T20 ವಿಶ್ವಕಪ್​​ ಜಿದ್ದಾ ಜಿದ್ದಿಯಲ್ಲಿ ಪಾಕ್​​ ವಿರುದ್ಧ ಗೆದ್ದು ಬೀಗಿದ ಭಾರತ; ಸೆಮೀಸ್​ ಕನಸು ಜೀವಂತ!

author-image
Ganesh Nachikethu
Updated On
T20 ವಿಶ್ವಕಪ್​​ ಜಿದ್ದಾ ಜಿದ್ದಿಯಲ್ಲಿ ಪಾಕ್​​ ವಿರುದ್ಧ ಗೆದ್ದು ಬೀಗಿದ ಭಾರತ; ಸೆಮೀಸ್​ ಕನಸು ಜೀವಂತ!
Advertisment
  • ಬಹುನಿರೀಕ್ಷಿತ ಐಸಿಸಿ 2024ರ ಟಿ20 ವಿಶ್ವಕಪ್​ ಮಹತ್ವದ ಪಂದ್ಯ
  • ಹೈವೋಲ್ಟೇಜ್​ ಪಂದ್ಯದಲ್ಲಿ ಪಾಕ್​ ವಿರುದ್ಧ ಗೆದ್ದು ಬೀಗಿದ ಭಾರತ
  • ಟೀಮ್​ ಇಂಡಿಯಾದ ಟಿ20 ವಿಶ್ವಕಪ್​​ ಸೆಮೀಸ್​ ಕನಸು ಜೀವಂತ

ಇಂದು ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್​​ ಮಹತ್ವದ ಪಂದ್ಯದಲ್ಲಿ ಪಾಕ್​ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 6 ವಿಕೆಟ್​​ಗಳ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್​​ ಸೆಮೀಸ್​ ​​ಕನಸು ಜೀವಂತವಾಗಿ ಇರಿಸಿಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 105 ರನ್‌ ಗಳಿಸಿತ್ತು. ಈ ಮೂಲಕ ಟೀಮ್​ ಇಂಡಿಯಾಗೆ ಕೇವಲ 106 ರನ್​ಗಳ ಅಲ್ಪಮೊತ್ತದ ಗುರಿ ನೀಡಿತ್ತು.

ಬಳಿಕ ಅಲ್ಪಮೊತ್ತದ ಗುರಿ ಬೆನ್ನತ್ತಿದ ಭಾರತ ತಂಡವು 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿ ಗೆಲುವಿನ ನಗೆ ಬೀರಿದೆ. ಭಾರತ ತಂಡದ ಪರ ಶಫಾಲಿ ವರ್ಮಾ 32 ರನ್‌, ಜೆಮಿಮಾ ರೊಡ್ರಿಗ್ಸ್‌ 23 ರನ್‌, ಹರ್ಮನ್‌ ಪ್ರೀತ್‌ ಕೌರ್‌ 29 ರನ್‌ ಗಳಿಸಿ ಗೆಲುವು ತಂದುಕೊಟ್ಟರು. ಪಾಕ್‌ ಪರ ಫಾತಿಮಾ 2 ವಿಕೆಟ್‌, ಒಮೈಮಾ ಮತ್ತು ಸೈದಾ ತಲಾ ಒಂದು ವಿಕೆಟ್‌ ಕಿತ್ತರು.

ಪಾಕ್​​ ಕಳಪೆ ಬ್ಯಾಟಿಂಗ್​​

ಮೊದಲು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ ಪರ ಮುನೀಬಾ ಅಲಿ 17, ನಿದಾ ದಾರ್ 28, ಸೈದಾ ಶಾ ಅಜೇಯ 14 ರನ್ ಪೇರಿಸಿದರು. ಭಾರತ ಪರ ಬೌಲಿಂಗ್​​ನಲ್ಲಿ ಕಮಾಲ್​ ಮಾಡಿದ ಅರುಂಧತಿ ರೆಡ್ಡಿ 3, ಶ್ರೇಯಾಂಕಾ ಪಟೇಲ್ 2, ರೇಣುಕಾ ಸಿಂಗ್, ದೀಪ್ತಿ ಶರ್ಮಾ, ಆಶಾ ಶೋಭನ ತಲಾ 1 ವಿಕೆಟ್ ಪಡೆದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment