ಗಗನಯಾನ, ಚಂದ್ರಯಾನ-4 ಅಷ್ಟೇ ಅಲ್ಲ.. ಭಾರತೀಯ ವಿಜ್ಞಾನಿಗಳಿಂದ ಈಗ ಜಲಯಾನ..!

author-image
Gopal Kulkarni
Updated On
ಗಗನಯಾನ, ಚಂದ್ರಯಾನ-4 ಅಷ್ಟೇ ಅಲ್ಲ.. ಭಾರತೀಯ ವಿಜ್ಞಾನಿಗಳಿಂದ ಈಗ ಜಲಯಾನ..!
Advertisment
  • ಮತ್ತೆ ಮೂರು ಹೊಸ ಸಾಹಸಗಳಿಗೆ ಸಜ್ಜಾದ ಭಾರತೀಯ ವಿಜ್ಞಾನಿಗಳು
  • ಚಂದ್ರಯಾನ-4 ಮತ್ತು ಗಗನಯಾನಕ್ಕೆ ಮುಹೂರ್ತ ಫಿಕ್ಸ್ ಮಾಡಿದ ಇಸ್ರೋ
  • ಸಮುದ್ರಯಾನದ ಸಾಹಸಕ್ಕೂ ಸಜ್ಜಾದ ವಿಜ್ಞಾನಿಗಳು, 2026ಕ್ಕೆ ಆರಂಭ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ಜಗತ್ತಿನಲ್ಲಿ ನೂರಾರು ಮೈಲಿಗಲ್ಲುಗಳನ್ನು ನೆಟ್ಟು ಭಾರತ ತ್ರಿವರ್ಣ ಧ್ವಜವನ್ನು ಎಲ್ಲೆ ಹಾರಾಡಿಸುತ್ತಿದೆ. ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಅವುಗಳಲ್ಲಿ ಅತಿದೊಡ್ಡ ಯಶಸ್ಸು ಕಾಣುವ ಮೂಲಕ ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಇಸ್ರೋ ಭಾರತದ ಅತಿದೊಡ್ಡ ಹೆಮ್ಮೆಯಾಗಿ ಬೆಳೆದು ಬಂದಿದೆ. ರಾಕೆಟ್​​ನ ಬಿಡಿಭಾಗಗಳನ್ನು ಸೈಕಲ್​ ಮೇಲೆ ಸಾಗಿಸುವ ಸ್ಥಿತಿಯಿಂದ ಚಂದ್ರನ ಅಂಗಳದ ಮೇಲೆ ಭಾರತದ ಬಾವುಟವನ್ನು ನೆಡುವ ಮಟ್ಟಕ್ಕೆ ಬೆಳೆದಿದೆ. ಇಷ್ಟಕ್ಕೆ ಇದರ ಸಾಧನೆ ನಿಲ್ಲುವುದಿಲ್ಲ. ಈಗ ಹೊಸ ಹೊಸ ಆವಿಷ್ಕಾರಗಳಿಗೆ, ಸಾಹಸಗಳಿಗೆ ಇಸ್ರೋ ಕೈ ಹಾಕುತ್ತಿದೆ ಅದರಲ್ಲಿ ಪ್ರಮುಖವಾಗಿ ಮೂರು ಯೋಜನೆಗಳನ್ನು ಇಸ್ರೋ ಸಿದ್ಧಮಾಡಿಕೊಂಡಿದೆ. ಗಗನಯಾನ, ಚಂದ್ರಯಾನ4 ಮತ್ತು ಸಮುದ್ರಯಾನ ಎಂಬ ಮೂರು ಮಹಾಸಾಹಸಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಲು ಇಸ್ರೋ ಸಜ್ಜಾಗಿದೆ.

2027ರಲ್ಲಿ ಚಂದ್ರಯಾನ-4 ನಡೆಸಿ ಚಂದಿರನ ಅಂಗಳದಲ್ಲಿ ಸ್ಯಾಂಪಲ್​ ಕಲ್ಲುಗಳನ್ನು ಭೂಮಿಗೆ ತರುವ ಯೋಜನೆಯನ್ನು ಇಸ್ರೋ ಹಾಕಿಕೊಂಡಿದೆ. ಮುಂದಿನ ವರ್ಷ ಅಂದ್ರೆ 2026ರಲ್ಲಿ ಭಾರತ ಸಮುದ್ರಯಾನವನ್ನು ಕೂಡ ಕೈಗೊಳ್ಳಲಿದೆ. ಸಮುದ್ರದ ಆಳದಲ್ಲಿ ಹಲವು ಸಂಶೋಧನೆಗಳನ್ನು ನಡೆಸಲು ಸಜ್ಜಾಗಿದೆ. ಇನ್ನು ಗಗನಯಾನ ಯೋಜನೆ ಈಗಾಗಲೇ ಆರಂಭವಾಗಿದ್ದು ಭಾರತದ ಗಗನಯಾತ್ರಿಗಳ ಮೊದಲ ಬ್ಯಾಚ್​ ಸದ್ಯದಲ್ಲಿಯೇ ಬಾಹ್ಯಾಕಾಶಕ್ಕೆ ಹಾರಲಿದೆ.

ಇದನ್ನೂ ಓದಿ: ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ.. iPhone 16 ಮೇಲೆ ಭಾರೀ ಆಫರ್​..!

ಚಂದ್ರಯಾನ -4ರ ಯೋಜನೆ: 2027ಕ್ಕೆ ಮತ್ತೊಂದು ಸಾಹಸಕ್ಕೆ ಇಸ್ರೋ ಇಳಿಯಲಿದೆ. ಈಗಾಗಲೇ ಮೂರು ಬಾರಿ ಚಂದ್ರಯಾನ ಮಾಡಿದ ಇಸ್ರೋ. ಈ ನಾಲ್ಕನೇ ಬಾರಿಗೆ ಚಂದ್ರನೆಡೆಗೆ ಉಪಗ್ರಹ ಹಾರಿಸಲು ಸಜ್ಜಾಗಿದೆ. ಚಂದಿರನ ಅಂಗಳದಲ್ಲಿರುವ ಕಲ್ಲುಗಳನ್ನು ಭೂಮಿಗೆ ತಂದು ಅವುಗಳನ್ನು ಪರೀಕ್ಷಿಸಲು ಸಜ್ಜಾಗಿದೆ. ಇದಕ್ಕಾಗಿ ಕನಿಷ್ಠ ಎರಡು ಪ್ರತ್ಯೇಕವಾಗಿ ಅತ್ಯಧಿಕ ಭಾರ ಎತ್ತಬಲ್ಲ ಎಲ್​ವಿಎಮ್​ನ ಮೂರು ರಾಕೆಟ್​ಗಳನ್ನು ಬಳಸಲಾಗುತ್ತದೆ.  ಐದು ವಿಧವಾದ ಭಾಗಗಳನ್ನು ಇದು ತೆಗೆದುಕೊಂಡು ಹೋಗಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವ ಜೀತೆಂದ್ರ ಸಿಂಗ್ ಹೇಳಿದ್ದಾರೆ.

publive-image

ಇದನ್ನೂ ಓದಿ: ಶಿವಣ್ಣ, ರಾಮ್​ ಚರಣ್ ಚಿತ್ರಕ್ಕೆ ಹಳೆಯ ತಂತ್ರಜ್ಞಾನ.. 20 ವರ್ಷಗಳ ಹಿಂದೆ ಹೋದ ನಿರ್ದೇಶಕ

ಇನ್ನು ಗಗನಯಾನದ ಬಗ್ಗೆಯೂ ಮಾತನಾಡಿರುವ ಸಚಿವರು. ಗಗನಯಾನ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಒಂದು ಯೋಜನೆಯಾಗಿದೆ. ಈಗಾಗಲೇ ಅದಕ್ಕಾಗಿ ವಿಶೇಷ ಸ್ಪೇಸ್​ಕ್ರಾಫ್ಟ್​​ನ್ನು ಸಿದ್ಧಗೊಳಿಸಿದ್ದು ಅವರನ್ನು ಭೂಮಿಯಿಂದ ಬಾಹ್ಯಾಕಾಶಕ್ಕೆ ಮತ್ತು ಬಾಹ್ಯಾಕಾಶದಿಂದ ಭೂಮಿಗೆ ಸುರಕ್ಷಿತವಾಗಿ ಕರೆದುಕೊಂಡು ಬರಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಒಂದು ಮಿಷನ್ ಮುಂದಿನ ವರ್ಷ ಲಾಂಚ್ ಆಗಲಿದ ಎಂದು ಹೇಳಿದ್ದಾರೆ.

ಇನ್ನು ಸಮುದ್ರಯಾನವೂ ಕೂಡ 2026ರಲ್ಲಿಯೇ ಆರಂಭವಾಗಲಿದ್ದು ಮೂರು ವಿಜ್ಞಾನಿಗಳು ಸಮುದ್ರದಲ್ಲಿ ಸುಮಾರು 6 ಸಾವಿರ ಮೀಟರ್​ನಷ್ಟು ಆಳಕ್ಕೆ ಹೋಗಿ ಅಲ್ಲಿರುವ ಖನಿಜಗಳ ಬಗ್ಗೆ, ವಿರಳವಾದ ಮೆಟಲ್ಸ್​ ಬಗ್ಗೆ ಸಂಶೋಧನೆ ನಡೆಸಲಿದ್ದಾರೆ. ಸದ್ಯ ಈಗ ಎಲ್ಲರ ಕಣ್ಣು ರಾಷ್ಟ್ರೀಯ ಸಮುದ್ರ ತಂತ್ರಜ್ಞಾನ ಸಂಸ್ಥೆಯ ಮೇಲೆಯೇ ಇದೆ ಎಂದು ಹೇಳಿದ್ದಾರೆ.

publive-image

ಇದರ ಜೊತೆ ಸಿಂಗ್ ಇಸ್ರೋದ ಇತಿಹಾಸವನ್ನು ನೆನಪು ಮಾಡಿಕೊಂಡಿದ್ದಾರೆ. ಇಸ್ರೋ ಮೊದಲು ಸ್ಥಾಪನೆಯಾಗಿದ್ದು. 1969ರಲ್ಲಿ ಅದರ ಫಸ್ಟ್ ಪ್ಯಾಡ್ ಲಾಂಚ್​ ಆಗಿದ್ದು 1993ರಲ್ಲಿ. ಎರಡನೇ ಲಾಂಚ್​ ಪ್ಯಾಡ್ ಆಗಿದ್ದು 2004ರಲ್ಲಿ. ಮುಂದಿನ ದಶಕಗಳಲ್ಲಿ ಅಂದ್ರೆ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಬಾಹ್ಯಾಕಾಶ ವಲಯ ಅಭೂತಪೂರ್ವವಾಗಿ ವಿಸ್ತರಣೆಗೊಂಡಿದೆ. ಅದರ ಮೂಲಸೌಕರ್ಯಗಳಿಂದ ಹಿಡಿದು ಹೂಡಿಕೆಯವರೆಗೂ ಅದು ವಿಸ್ತಾರಗೊಂಡಿದೆ. ಸದ್ಯ ಈಗ ನಾವು ಮೂರನೇ ಲಾಂಚ್​ಪ್ಯಾಡ್ ನಿರ್ಮಾಣ ಮಾಡಲಿದ್ದೇವೆ. ಅತ್ಯಂತ ಭಾರದ ರಾಕೆಟ್​ಗಳ ಉಡಾವಣೆಗಾಗಿ ಶ್ರೀಹರಿಕೋಟಾದಲ್ಲಿ ಈ ಲಾಂಚ್​ಪ್ಯಾಡ್ ನಿರ್ಮಾಣವಾಗಲಿದೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment