/newsfirstlive-kannada/media/post_attachments/wp-content/uploads/2025/05/Operation-Sindoor7.jpg)
ಪಾಕ್ ಉಗ್ರರ ಮೇಲೆ ಮತ್ತೆ ದಾಳಿ ನಡೆಸುತ್ತಾ ಭಾರತ? ಹೀಗೊಂದು ಸಂದೇಹ ಮತ್ತೆ ಕಾಡಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಭಾರತ ಉಗ್ರರ ಮೇಲೆ ಮತ್ತೆ ಆಪರೇಷನ್ ಸಿಂಧೂರ 2.0ಗೆ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಮತ್ತೆ ದಾಳಿ ನಡೆಸುತ್ತಾ ಭಾರತ?
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ- ಪಾಕಿಸ್ತಾನ ನಡುವೆ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ. ಪಾಕ್ ಗಡಿಯುದ್ಧದಕ್ಕೂ ಭಾರತೀಯ ವಾಯುಸೇನೆ ಫುಲ್ ಅಲರ್ಟ್ ಆಗಿದ್ದು ಹದ್ದಿನ ಕಣ್ಣಟ್ಟಿ ಕಾಯ್ತಿದೆ. ಒಂದ್ವೇಳೆ ಪಾಕಿಸ್ತಾನ ಬಾಲ ಬಿಚ್ಚುವ ದುಸ್ಸಾಹಸಕ್ಕೆ ಕೈ ಹಾಕಿದ್ರೆ.. ತಿರುಗೇಟು ನೀಡಲು ಗಡಿಯಲ್ಲಿ ತುದಿಗಾಲಲ್ಲಿ ನಿಂತು ಕಾಯ್ತಿದೆ.
ಇದನ್ನೂ ಓದಿ: ಪಾಕಿಸ್ತಾನದ ಪರಮ ಪಾಪಿಗಳಿಗೆ ಈಗ ಕಣ್ಣೀರು.. ನರಕ ತೋರಿಸಿದ ಭಾರತದ ವೈಮಾನಿಕ ದಾಳಿ!
1) ಮುಂಜಾಗ್ರತಾ ಕ್ರಮವಾಗಿ 20 ಏರ್ಪೋರ್ಟ್ಗಳು ಬಂದ್
ಪಾಕಿಸ್ತಾನ ಪ್ರತಿದಾಳಿ ನಡೆಸುವ ಭೀತಿ ಹಿನ್ನೆಲೆ ಭಾರತದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದೇಶದ ಹಲವೆಡೆ 20 ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಮೇ 10ರವರೆಗೆ ವಿಮಾನನಿಲ್ದಾಣಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.
2) ಪಾಕ್, ನೇಪಾಳ ಗಡಿ ರಾಜ್ಯಗಳ ಜೊತೆ ಅಮಿತ್ ಶಾ ಮಾತುಕತೆ
ಆಪರೇಷನ್ ಸಿಂಧೂರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಕಿಸ್ತಾನ ಮತ್ತು ನೇಪಾಳದೊಂದಿಗೆ ಗಡಿ ಹೊಂದಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳ ತುರ್ತು ಸಭೆ ನಡೆಸಿದ್ದಾರೆ. ತುರ್ತು ಕ್ರಮಗಳ ಬಗ್ಗೆ ಚರ್ಚೆ ನಡೆಸಿ, ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ 2.O? ಪೀಸ್, ಪೀಸ್ ಆದ ಉಗ್ರರ 9 ಅಡಗುತಾಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ!
3) ರಾಜ್ನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ
ಆಪರೇಷನ್ ಸಿಂಧೂರ್ ಬೆನ್ನಲ್ಲೇ ಪ್ರಧಾನಿ ಮೋದಿ ಇವತ್ತು ಸರ್ವಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ರಾಜಕೀಯ ಪಕ್ಷಗಳಿಗೆ ದಾಳಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಗೃಹಸಚಿವ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಇಬ್ಬರೂ ಸೇರಿ ಸರ್ವಪಕ್ಷಗಳ ನಾಯಕರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುವ ಮಾಹಿತಿ ನೀಡಿದ್ದಾರೆ.
4) ಮತ್ತೊಂದು ಕಡೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ
5) ಎಷ್ಟೇ ಪ್ರತ್ಯುತ್ತರ ನೀಡಿದ್ದರೂ ಪಾಕ್ ಸೇನೆಯಿಂದ ಅಪ್ರಚೋದಿತ ದಾಳಿ ತಪ್ಪುತ್ತಿಲ್ಲ
6) ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಯಿಂದ 15 ನಾಗರಿಕರ ಜೀವ ಹೋಗಿದೆ
7) ಮುಂಜಾಗೃತ ಕ್ರಮವಾಗಿ ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ
ಒಟ್ಟಾರೆ.. ಮಡಿಲಲ್ಲೇ ವಿಷಸರ್ಪಗಳನ್ನು ಇಟ್ಟುಕೊಂಡು ಪೋಷಣೆ ಮಾಡ್ತಿದ್ದ ಪಾಕಿಸ್ತಾನದ ಮುಖವಾಡ ಆಪರೇಷನ್ ಸಿಂಧೂರ ಮೂಲಕ ಜಗತ್ತಿನ ಮುಂದೆ ಬಯಲಾಗಿದೆ.
ಇದನ್ನೂ ಓದಿ: ಉಗ್ರರ ನೆಲೆಗಳ ಮೇಲೆ ಭಾರತ ಮಿಸೈಲ್ ಅಟ್ಯಾಕ್.. ಆದರೆ ಪಾಕಿಸ್ತಾನ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ