newsfirstkannada.com

IND vs ZIM: ಜೈಸ್ವಾಲ್, ದುಬೆ, ಸಂಜು ತಂಡಕ್ಕೆ ಎಂಟ್ರಿ.. ಪ್ಲೇಯಿಂಗ್​-11ನಿಂದ ಮೂವರು ಔಟ್​..?

Share :

Published July 10, 2024 at 9:32am

  ಟೀಮ್ ಇಂಡಿಯಾ, ಜಿಂಬಾಬ್ವೆ 3ನೇ ಟಿ20 ಪಂದ್ಯ

  3ನೇ ಟಿ20 ಪಂದ್ಯಕ್ಕೂ ಮುನ್ನ ತಂಡದಲ್ಲಿ ಗೊಂದಲ

  ಕ್ಯಾಪ್ಟನ್ ಗಿಲ್ ಅಂಡ್ ಕೋಚ್ ಲಕ್ಷ್ಮಣ್​ಗೆ ತಲೆನೋವು

ಜಿಂಬಾಬ್ವೆ ಎದುರಿನ ಮೂರನೇ ಟಿ20 ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಬಲ ಮತ್ತಷ್ಟು ಹೆಚ್ಚಾಗಿದೆ. 2ನೇ ಪಂದ್ಯದಲ್ಲಿ ಯಂಗ್ ಇಂಡಿಯಾ ಆಡಿದ ಆಟದ ಪರಿಗೆ ಕ್ಯಾಪ್ಟನ್ ಶುಭ್​ಮನ್​ ಆ್ಯಂಡ್ ಕೋಚ್ ಲಕ್ಷ್ಮಣ್ ಫುಲ್ ಖುಷ್ ಆಗಿದ್ದಾರೆ. ಈ ಖುಷಿಯ ಬೆನ್ನಲ್ಲೇ ನಾಯಕ ಹಾಗೂ ಕೋಚ್​ಗೆ ಹೊಸ ತಲೆನೋವು ಶುರುವಾಗಿದೆ. ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಕಗ್ಗಂಟಾಗಿದೆ.

ಜಿಂಬಾಬ್ವೆ ಎದುರಿನ ಟಿ20 ಸರಣಿಯಲ್ಲಿ ಯಂಗ್ ಇಂಡಿಯಾ ಸ್ಟ್ರಾಂಗ್​ ಕಮ್​​ಬ್ಯಾಕ್ ಮಾಡಿದೆ. ಯಂಗ್​ಸ್ಟರ್​ಗಳ ಆರ್ಭಟಕ್ಕೆ ಜಿಂಬಾಬ್ವೆ ನಲುಗಿ ಹೋಗಿದೆ. ಬರೋಬ್ಬರಿ 100 ರನ್​ಗಳ ಗೆಲುವು ದಾಖಲಿಸಿರುವ ಯಂಗ್ ಇಂಡಿಯಾ, ಇವತ್ತು ಮತ್ತೊಂದು ಗೆಲುವಿನ ಕನಸು ಕಾಣ್ತಿದೆ.

ಇದನ್ನೂ ಓದಿ:Audi, BMW, 5 ಕೆಜಿ ಬೆಳ್ಳಿ! ಐಷಾರಾಮಿ ಬಂಗಲೆಗಳು.. ಕೋಚ್ ಗಂಭೀರ್​ ಆಸ್ತಿ ಅಬ್ಬಾಬ್ಬ..!

ಇಂದಿನ ಪಂದ್ಯಕ್ಕೂ ಮುನ್ನ ತಂಡಕ್ಕೆ ಚಾಂಪಿಯನ್ ಪ್ಲೇಯರ್​ಗಳ ಎಂಟ್ರಿಯಾಗಿದೆ. ವಿಶ್ವಕಪ್​ನಲ್ಲಿ ಬ್ಯುಸಿಯಾಗಿದ್ದ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶಿವಂ ದುಬೆ ತಂಡ ಕೂಡಿಕೊಂಡಿದ್ದು, ತಂಡಕ್ಕೆ ಆನೆ ಬಲ ಬಂದಿದೆ. ಈ ತ್ರಿಮೂರ್ತಿಗಳ ಎಂಟ್ರಿಯಿಂದ ಟೀಮ್ ಇಂಡಿಯಾ ಬಲ ಹೆಚ್ಚಾಗಿದೆ ನಿಜ. ಈ ಎಂಟ್ರಿ ನಾಯಕ ಶುಭಮನ್ ಗಿಲ್ ಮತ್ತು ಕೋಚ್​ ಲಕ್ಷ್ಮಣ್​​​ಗೆ ಹೊಸ ತಲೆನೋವು ತಂದಿಟ್ಟಿದೆ.

ಜೈಸ್ವಾಲ್ ಎಂಟ್ರಿ.. ಡ್ರಾಪ್ ಯಾರ್ ಆಗ್ತಾರೆ?
ವಿಶ್ವಕಪ್​ ಟೂರ್ನಿಯಿಂದಾಗಿ ಮೊದಲ 2 ಪಂದ್ಯಗಳಿಗೆ ಅಲಭ್ಯರಾಗಿದ್ದ ಯಶಸ್ವಿ ಜೈಸ್ವಾಲ್, ತಂಡಕ್ಕೆ ವಾಪಸ್ ಆಗಿದ್ದಾರೆ. ಇದ್ರಿಂದ ಸಹಜವಾಗೇ ಆರಂಭಿಕರಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. 2ನೇ ಪಂದ್ಯದಲ್ಲಿ ಸಾಲಿಡ್​ ಶತಕ ಸಿಡಿಸಿರೋ ಅಭಿಷೇಕ್ ಶರ್ಮಾ, ಇವತ್ತು ಕಣಕ್ಕಿಳಿತ್ತಾರಾ.? ಇಲ್ವಾ.? ಎಂಬ ಅನುಮಾನವಿದೆ. ಅದ್ಭುತ ಆಟವಾಡಿದ ಅಭಿಷೇಕ್​ಗೆ ಕೊಕ್ ನೀಡುವುದು ಸದ್ಯಕ್ಕೆ ಅಸಾಧ್ಯದ ವಿಚಾರ.

ಸಂಜು ಇನ್​.. ಧೃವ್ ಜುರೇಲ್​ ಔಟ್​..?
ಮೊದಲ 2 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಆಗಿ ಗಮನ ಸೆಳೆದ ಧೃವ್ ಜುರೇಲ್​ಗೂ ಇಂದು​​ ಬೆಂಚ್ ಕಾಯವ ಪರಿಸ್ಥಿತಿ ಎದುರಾಗಿದೆ. ಮೊದಲ 2 ಪಂದ್ಯಗಳ ಪೈಕಿ ಜುರೇಲ್​, ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರವೇ ಬ್ಯಾಟಿಂಗ್​ ನಡೆಸಿದ್ದು, ಫೇಲ್​ ಆಗಿದ್ದಾರೆ. ಇದೀಗ ತಂಡಕ್ಕೆ ಸಂಜು ಸ್ಯಾಮ್ಸನ್​ ಎಂಟ್ರಿಯಾಗಿದೆ. ಹೀಗಾಗಿ ಅನುಭವಿ ಸಂಜುವನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳೋದಾ..? ಅಥವಾ ಜುರೆಲ್​ಗೆ ಇನ್ನೊಂದು ಚಾನ್ಸ್ ನೀಡುವುದಾ.? ಅನ್ನೋ ಗೊಂದಲ ಟೀಮ್ ಮ್ಯಾನೇಜ್​ಮೆಂಟ್ ಮುಂದಿದೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಬರ್ಬರ ಕೊಲೆ.. ಮಾರಕಾಸ್ತ್ರಗಳಿಂದ ಕೊಚ್ಚಿ 24 ವರ್ಷದ ವ್ಯಕ್ತಿಯ ಹತ್ಯೆ

ಸಾಯಿ ಸುದರ್ಶನ್​ ಜಾಗದಲ್ಲಿ ದುಬೆಗೆ ಸ್ಥಾನ
2ನೇ ಪಂದ್ಯದಲ್ಲಿ ಡೆಬ್ಯು ಮಾಡಿದ್ದ ಸಾಯಿ ಸುದರ್ಶನ್, ಜಸ್ಟ್​ ಫೀಲ್ಡಿಂಗ್​ಗೆ ಅಷ್ಟೇ ಸಿಮೀತವಾಗಿದ್ದರು. ಶಿವಂ ದುಬೆ ಅಲಭ್ಯತೆಯಲ್ಲಿ ಮೊದಲ 2 ಪಂದ್ಯಕ್ಕೆ ಮಾತ್ರ ಸೀಮಿತವಾಗಿದ್ದ ಸಾಯಿ ಸುದರ್ಶನ್​, ಇದೀಗ ತಂಡದಲ್ಲಿ ಇಲ್ಲ. ಹೀಗಾಗಿ ಸಾಯಿ ಸುದರ್ಶನ್ ಜಾಗದಲ್ಲಿ ಆಲ್​ರೌಂಡರ್ ಶಿವಂ ದುಬೆ ಕಣಕ್ಕಿಳಿಯೋ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಇಬ್ಬರು ಫಾಸ್ಟ್​ ಬೌಲರ್​ಗಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿದಿತ್ತು. ಹೀಗಾಗಿ ಪೇಸ್​ ಬೌಲಿಂಗ್ ಆಲ್​ರೌಂಡರ್ ಆಗಿರುವ ದುಬೆ, ಆಡೋ ಸಾದ್ಯತೆ ಹೆಚ್ಚಿದೆ.

ಗಟ್ಟಿ ನಿರ್ಧಾರ ತೆಗೆದುಕೊಳ್ತಾರಾ ಕೋಚ್ & ಕ್ಯಾಪ್ಟನ್..?
ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿದ್ದ ಅನುಭವಿ ಆಟಗಾರರು ಕಮ್​ಬ್ಯಾಕ್ ಮಾಡಿರಬಹುದು. ಅನುಭವಿಗಳ ಅಲಭ್ಯತೆಯಲ್ಲಿ ಆಡಿದ್ದ ಅಭಿಷೇಕ್​ ಶರ್ಮಾ ಅದ್ಬುತ ಪ್ರದರ್ಶನವನ್ನೇ ನೀಡಿದ್ದಾರೆ. ರಿಯಾನ್ ಪರಾಗ್​​ಗೆ ಜಸ್ಟ್​ ಒಂದೇ ಒಂದು ಪಂದ್ಯದಲ್ಲಿ ಮಾತ್ರವೇ ಬ್ಯಾಟಿಂಗ್​ ಮಾಡುವ ಅವಕಾಶ ಸಿಕ್ಕಿದೆ. ಯಂಗ್ ವಿಕೆಟ್ ಕೀಪರ್ ಧೃವ್ ಜುರೇಲ್​ ಬ್ಯಾಟಿಂಗ್ ಮಾಡಿದ್ದು, ಸಹ ಒಂದೇ ಪಂದ್ಯದಲ್ಲಿ. ಮತ್ತೊಂದು ಚಾನ್ಸ್​ ಪಡೆಯಲು ಇವರೆಲ್ಲರೂ ಅರ್ಹರು. ಹೀಗಾಗಿ ಟೀಮ್​ ಮ್ಯಾನೇಜ್​ಮೆಂಟ್​ ಗಟ್ಟಿ ನಿರ್ಧಾರ ತೆಗೆದುಕೊಂಡು ಮತ್ತೊಂದು ಚಾನ್ಸ್ ನೀಡಿ, ಅನುಭವಿಗಳಿಗೆ ಬೆಂಚ್ ಕಾಯಿಸ್ತಾರಾ ಅನ್ನೋದು ಇವತ್ತಿನ ಪಂದ್ಯಕ್ಕಿಂತ ಹೆಚ್ಚು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:Watch: ಸಚಿವ ಜಮೀರ್ ಅಹ್ಮದ್​​ ಭರ್ಜರಿ ರೀಲ್ಸ್.. ಬಿಜೆಪಿ ಆಕ್ರೋಶ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IND vs ZIM: ಜೈಸ್ವಾಲ್, ದುಬೆ, ಸಂಜು ತಂಡಕ್ಕೆ ಎಂಟ್ರಿ.. ಪ್ಲೇಯಿಂಗ್​-11ನಿಂದ ಮೂವರು ಔಟ್​..?

https://newsfirstlive.com/wp-content/uploads/2024/07/Team-india-21.jpg

Load More