ಜೋಡಿ, ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ರು. 16 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಒಳಗೊಂಡ 34 ರನ್ ಸಿಡಿಸಿದ್ದ ಶುಭ್ಮನ್, ಪವರ್ ಪ್ಲೇನ ಕೊನೆ ಎಸೆತದಲ್ಲಿ ಬಾರೀ ಹೊಡೆತಕ್ಕೆ ಕೈಹಾಕಿ ಕ್ಯಾಚ್ ನೀಡಿ ನಿರ್ಗಮಿಸಿದರು. ಗಿಲ್ ವಿಕೆಟ್ ಪತನದ ಬೆನ್ನಲ್ಲೇ 21 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಒಳಗೊಂಡ 40 ರನ್ ಸಿಡಿಸಿದ್ದ ಯಶಸ್ವಿ ಜೈಸ್ವಾಲ್, ಹಸರಂಗ ಗೂಗ್ಲಿಗೆ ಜಡ್ಜ್ ಮಾಡುವಲ್ಲಿ ವಿಫಲರಾಗಿ ಸ್ಟಂಪ್ ಔಟ್ ಆಗಿ ನಿರಾಸೆ ಅನುಭವಿಸಿದ್ರು.
ಇದನ್ನೂ ಓದಿ:ಸ್ಟಾರ್ ಬೌಲರ್ಸ್ ನಾಚುವಂತೆ ಬೌಲಿಂಗ್.. ಕೇವಲ 14 ಬಾಲ್ನಲ್ಲಿ ಲಂಕಾ ಪಡೆಯ ಬೆನ್ನೆಲುಬು ಮುರಿದ ಪರಾಗ್..!
ಸೂರ್ಯಗೆ ಅರ್ಧಶತಕದ ಸಂಭ್ರಮ
ಗಿಲ್, ಯಶಸ್ವಿ ಜೈಸ್ವಾಲ್ ವಿಕೆಟ್ ಪತನದ ಬಳಿಕ ನಡೆದಿದ್ದು ಸೂರ್ಯನ ಆಟ. ಸ್ಫೋಟಕ ಆಟವಾಡಿದ ಸೂರ್ಯುಕುಮಾರ್, ಪಂತ್ ಜೊತೆ 3ನೇ ವಿಕೆಟ್ಗೆ 76 ರನ್ಗಳ ಜೊತೆಯಾಟವಾಡಿದರು. 22 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ಸೂರ್ಯಕುಮಾರ್, 26 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಒಳಗೊಂಡ 58 ರನ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ಪಂತ್ 23 ಎಸೆತಕ್ಕೆ 20 ರನ್.. ಕೊನೆ 10 ಎಸೆತಕ್ಕೆ 29 ರನ್..!
ಸೂರ್ಯ ಔಟಾಗಿದ್ದೇ ಲೋವರ್ ಆರ್ಡರ್ ಬ್ಯಾಟರ್ಗಳ ಪರೇಡ್ ಶುರುವಾಯ್ತು. ಈ ವೇಳೆ ಬಿಗ್ ಟಾರ್ಗೆಟ್ ಸೆಟ್ ಮಾಡುವ ಹೊಣೆ ಹೇಗಲೇರಿಸಿಕೊಂಡ ರಿಷಭ್ ಪಂತ್, ಸ್ಫೋಟಕ ಆಟಕ್ಕೆ ಕೈಹಾಕಿದರು. ಮೊದಲ 23 ಎಸೆತಗಳಲ್ಲಿ ಜಸ್ಟ್ 20 ರನ್ ಗಳಿಸಿದ್ದ ಪಂತ್, ಕೊನೆ 10 ಎಸೆತಗಳಲ್ಲಿ 29 ರನ್ ಸಿಡಿಸಿದರು. ಅಂತಿಮವಾಗಿ 33 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಒಳಗೊಂಡ 49 ರನ್ ಸಿಡಿಸಿ ಔಟಾದರು.
ಪತಿರಣ ಪವರ್..
ಮೊದಲ ಓವರ್ 13 ರನ್ ಚಚ್ಚಿಸಿಕೊಂಡಿದ್ದ ಪತಿರಣ, ತಾನೆಸೆದ ಕೊನೆ 3 ಓವರ್ಗಳಲ್ಲಿ ಅದ್ಬುತ ದಾಳಿ ಸಂಘಟಿಸಿದರು. ಪರಿಣಾಮ ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್ ವಿಕೆಟ್ ಬೇಟೆಯಾಡಿದರು. 4 ಓವರ್ಗಳ ಕೋಟಾದಲ್ಲಿ 40 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಇನ್ನು ರಿಂಕು ಆಟ 1 ರನ್, ಅಕ್ಷರ್ 10 ರನ್ ಪರಿಣಾಮ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ಗಳ ಸ್ಪರ್ಧಾತ್ಮ ರನ್ ಕಲೆಹಾಕಿತು.
ಇದನ್ನೂ ಓದಿ:ರೀಚಾರ್ಜ್ ಬೆಲೆ ಏರಿಸಿದ್ದ ಕಂಪನಿಗಳಿಗೆ TRAI ಗುನ್ನಾ.. ಮತ್ತೆ ಕಡಿಮೆ ಬೆಲೆಗೆ ಹೊಸ ಪ್ಲಾನ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್