/newsfirstlive-kannada/media/post_attachments/wp-content/uploads/2024/07/INDvsZIM-2.jpg)
INDvsZIM: ಜಿಂಬಾಬ್ವೆ ನಡುವಿನ ನಾಲ್ಕನೇ ಟಿ20 ಪಂದ್ಯ ಟೀಂ ಇಂಡಿಯಾ ಗೆದ್ದು ಬೀಗಿದೆ. ಒಂದೇ ಒಂದು ವಿಕೆಟ್​ ಕಿತ್ತುಕೊಳ್ಳಲು ಆಗದಂತೆ ಜಿಂಬಾಬ್ವೆಗೆ ಸೋಲಿನ ರುಚಿ ತೋರಿಸಿದೆ.
ಹರಾರೆ ಸ್ಫೋರ್ಟ್ಸ್​​ ಕ್ಲಬ್​ನಲ್ಲಿ ಏರ್ಪಟ್ಟ ನಾಲ್ಕನೇ ಟಿ20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್​ ಅದ್ಭುತವಾಗಿ ಬ್ಯಾಟ್​​ ಬೀಸಿದ್ದಾರೆ. ನಾಯಕ ಶುಭ್ಮನ್​ ಗಿಲ್​ ಜೊತೆಗೂಡಿ ತಂಡಕ್ಕೆ ಜಯವನ್ನು ತಂದುಕೊಟ್ಟಿದ್ದಾರೆ.
ಇಂದಿನ ಪಂದ್ಯದಲ್ಲಿ ಟಾಸ್​ ಗೆದ್ದ ಇಂಡಿಯಾ ಬೌಲಿಂಗ್​ ಆಯ್ಕೆ ಮಾಡಿತು. ಅತ್ತ ಜಿಂಬಾಬ್ವೆ ತಂಡಗೆ ಬ್ಯಾಟಿಂಗ್​ ಆಯ್ಕೆ ನೀಡಿತು. 20 ಓವರ್​ನಲ್ಲಿ ಜಿಂಬಾಬ್ವೆ ತಂಡ ಟೀಂ ಇಂಡಿಯಾಗೆ 152 ರನ್​ ಟಾರ್ಗೆಟ್​ ನೀಡುವ ಮೂಲಕ ಸವಾಲು ಎಸೆಯಿತು.
29 Ball 50* for Yashasvi Jaiswal ?? #INDvsZIMpic.twitter.com/FxI3se0W5h
— Richard Kettleborough (@RichKettle07)
29 Ball 50* for Yashasvi Jaiswal 🇮🇳 #INDvsZIMpic.twitter.com/FxI3se0W5h
— Richard Kettleborough (@RichKettle07) July 13, 2024
">July 13, 2024
ಜಿಂಬಾಬ್ವೆ ಸವಾಲನ್ನು ಹೊಡೆದುರುಳಿಸಲು ಯಶಸ್ವಿ ಜೈಸ್ವಾಲ್​ ಮತ್ತು ಶುಭ್ಮನ್​ ಗಿಲ್​​ ಮೈದಾನಕ್ಕಿಳಿದರು. ಅದರಲ್ಲಿ ಯಶಸ್ವಿ ಜೈಸ್ವಾಲ್​​ 53 ಎಸೆತಕ್ಕೆ 13 ಬೌಂಡರಿ ಮತ್ತು 2 ಸಿಕ್ಸ್​ ಬಾರಿಸುವ ಮೂಲಕ 93 ರನ್​ ಬಾರಿಸಿದರು.
ನಾಯಕ ಶುಭ್ಮನ್​ ಗಿಲ್​ 39 ಎಸೆತಕ್ಕೆ 6 ಬೌಂಡರಿ ಜೊತೆಗೆ 2 ಸಿಕ್ಸ್​ ಬಾರಿಸುವ ಮೂಲಕ 58 ಬಾರಿಸಿದರು. ಪರಿಣಾಮ ಇಬ್ಬರ ಜೊತೆಯಾಟ ಟೀಂ ಇಂಡಿಯಾಗೆ ಭರ್ಜರಿ ಜಯ ತಂದುಕೊಟ್ಟಿದೆ. ಅದರಲ್ಲೂ ಟೀಂ ಇಂಡಿಯಾದ ಓಪನರ್ಸ್​ 15 ಓವರ್​ನಲ್ಲಿ ತಂಡವನ್ನು ಜಯದ ನೆರಳಿಗೆ ತಂದಿಟ್ಟಿದ್ದಾರೆ.
ಅತ್ತ ಜಿಂಬಾಬ್ವೆ ತಂಡ ಶುಭ್ಮನ್​ ಮತ್ತು ಜೈಸ್ವಾಲ್​ ವಿಕೆಟ್​ ಉರುಳಿಸಲು ಸತತ ಹೋರಾಟ ನಡೆಸಿದರು. ಆದರೆ ಅದು ಅವರಿಂದ ಸಾಧ್ಯವಾಗಿಲ್ಲ.
ಒಟ್ಟಿನಲ್ಲಿ ಜಿಂಬಾಬ್ವೆ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್​ಗಳ ಜಯ ಸಾಧಿಸಿದೆ. ಅದರಲ್ಲೂ ಇಬ್ಬರು ಜಟಾಪಟಿಗಳು ತಂಡವನ್ನು ಜಯ ಬೆನ್ನೇರಿಸಿರೋದು ಅಚ್ಚರಿಗೆ ಕಾರಣವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us