ತಿಲಕ್ ವರ್ಮಾ ಅಬ್ಬರಕ್ಕೆ ಬೆಚ್ಚಿ ಬಿದ್ದ ಆಂಗ್ಲರು; 2ನೇ T20ಯಲ್ಲೂ ಭಾರತಕ್ಕೆ ಭರ್ಜರಿ ಗೆಲುವು

author-image
Gopal Kulkarni
Updated On
ತಿಲಕ್ ವರ್ಮಾ ಅಬ್ಬರಕ್ಕೆ ಬೆಚ್ಚಿ ಬಿದ್ದ ಆಂಗ್ಲರು; 2ನೇ T20ಯಲ್ಲೂ ಭಾರತಕ್ಕೆ ಭರ್ಜರಿ ಗೆಲುವು
Advertisment
  • ತಿಲಕ್ ವರ್ಮಾ ಏಕಾಂಗಿ ಹೋರಾಟಕ್ಕೆ ಬೆಚ್ಚಿ ಬಿದ್ದ ಇಂಗ್ಲೆಂಡ್​
  • 2ನೇ ಟಿ20 ಪಂದ್ಯದಲ್ಲಿಯೂ ಗೆದ್ದು ಬೀಗಿದ ಟೀ ಇಂಡಿಯಾ ಪಡೆ
  • ಇನ್ನೂ ಐದು ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿದ ತಂಡ

ಚೆನ್ನೈನಲ್ಲಿ ನಡೆಯುತ್ತಿದ್ದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಆಂಗ್ಲರನ್ನು ಮತ್ತೊಮ್ಮೆ ಬಗ್ಗು ಬಡಿದಿದೆ 166ರನ್​ಗಳ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭದಲ್ಲಿಯೇ ವಿಘ್ನವುಂಟಾಯಿತು. ಆರಂಭಿಕ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್​ ಕೇವಲ 5 ರನ್​ ಗಳಿಸಿ ಔಟಾಗುವ ಮೂಲಕ ಭಾರತದ ವಿಕೆಟ್ ಪತನಗಳು ಶುರುವಾದವು. ಕಳೆದ ಬಾರಿ ಮಿಂಚಿದ್ದ ಅಭಿಷೇಕ್ ವರ್ಮಾ ಕೇವಲ 12 ರನ್​ಗಳಿಸಿ ಔಟಾದಾಗ ಭಾರತ ಸಂದಿಗ್ಧ ಸ್ಥಿತಿಗೆ ಇಳಿಯಿತು.

publive-image

ಮೂರನೇ ಕ್ರಮಾಂಕದಲ್ಲ ಬ್ಯಾಟಿಂಗ್​​ಗೆ ಇಳಿದ ತಿಲಕ್ ವರ್ಮಾ ಏಕಾಂಗಿ ಹೋರಾಟ ಕೊನೆಗೂ ಭಾರತವನ್ನು ಗೆಲುವಿನ ದಡಕ್ಕೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಯ್ತು. ಏಕಾಂಗಿಯಾಗಿ ಆಂಗ್ಲರ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ತಿಲಕ್ ವರ್ಮಾ 55 ಬೌಲ್​ಗೆ 72 ರನ್ ಚಚ್ಚುವ ಮೂಲಕ ಭಾರತಕ್ಕೆ ವಿಜಯದ ಮಾಲೆ ತೊಡೆಸಿದರು. ಕೊನೆಯ ಓವರ್​ ವರೆಗೂ ಸ್ಕ್ರೀಜ್​ಗೆ ಅಂಟಿಕೊಂಡು ನಿಂತುಕೊಂಡ ತಿಲಕ್ ವರ್ಮಾ 6 ಬೌಲ್​ಗೆ 6 ರನ್​ ಬೇಕಿದ್ದಾಗ ಸಿಕ್ಸರ್ ಭಾರಿಸಿ ಭಾರತದ ವಿಜಯ ಪತಾಕೆ ಹಾರಿಸಿದರು.

publive-image

ಇದನ್ನೂ ಓದಿ:ಇಂಗ್ಲೆಂಡ್​ಗೆ ಆರಂಭಿಕ ಆಘಾತ ಕೊಟ್ಟ ಭಾರತೀಯ ಬೌಲರ್ಸ್​; ರನ್ ಗಳಿಸಲು ಆಂಗ್ಲರ ಪರದಾಟ

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ನ್ನು ಆರಂಭದಲ್ಲಿ ಕಟ್ಟಿಹಾಕುವಲ್ಲಿ ಭಾರತೀಯ ಬೌಲರ್ ಯಶಸ್ವಿಯಾದರು. ಜೊಸ್ ಬಟ್ಲರ್ ಒಬ್ಬರು ಮಾತ್ರ ಏಕಾಂಗಿ ಹೋರಾಟ ನಡೆಸಿ 45 ರನ್​ಗಳನ್ನು ಗಳಿಸಿದರು ಅವರ ನಂತರ ಅತಿಹೆಚ್ಚು ರನ್ ಗಳಿಸಿದ್ದು ಅಂದ್ರೆ ಅದು ಜೆಮಿ ಸ್ಮಿತ್ ಗಳಿಸಿದ 22 ರನ್​. 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್​ಗಳನ್ನು ಇಂಗ್ಲೆಂಡ್ ಕಲೆ ಹಾಕಿತ್ತು. ಇಂಗ್ಲೆಂಡ್ ಕೊಟ್ಟ ಈ ಗುರಿಯನ್ನು ಇನ್ನೂ ಐದು ಎಸೆತ ಬಾಕಿ ಇರುವಾಗಲೇ ತಲುಪಿದ ಭಾರತ ವಿಜಯದ ಕೇಕೆಯನ್ನು ಹಾಕಿತು. 72 ರನ್​ ಗಳಿಸಿದ ತಿಲಕ್ ವರ್ಮಾ ಒಟ್ಟು 4 ಬೌಂಡರಿ ಹಾಗೂ 5 ಸಿಕ್ಸರ್​ಗಳನ್ನು ಭಾರಿಸಿದರು. ಸದ್ಯ ಐದು ಟಿ20 ಪಂದ್ಯಗಳಲ್ಲಿ ಭಾರತ 2-0 ಮುನ್ನಡೆಯನ್ನು ಕಾಯ್ದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment