/newsfirstlive-kannada/media/post_attachments/wp-content/uploads/2024/07/IND-VS-ZIM-3-1.jpg)
ಭಾರತ-ಜಿಂಬಾಬ್ವೆ 4ನೇ ಟಿ20 ಪಂದ್ಯಕ್ಕೆ ಕೌಂಟ್​ಡೌನ್​​ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಬಳಿಕ ಸತತ ಎರಡು ಪಂದ್ಯ ಗೆದ್ದ ಟೀಮ್ ಇಂಡಿಯಾ ಸರಣಿ ಮೇಲೆ ಕಣ್ಣಿಟ್ಟಿದೆ. ಸರಣಿಯಲ್ಲಿ ಶುಭಾರಂಭ ಮಾಡಿ ಭಾರತಕ್ಕೆ ಶಾಕ್ ಕೊಟ್ಟ ಜಿಂಬಾಬ್ವೆ ಪುಟಿದೇಳುವ ಲೆಕ್ಕಚಾರದಲ್ಲಿದೆ.
ಎರಡು ದಿನ ವಿಶ್ರಾಂತಿ ಬಳಿಕ ಟೀಮ್ ಇಂಡಿಯಾ, ಜಿಂಬಾಬ್ವೆ ಬೇಟೆಗೆ ಸಜ್ಜಾಗಿದೆ. ಇಂದು ಭಾರತ-ಜಿಂಬಾಬ್ವೆ ನಡುವೆ 4ನೇ ಟಿ20 ಪಂದ್ಯ ನಡೆಯಲಿದ್ದು ಉಭಯ ತಂಡಗಳ ಚಿತ್ತ ಗೆಲುವಿನತ್ತ ನೆಟ್ಟಿದೆ. ಬ್ಯಾಕ್​​ ಟು ಬ್ಯಾಕ್​​​​​​ ಗೆಲುವು ದಾಖಲಿಸಿ ಆತ್ಮವಿಶ್ವಾಸದ ಅಲೆಯಲ್ಲಿ ಬೀಗುತ್ತಿರುವ ಶುಭ್​ಮನ್ ಗಿಲ್​ ಪಡೆ ಹ್ಯಾಟ್ರಿಕ್ ಗೆಲುವು ಕನಸು ಕಾಣ್ತಿದೆ. ಅದಕ್ಕೆ ಅಡ್ಡಗಾಲು ಹಾಕಲು ಸಿಕಂದರ್​ ರಾಜಾ ಪಡೆ ಸರ್ವ ರೀತಿಯಲ್ಲಿ ಸಿದ್ಧಗೊಂಡಿದ್ದು ಭಾರತಕ್ಕೆ ಮತ್ತೊಂದು ಶಾಕ್ ಕೊಡಲು ಎದುರು ನೋಡ್ತಿದೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ದಾರುಣ ಘಟನೆ.. ಜಮೀನಿಗೆ ಹೊರಟಿದ್ದ ದಂಪತಿ ರೈಲಿಗೆ ಸಿಲುಕಿ ಸಾವು
ಮೊದಲ 6 ಓವರ್​​ಗಳೇ ಭಾರತಕ್ಕೆ ನಿರ್ಣಯ
ಪಂದ್ಯದ ಮೊದಲ ಆರು ಓವರ್​ಗಳೇ ಟೀಮ್ ಇಂಡಿಯಾಗೆ ನಿರ್ಣಾಯಕ. ಯಾಕಂದ್ರೆ ಹರಾರೆ ಪಿಚ್​​ನಲ್ಲಿ​​ ಆರಂಭದಲ್ಲಿ ವೇಗಿಗಳಿಗೆ ಹೆಚ್ಚು ನೆರವು ನೀಡುತ್ತೆ. ಫ್ಲ್ಯಾಟ್​​ ಹಾಗೂ ಬೌನ್ಸ್​ ಆಗೋದ್ರಿಂದ ಅದರ ಲಾಭ ಪಡೆಯಲು ಜಿಂಬಾಬ್ವೆ ಸಜ್ಜಾಗಿದೆ. ಮೊದಲ 3 ಪಂದ್ಯಗಳಲ್ಲಿ ಭಾರತ ತಂಡ ಪವರ್​ಪ್ಲೇನಲ್ಲಿ 6 ವಿಕೆಟ್ ಕಳೆದುಕೊಂಡಿದೆ. ಇಂದು ಇಂಡಿಯನ್ ಬ್ಯಾಟ್ಸ್​​ಮನ್​ಗಳು ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ.
ಭಾರತ ಇಂದೇ ಸರಣಿ ಗೆಲ್ಲುತ್ತಾ..?
ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರೋ ಟೀಮ್ ಇಂಡಿಯಾ ಸರಣಿ ಜಯಿಸುವ ತವಕದಲ್ಲಿದೆ. ಒಂದು ವೇಳೆ ಇಂದು ಜಿಂಬಾಬ್ವೆ ಮಣಿಸಿದ್ರೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶಮಾಡಿಕೊಳ್ಳಲಿದೆ. ನಾಯಕನಾಗಿ ಚೊಚ್ಚಲ ಸರಣಿ ಗೆದ್ದ ಸಾಧನೆ ಗಿಲ್ ಮಾಡಲಿದ್ದಾರೆ. ಆದ್ರೆ ಇನ್ನೊಂದೆಡೆ ಸತತ ಎರಡು ಸೋಲಿನಿಂದ ಕಂಗೆಟ್ಟಿರೋ ಜಿಂಬಾಬ್ವೆ ಲಯಕ್ಕೆ ಮರಳಿ ಸರಣಿ ಜೀವಂತವಾಗಿರಿಸಿಕೊಳ್ಳಲು ಹವಣಿಸ್ತಿದ್ದು, ಪಂದ್ಯ ಭಾರಿ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ:ಗಂಭೀರ್​ ಆಯ್ಕೆ ಹಿಂದೆ ಸಿಕ್ಕಾಪಟ್ಟೆ ಲೆಕ್ಕಾಚಾರ.. ಎಷ್ಟು ಕೋಟಿ ಸಂಭಾವನೆ ಪಡೀತಾರೆ ಕೋಚ್..?
ಡೇಂಜರಸ್​​ MMM ಗಳನ್ನ ಬೇಗನೆ ಕಟ್ಟಿಹಾಕ್ಬೇಕು..!
ಗಿಲ್​​​ ಪಡೆ ಏನೋ ಇಂದೇ ಸರಣಿ ಗೆಲ್ಲುವ ಹುಮ್ಮನಸ್ಸಿನಲ್ಲಿದೆ. ಆ ಡ್ರೀಮ್​ ನನಸಾಗಬೇಕಾದ್ರೆ ಮೊದಲು ಎದುರಾಳಿ ತಂಡದ MMM ಗಳನ್ನ ಬೇಗನೆ ಕಟ್ಟಿಹಾಕಬೇಕಿದೆ. ಅಂದ್ರೆ ಮೈಯರ್ಸ್​, ಮದಾಂದೆ ಹಾಗೂ ಮಧೆವೆರೆ. ಈ ತ್ರಿಮೂರ್ತಿ ಡೇಂಜರಸ್​ ಬ್ಯಾಟ್ಸ್​​ಮನ್​ಗಳು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಇವರು ಬೇಗ ಪೆವಿಲಿಯನ್ ಸೇರಿದ್ರಷ್ಟೇ ಭಾರತಕ್ಕೆ ಉಳಿಗಾಲ. ಇಲ್ಲವಾದ್ರೆ ಕ್ಯಾಪ್ಟನ್​ ಗಿಲ್​ ಲೆಕ್ಕಚಾರ ತಲೆಕೆಳಗಾಗಲಿದೆ.
ಸುಂದರ್​​​​​-ಬಿಷ್ನೋಯಿ ಭಯದಲ್ಲಿ ಜಿಂಬಾಬ್ವೆ
ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್ ಹಾಗೂ ರವಿ ಬಿಷ್ನೋಯಿ ಸರಣಿಯಲ್ಲಿ ಧೂಳೆಬ್ಬಿಸಿದ್ದಾರೆ. ಜಿಂಬಾಬ್ವೆ ಬ್ಯಾಟ್ಸ್​​ಮನ್​ಗಳನ್ನ ಗಿರಗಿಟ್ಲೆ ಆಡಿಸ್ತಿರೋ ಈ ಭಲೇ 3 ಪಂದ್ಯಗಳಿಂದ ತಲಾ 6 ವಿಕೆಟ್ ಕಬಳಿಸಿದೆ. ಈ ಮ್ಯಾಜಿಕಲ್​​ ಸ್ಪಿನ್ನರ್​ಗಳ ಆರ್ಭಟ ಜಿಂಬಾಬ್ವೆ ನಿದ್ದೆಗೆಡಿಸಿದೆ. ಇಂದೇನಾದ್ರು ಬಿಷ್ನೋಯಿ-ಸುಂದರ್​ ಮೋಡಿ ಮಾಡಿದ್ರೆ ಜಿಂಬಾಬ್ವೆ ಸೋಲಿನ ಪ್ರಪಾತಕ್ಕೆ ಬೀಳೋದು ಪಕ್ಕಾ.
ಇದನ್ನೂ ಓದಿ:ಎಷ್ಟೇ ದೊಡ್ಡವರಾದರೂ ಹಿಂದಿನ ಉಪಕಾರ ಮರೆಯಲಿಲ್ಲ.. ರೋಹಿತ್ ಜೀವನ ಬದಲಿಸಿದ ಈ ವ್ಯಕ್ತಿ ಯಾರು?
ಖಲೀಲ್​​ ಅಹ್ಮದ್ ಔಟ್​​​​​..
ಸರಣಿಯಲ್ಲಿ ಲೆಫ್ಟಿ ಬೌಲರ್​​ ಖಲೀಲ್​ ಅಹ್ಮದ್​​ ದುಬಾರಿ ಆಗಿದ್ದಾರೆ. ಸಿಕ್ಕ ಎರಡು ಅವಕಾಶದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಖಲೀಲ್​​ ಅಹ್ಮದ್​​ಗೆ ಗೇಟ್​​ಪಾಸ್​ ನೀಡುವ ಸಾಧ್ಯತೆ ಹೆಚ್ಚಿದೆ. ಇವರ ಬದಲಿಗೆ 3ನೇ ಪಂದ್ಯದಲ್ಲಿ ಬೆಂಚ್​ ಕಾದಿದ್ದ ಮುಖೇಶ್​ ಕುಮಾರ್​ ಆಡಲಿದ್ದಾರೆ ಎಂದು ಹೇಳಲಾಗ್ತಿದೆ.
ಒಟ್ಟಿನಲ್ಲಿ ಟೀಮ್ ಇಂಡಿಯಾ ಗುರಿ ಸರಣಿ ಗೆಲ್ಲೋದು. ಜಿಂಬಾಬ್ವೆ ಸರಣಿ ಜೀವಂತವಾಗಿಸಿಕೊಳ್ಳೋದು. ಇದ್ರಲ್ಲಿ ಸಕ್ಸಸ್ ಆಗೋದ್ಯಾರು ? ಸೋಲಿನ ಖೆಡ್ಡಾಗೆ ಬೀಳೋದ್ಯಾರು ಅನ್ನೋದಕ್ಕೆ ಕೆಲವೇ ಗಂಟೆಗಳಲ್ಲಿ ಆನ್ಸರ್ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್