/newsfirstlive-kannada/media/post_attachments/wp-content/uploads/2024/07/indVSzIM.jpg)
ಭಾರತ ತಂಡ ಜಿಂಬಾಬ್ವೆ ವಿರುದ್ಧ ಮೊದಲ ದಿನದ ಟಿ20 ಪಂದ್ಯ ಎದುರಿಸಿದೆ. ಶುಭ್ಮನ್​ ಗಿಲ್​ ನಾಯಕತ್ವದಲ್ಲಿ ಹರಾರೆ ಸ್ಫೋರ್ಟ್ಸ್​​​ ಮೈದಾನದಲ್ಲಿ ಇಂದಿನ ಪಂದ್ಯ ಏರ್ಪಟ್ಟಿತ್ತು. ಆದರೆ ಜಿಂಬಾಬ್ವೆ ತಂಡ ನೀಡಿದ ಟಾರ್ಗೆಟ್​ ಎದುರಿಸಲು ಪರದಾಡಿದ ಟೀಂ ಇಂಡಿಯಾ ಆಟಗಾರರು ತರಗೆಲೆ ಉದುರಿದಂತೆ ವಿಕೆಟ್​ ಒಪ್ಪಿಸಿದ್ದಲ್ಲದೆ, ಸೋಲೊಪ್ಪಿಕೊಂಡಿದ್ದಾರೆ.
ಜಿಂಬಾಬ್ಬೆ ವಿರುದ್ಧ ಟಾಸ್​ ಗೆದ್ದ ನಾಯಕ ಶುಭ್ಮನ್​ ಗಿಲ್​​ ಮೊದಲಿಗೆ ಬೌಲಿಂಗ್​ ಆಯ್ದುಕೊಂಡರು. ಆ ಮೂಲಕ ಬೌಲರ್ಸ್​ಗಳಿಂದ ಜಿಂಬಾಬ್ವೆ ಆಟಗಾರರನ್ನು ಅರ್ಧ ಶತಕವೂ ಬಾರಿಸದಂತೆ ಹಿಡಿದಿಟ್ಟುಕೊಂಡರು. ಅದರಲ್ಲಿ ರವಿ ಬಿಷ್ಣೋಯಿ 4 ವಿಕೆಟ್​ ಕಬಳಿಸಿದರೆ, ವಾಷಿಂಗ್ಟನ್​ ಸುಂದರ್​ 2 ವಿಕೆಟ್​ ಕಬಳಿಸಿದ್ದಾರೆ. ಆವೇಶ್​ ಮತ್ತು ಮುಖೇಶ್​​ ತಲಾ ಒಂದು ವಿಕೆಟ್​ ಕಿತ್ತಿದ್ದಾರೆ. ಒಟ್ಟಿನಲ್ಲಿ ವೇಗಿಗಳ ದಾಳಿಗೆ ಜಿಂಬಾಬ್ವೆ 115 ರನ್​ ಬಾರಿಸಿ ಇಂಡಿಯಾಗೆ ಸುಲಭ ಟಾರ್ಗೆಟ್​ ಕೊಟ್ಟರು.
ಇದನ್ನೂ ಓದಿ: VIDEO: ಆ್ಯಸಿಡ್​ ದಾಳಿಗೆ ನರಳಾಡುತ್ತಿರೋ ವಿದ್ಯಾರ್ಥಿನಿ.. ಎಂಥಾ ಕಲ್ಲೆದೆಯು ಈ ದೃಶ್ಯ ಕಂಡಾಗ ಕರಗದೆ ಇರದು!
ಜಿಂಬಾಬ್ವೆ ನೀಡಿದ ಟಾರ್ಗೆಟ್​​ ಎದುರಿಸಲು ಮೈದಾನಕ್ಕಿಳಿದ ಶುಭ್ಮನ್​ ಗಿಲ್​​ 29 ಎಸೆತದಲ್ಲಿ 5 ಫೋರ್​ ಬಾರಿಸಿ 31 ರನ್​ ಬಾರಿಸಿದರು. ವಾಷಿಂಗ್ಟನ್​ ಸುಂದರ್​ 34 ಎಸೆತ ಎದುರಿಸಿ 27 ರನ್​ ಮತ್ತು ಆವೇಶ್​ ಖಾನ್​ 12 ಎಸೆತದಲ್ಲಿ 16 ರನ್​ ಬಾರಿಸಿದ್ದಾರೆ. ಆದರೆ ಉಳಿದ ಆಟಗಾರರು ಸಿಂಗಲ್​ ಡಿಜಿಟ್​ ಆಟವಾಡಿದರೆ, ಮುಖೇಶ್​ ಮತ್ತು ಖಲೀಲ್​​ ಸೊನ್ನೆ ಸುತ್ತಿದ್ದಾರೆ.
ಇದನ್ನೂ ಓದಿ: ಆರು ಅಂತಸ್ತಿನ ಕಟ್ಟಡ ನೆಲಸಮ.. ಅವಶೇಷದಡಿ ಹಲವರು ಸಿಲುಕಿರುವ ಶಂಕೆ
ಒಟ್ಟಿನಲ್ಲಿ ಜಿಂಬಾಬ್ವೆ ಬೌಲರ್​ಗಳ ದಾಳಿಗೆ ಟೀಂ ಇಂಡಿಯಾದ ಬ್ಯಾಟ್ಸ್​ಮನ್​ಗಳು ತರಗೆಲೆಯಂತೆ ಉದುರಿದ್ದಾರೆ. ಅದರಲ್ಲೂ ತೆಂಡೈ ಚಾತಾರ ಮತ್ತು ಸಿಖಂಧರ್​ ರಾಜಾ ತಲಾ 3 ವಿಕೆಟ್​ ಕಿತ್ತಿದ್ದಾರೆ. ಉಳಿದ ಬೌಲರ್​ಗಳು ತಲಾ ಒಂದರಂತೆ ವಿಕೆಟ್​ ಕಿತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us