newsfirstkannada.com

ಟೆಸ್ಟ್​ನಲ್ಲಿ ಸೋಲು, ಇಂಗ್ಲೆಂಡ್​​ಗೆ ಮುಖಭಂಗ.. ರೋಹಿತ್ ಪಡೆಯ 5 ಗೇಮ್​ ಚೇಂಜಿಂಗ್​​​ ಮೂಮೆಂಟ್ಸ್​ ಯಾವುವು?

Share :

Published February 6, 2024 at 11:42am

Update February 6, 2024 at 11:44am

  ಎದುರಾಳಿ ತಂಡದ 6 ವಿಕೆಟ್​ ಪಡೆದ್ರೂ ಗೆಲುವು ಕನ್ಫರ್ಮ್​ ಇರ್ಲಿಲ್ಲ

  ಶ್ರೇಯಸ್ ಅಯ್ಯರ್ ಮಾಡಿದ ಅದ್ಭುತ ರನೌಟ್​​ನಿಂದ ತಂಡಕ್ಕೆ ತಿರುವು

  ಹಿಟ್​ಮ್ಯಾನ್​​​ ಬುದ್ಧಿವಂತಿಕೆಗೆ ಇಂಗ್ಲೆಂಡ್​ ಪ್ರತ್ಯುತ್ತರ ನೀಡಲಾಗಲಿಲ್ಲ

ವೈಜಾಗ್​​ನಲ್ಲಿ ಆಂಗ್ಲರಿಗೆ ಸೋಲಿನ ಮುಖಭಂಗವಾಗಿದೆ. ಭಾರತೀಯ ಹುಲಿಗಳ ಘರ್ಜನೆ ಮುಂದೆ ಸ್ಟೋಕ್ಸ್​​ ಬಳಗದ ಬಝ್​ಬಾಲ್​​​​​​​​ ಠುಸ್​ ಪಟಾಕಿ ಆಯ್ತು. ನಾಲ್ಕೇ ದಿನದಲ್ಲಿ ಪ್ರವಾಸಿ ಇಂಗ್ಲೆಂಡ್ ಗಂಟೆಮೂಟೆ ಕಟ್ತು. ಇಂಗ್ಲೆಂಡ್​ ತಂಡವನ್ನ ಸೋಲಿನ ಖೆಡ್ಡಾಗೆ ತಳ್ಳಿದ್ದು, ಆ ಐದು ಮೂಮೆಂಟ್ಸ್​. ಆ 5 ಗೇಮ್​ ಚೇಂಜಿಂಗ್​​​ ಮೂಮೆಂಟ್ಸ್​ಗಳು ಯಾವವು?.

ಹೈದ್ರಾಬಾದ್ ಟೆಸ್ಟ್​​​​​ ಸೋಲಿನಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಸಿಡಿದು ನಿಂತಿದೆ. ಸೇಡಿನ ಸಮರದಲ್ಲಿ ರೋಹಿತ್​​​​​​​ ಪಡೆ ಗೆದ್ದು ಬೀಗಿದೆ. ವೈಜಾಗ್​​​ನಲ್ಲಿ 106 ರನ್​​​​ನಿಂದ ಗೆದ್ದು ಆಂಗ್ಲರ ಹುಟ್ಟಡಗಿಸಿದೆ. ಆ ಮೂಲಕ ಸರಣಿಯಲ್ಲಿ ಭಾರತ ಬ್ಯಾಕ್ ವಿತ್​ ಬ್ಯಾಂಗ್​​​​​​​​ ಮಾಡಿದ್ದು, WE NERVER GIVE UP ಅನ್ನೋ ಸ್ಟ್ರಾಂಗ್ ಮೆಸೇಜ್ ರವಾನಿಸಿದೆ. ಅಷ್ಟಕ್ಕೂ ಭಾರತದ ಗೆಲುವನ್ನ ನಿರ್ಧರಿಸಿದ್ದು ಆ ಐದೇ 5 ಮೂಮೆಂಟ್ಸ್​​​. ಆ 5 ಮೂಮೆಂಟ್ಸ್​​ನಿಂದಲೇ ಇಡೀ ಪಂದ್ಯ ಭಾರತದ ಕಡೆ ಟರ್ನ್​ ಆಯ್ತು. ಆ ಗೇಮ್ ಚೇಜಿಂಗ್​ ಮೂಮೆಂಟ್ಸ್​ಗಳನ್ನ ಒಂದೊಂದರ ಮಾಹಿತಿ ಇಲ್ಲಿದೆ.

ರೋಹಿತ್​ ಕೈಯಲ್ಲಿ ಪೋಪ್​ ಲಾಕ್​​​.. ಆಂಗ್ಲರ ಅಧಃಪತನ ಶುರು

ಇಂಗ್ಲೆಂಡ್​​​​​ 2 ವಿಕೆಟ್​ಗೆ 131 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಆಗ ಕ್ಯಾಪ್ಟನ್ ರೋಹಿತ್ ವಿಕೆಟ್ ಟೇಕರ್​ ಅಶ್ವಿನ್ ಕೈಯಲ್ಲಿ ಚೆಂಡು ನೀಡಿದ್ರು. ಪೋಪ್​​​​​ ಬ್ಯಾಟ್​ಗೆ ತಗುಲಿದ ಚೆಂಡು ನೇರವಾಗಿ ಸ್ಲಿಪ್​​ನಲ್ಲಿ ಕ್ಯಾಪ್ಟನ್ ಕೈ ಸೇರಿತು. ಪೋಪ್​​ 23 ರನ್ ಗಳಿಸಿ ಹೊರನಡೆದಿದ್ದೆ ತಡ, ಆಂಗ್ಲರ ಅಧಃಪತನ ಶುರುವಾಯ್ತು. ರೋಹಿತ್ ಬಳಗದಲ್ಲಿ ಗೆಲುವಿನ ಆಸೆ ಚಿಗುರಿತು. ಒಂದು ವೇಳೆ ರೋಹಿತ್​​​​​​​​​​, ಡೇಂಜರಸ್ ಪೋಪ್ ಕ್ಯಾಚ್​ ಡ್ರಾಪ್ ಮಾಡಿದ್ರೆ ಸೋಲಿನ ದರ್ಶನ ಆಗಿ ಬಿಡ್ತಿತ್ತು.

ಬಿಗ್​​​​ ಫಿಶ್​​​​​​ ಕ್ರಾವ್ಲಿ- ಬೇರ್​​​ಸ್ಟೋವ್ ಔಟ್​​..ಭಾರತ ನಿರಾಳ..!

ಭಾರತ 154ಕ್ಕೆ 4 ವಿಕೆಟ್ ಕಬಳಿಸಿದ್ರೂ ಜಾಕ್​ ಕ್ರಾವ್ಲಿ ಹಾಗೂ ಜಾನಿ ಬೇಸ್ಟೋವ್​ ಕ್ರಿಸ್​​​​ನಲ್ಲಿ ಹೆಬ್ಬಂಡೆಯಾಗಿ ನಿಂತಿದ್ರು. ಬಿರುಸಿನ 40 ರನ್​​​​ ಜೊತೆಯಾಟವಾಡಿ ಪಂದ್ಯವನ್ನ ತಮ್ಮತ್ತ ತಿರುಗುವಂತೆ ಮಾಡಿದ್ರು. ಇನ್ನೇನು ಭಾರತದ ಕಥೆ ಮುಗೀತು ಅನ್ನುವಷ್ಟರಲ್ಲಿ ಕುಲ್ದೀಪ್​​​ ಯಾದವ್​ ಅರ್ಧಶತಕ ಗಳಿಸಿದ್ದ ಜಾಕ್ ಕ್ರಾವ್ಲಿಗೆ ಗೇಟ್​ಪಾಸ್ ನೀಡಿದ್ರು. ಇವರ ಬೆನ್ನಲ್ಲೆ ಬಿಗ್​ ಹಿಟ್ಟರ್ ಬೇರ್​ಸ್ಟೋವ್​ ಕೂಡ ನಿರ್ಗಮಿಸಿದ್ರು.ಲಂಚ್​ ಬ್ರೇಕ್​ಗೂ ಮುನ್ನ ಈ ಎರಡು ಬಿಗ್​​ ಫಿಶ್​ ಬಲಿ ಪಡೆದ ಭಾರತ ಪಂದ್ಯದ ಮೇಲೆ ಮತ್ತಷ್ಟು ಹಿಡಿತ ಸಾಧಿಸ್ತು.

ಸ್ಟೋಕ್ಸ್​ಗೆ ಶ್ರೇಯಸ್ ರನೌಟ್ ಶಾಕ್​​​​​.. ಪಂದ್ಯಕ್ಕೆ ತಿರುವು..

ಎದುರಾಳಿಯ ತಂಡದ 6 ವಿಕೆಟ್​ ಪಡೆದ್ರೂ ಗೆಲುವು ಕನ್ಫರ್ಮ್​ ಆಗಿರ್ಲಿಲ್ಲ. ಯಾಕಂದ್ರೆ ಗೇಮ್​ ಚೇಂಜರ್​​ ಬೆನ್ ಸ್ಟೋಕ್ಸ್​​​​ ಕ್ರೀಸ್​ನಲ್ಲಿದ್ರು. ಯಾವ ಟೈಮ್​ಲ್ಲೂ ಪಂದ್ಯದ ಚಿತ್ರಣ ಬದಲಿಸುವ ತಾಕತ್ತು ಇವರಿಗಿತ್ತು. ಇಂತಹ ಒನ್​ ಮ್ಯಾನ್ ಆರ್ಮಿಯನ್ನ ಶ್ರೇಯಸ್ ಅಯ್ಯರ್ ಅದ್ಭುತ ರನೌಟ್​​ ಬಲೆಗೆ ಬೀಳಿಸಿದ್ರು. ಆಗ ತಾನೇ ಹೊಟ್ಟೆ ತುಂಬಾ ತಿಂದು ಬಂದಿದ್ದ ಸ್ಟೋಕ್ಸ್​, ರನೌಟ್​​ಗೆ ಬಲಿಯಾದ್ರು.

ಬೌಲರ್ಸ್​ ಕಣ್ಣಲ್ಲಿ ಕಾಣ್ತಿದ್ದ ಗೆಲುವಿನ ಕಿಡಿ..!

ಪಂದ್ಯದ ನಾಲ್ಕನೇ ದಿನ ಟೀಮ್​ ಇಂಡಿಯಾದ ಎಲ್ಲ ಬೌಲರ್ಸ್​ ವೈಜಾಗ್​ ಟೆಸ್ಟ್​ ಗೆದ್ದೇ ತೀರುವ ಪಣ ತೊಟ್ಟಂತೆ ಕಾಣಿಸ್ತಿತ್ತು. ಆ ಮಟ್ಟಿಗೆ ವೇಗಿಗಳು ಹಾಗೂ ಸ್ಪಿನ್ನರ್ಸ್​ ಒಗ್ಗಟ್ಟಿನ ಹೋರಾಟ ನಡೆಸಿದ್ರು. ಸ್ಟಾರ್​​ ಬೌಲರ್​​ ಬೂಮ್ರಾ 3 ವಿಕೆಟ್ ಪಡೆದು ಇಂಗ್ಲೆಂಡ್​ಗೆ​ ದೊಡ್ಡ ಪೆಟ್ಟು ನೀಡಿದ್ರು. ಸ್ಪಿನ್ನರ್​ಗಳಾದ ಅಶ್ವಿನ್ 3 ಹಾಗೂ ಕುಲ್​ದೀಪ್​​​​​​​​ ಯಾದವ್​​​, ಅಕ್ಷರ್ ಪಟೇಲ್​ ತಲಾ 1 ವಿಕೆಟ್ ಪಡೆದು ಪಂದ್ಯದ ದಿಕ್ಕನ್ನೆ ಬದಲಿಸಿದ್ರು.

ಒತ್ತಡದ ನಡುವೆ ರೋಹಿತ್​​​ ಜಾಣತನದ ಕ್ಯಾಪ್ಟನ್ಸಿ

ರೋಹಿತ್​​​​ ಶರ್ಮಾರ CLEVER ಕ್ಯಾಪ್ಟನ್ಸಿ ಕೂಡ ವೈಜಾಗ್ ಟೆಸ್ಟ್​​​​​​​ನಲ್ಲಿ ಪ್ರಮುಖ ಗೆಲುವಿನ ಪಾತ್ರ ವಹಿಸ್ತು. ಒಂದೆಡೆ ಇಂಗ್ಲೆಂಡ್ ಬ್ಯಾಟರ್ಸ್​ ಆಕ್ರಮಣಕಾರಿ ಆಟದ ಮೂಲಕ ಒತ್ತಡ ಹೇರುತ್ತಿದ್ರು. ಇದಕ್ಕೆ ರೋಹಿತ್ ಗಾಬರಿಗೊಳ್ಳಲಿಲ್ಲ. ಆಟಗಾರರನ್ನ ಕೂಲ್ ಆಗಿ ಹ್ಯಾಂಡಲ್ ಮಾಡಿದ್ರು. ಎದುರಾಳಿ ಬ್ಯಾಟರ್​​ಗಳ ವಿಕ್ನೆಸ್​ಗೆ ಸೂಕ್ತ ಸ್ಟ್ರಾಟಜಿ ರೂಪಿಸಿದ್ರು. ಹಿಟ್​ಮ್ಯಾನ್​​​ರ ಬುದ್ಧಿವಂತಿಕೆಯ ನಾಯಕತ್ವಕ್ಕೆ ಆಂಗ್ಲರು ಪ್ರತ್ಯುತ್ತರ ನೀಡಲಾಗದೇ ಸೋಲೊಪ್ಪಿಕೊಂಡ್ರು.

ಹೈದ್ರಾಬಾದ್​ನಲ್ಲಿ ತಲೆ ತಗ್ಗಿಸಿದ್ದ ಟೀಮ್ ಇಂಡಿಯಾ ವೈಜಾಗ್​ನಲ್ಲಿ ತಲೆ ಎತ್ತಿ ಮೆರೆದಾಡಿದೆ. ಈ ಗೆಲುವನ್ನ ತಲೆಗೇರಿಸಿಕೊಳ್ಳದೇ ರಾಜ್​ಕೋಟ್​​ನಲ್ಲಿ ಕಣಕ್ಕಿಳಿಯಲಿ. ಗೆಲುವಿನ ಯಾತ್ರೆ ಮುಂದುವರಿಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೆಸ್ಟ್​ನಲ್ಲಿ ಸೋಲು, ಇಂಗ್ಲೆಂಡ್​​ಗೆ ಮುಖಭಂಗ.. ರೋಹಿತ್ ಪಡೆಯ 5 ಗೇಮ್​ ಚೇಂಜಿಂಗ್​​​ ಮೂಮೆಂಟ್ಸ್​ ಯಾವುವು?

https://newsfirstlive.com/wp-content/uploads/2024/02/TEAM_INDIA_ROHIT.jpg

Load More