newsfirstkannada.com

ಬೂಮ್ರಾ, ಅಶ್ವಿನ್​ ಬೌಲಿಂಗ್​​ಗೆ ನೆಲ ಕಚ್ಚಿದ ಇಂಗ್ಲೆಂಡ್.. ವೈಜಾಗ್​ನಲ್ಲಿ ರೋಹಿತ್​ ಪಡೆಯ ವಿಜಯೋತ್ಸವ ಹೇಗಿತ್ತು?​

Share :

Published February 6, 2024 at 11:10am

    ಮೊದಲ ಟೆಸ್ಟ್​ ಗೆದ್ದ ಅಹಂನಲ್ಲಿದ್ದ ಬ್ರಿಟಿಷರಿಗೆ ಸೋಲಿನ ರುಚಿ

    ಆಂಗ್ಲರನ್ನ ಗಿರ್​ಗಿಟ್ಲೆ ಆಡಿಸಿದ ಅಕ್ಷರ್​ ಪಟೇಲ್​, ಆರ್​ ಅಶ್ವಿನ್​

    ಬೂಮ್ರಾ, ಅಶ್ವಿನ್ 2ನೇ ಇನ್ನಿಂಗ್ಸ್​​ನಲ್ಲಿ ಎಷ್ಟು ವಿಕೆಟ್ ಪಡೆದ್ರು​?

ಆಂಗ್ಲರ ವಿರುದ್ಧದ ಸೇಡಿನ ಸಮರದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. 4ನೇ ದಿನದಾಟದಲ್ಲಿ ಇಂಗ್ಲೆಂಡ್​​ನ ಬಝ್​ಬಾಲ್​ ಮಂತ್ರಕ್ಕೆ ಟೀಮ್​ ಇಂಡಿಯಾ ತಿರುಮಂತ್ರ ಹಾಕಿದ್ದೇಗೆ?. ವೈಜಾಗ್​ನಲ್ಲಿ ರೋಹಿತ್​ ಪಡೆಯ ವಿಜಯೋತ್ಸವ ಹೇಗಿತ್ತು?.

ಹೈದ್ರಬಾದ್​ ಟೆಸ್ಟ್​ ಪಂದ್ಯದಲ್ಲಿ ಸೋತು ಮುಖಭಂಗಕ್ಕೊಳಗಾಗಿದ್ದ ಟೀಮ್​ ಇಂಡಿಯಾ ವಿಶಾಖಪಟ್ಟಣದಲ್ಲಿ ಭರ್ಜರಿ ಕಮ್​ಬ್ಯಾಕ್​ ಮಾಡಿದೆ. ಮೊದಲ ಟೆಸ್ಟ್​ ಗೆದ್ದ ಅಹಂನಲ್ಲಿದ್ದ ಆಂಗ್ಲರಿಗೆ ಸೋಲಿನ ರುಚಿ ತೋರಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನ 1-1 ಅಂತರದಲ್ಲಿ ಸಮಭಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.

3ನೇ ದಿನದ ಅಂತ್ಯಕ್ಕೆ 1 ವಿಕೆಟ್​​ ನಷ್ಟಕ್ಕೆ 67 ರನ್​ಗಳಿಸಿದ್ದ ಇಂಗ್ಲೆಂಡ್​ ತಂಡ ಮುಂದಿದ್ದ ಟಾರ್ಗೆಟ್​ 332 ರನ್​ ಆದ್ರೆ, ಭಾರತದ ಮುಂದೆ 9 ವಿಕೆಟ್​ ಕಬಳಿಸೋ ಚಾಲೆಂಜ್​ ಇತ್ತು. ಅಗ್ರೆಸ್ಸೀವ್​ ಆಟದ ಮುನ್ಸೂಚನೆ ನೀಡಿದ್ದ ಆಂಗ್ಲ ಪಡೆ 2ನೇ ಟೆಸ್ಟ್​ನಲ್ಲೂ ಗೆಲ್ಲೋ ಅಪಾರ ಆತ್ಮವಿಶ್ವಾಸದಲ್ಲಿತ್ತು. ಆದ್ರೆ, 4ನೇ ದಿನದಾಟದ ಮೊದಲ ಸೆಷನ್​ನಲ್ಲೇ ಎಲ್ಲ ಠುಸ್​ ಪಟಾಕಿ ಆಯಿತು.

ಮೊದಲ ಸೆಷನ್​ನಲ್ಲೇ ಮಕಾಡೆ ಮಲಗಿದ ಆಂಗ್ಲ ಪಡೆ

1 ವಿಕೆಟ್​ ನಷ್ಟಕ್ಕೆ 67 ರನ್​ಗಳೊಂದಿಗೆ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ ಭಾರತದ ಸ್ಪಿನ್​ ಟ್ರ್ಯಾಪ್​ಗೆ ಬಿತ್ತು. ಅಕ್ಷರ್​ ಪಟೇಲ್​, ಆರ್​ ಅಶ್ವಿನ್​ ಆಂಗ್ಲ ಬ್ಯಾಟ್ಸ್​ಮನ್​ಗಳನ್ನ ಗಿರ್​ಗಿಟ್ಲೆ ಆಡಿಸಿದ್ರು. ಭಾರತದ ಸ್ಪಿನ್​ ಬಾಲ್​ ಮುಂದೆ ಅಗ್ರೆಸ್ಸಿವ್​ ಬ್ಯಾಟಿಂಗ್​ಗೆ ಮುಂದಾದ ರೆಹಾನ್​ ಅಹ್ಮದ್​, ಒಲಿ ಪೋಪ್​, ಜೋ ರೂಟ್​.. ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್​ ಸೇರಿದ್ರು.

ಜಾಕ್​​ ಕ್ರಾವ್ಲಿ ದಿಟ್ಟ ಆಟಕ್ಕೆ ಕುಲ್​ದೀಪ್​ ಫುಲ್​ಸ್ಟಾಫ್.!

ಒಂದೆಡೆ ವಿಕೆಟ್​ ಬೀಳ್ತಾ ಇದ್ರೂ, ಇಂಗ್ಲೆಂಡ್ ಓಪನರ್​​​ ಜಾಕ್​ ಕ್ರಾವ್ಲಿ ರನ್​ ಪ್ರಹಾರ ಮುಂದುವರೆಸಿದ್ರು. 8 ಬೌಂಡರಿ, 1 ಸಿಕ್ಸರ್​​ನೊಂದಿಗೆ ಶತಕದೆಡೆಗೆ ಮುನ್ನುಗ್ಗುತ್ತಿದ್ದ ಜಾಕ್​​ಕ್ರಾವ್ಲಿಗೆ ಕುಲ್​ದೀಪ್​ ಖೆಡ್ಡಾ ತೋಡಿದ್ರು. 73 ರನ್​ಗಳಿಗೆ ಕ್ರಾವ್ಲಿ ಆಟ ಅಂತ್ಯವಾದ್ರೆ, 26 ರನ್​ಗಳಿಸಿದ್ದ ಜಾನಿ ಬೇರ್​ಸ್ಟೋ ಬೂಮ್ರಾ ಬಲೆಗೆ ಬಿದ್ರು.

292 ರನ್​ಗಳಿಗೆ ಇಂಗ್ಲೆಂಡ್​ ಖೇಲ್​ ಖತಂ.!

ಲಂಚ್​ ಬ್ರೇಕ್​ ಮುಗಿಸಿ ಕಣಕ್ಕಿಳಿದ ಇಂಗ್ಲೆಂಡ್​ ತಂಡಕ್ಕೆ ಶ್ರೇಯಸ್​ ಅಯ್ಯರ್​ ಶಾಕ್​ ನೀಡಿದ್ರು. ಅದ್ಭುತ ಫೀಲ್ಡಿಂಗ್​ನಿಂದ ಬೆನ್​ ಸ್ಟೋಕ್ಸ್​ರನ್ನ ರನೌಟ್​ ಮಾಡಿದ್ರು.

ಆ ಬಳಿಕ ಜೊತೆಯಾದ ಬೆನ್​ ಫೋಕ್ಸ್​, ಟಾಮ್​ ಹಾರ್ಟ್ಲಿ ಕೆಲ ಕಾಲ ಹೋರಾಡಿದ್ರು. ಆದ್ರೆ, ಬಿಗ್​​ ಇನ್ನಿಂಗ್ಸ್​ ಕಟ್ಟೋದಕ್ಕೆ ಬೂಮ್ರಾ ಅವಕಾಶವನ್ನೇ ನೀಡಲಿಲ್ಲ. ಬೆನ್​ ಫೋಕ್ಸ್​ ಬೂಮ್ರಾ ಬೌಲಿಂಗ್​ನಲ್ಲಿ ಔಟಾದ್ರೆ, ಬಳಿಕ ಕಣಕ್ಕಿಳಿದ ಶೋಯೇಬ್​ ಬಶೀರ್​, ಮುಕೇಶ್​ ಕುಮಾರ್​ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​ ಆದ್ರು. ಟಾಮ್​ ಹಾರ್ಟ್ಲೀ ಆಟಕ್ಕೆ ಬೂಮ್ರಾ ಫುಲ್​ ಸ್ಟಾಫ್​ ಇಡೋದ್ರೊಂದಿಗೆ ಇಂಗ್ಲೆಂಡ್​ ಆಲೌಟ್​ ಆಯ್ತು.

292 ರನ್​ಗಳಿಗೆ ಇಂಗ್ಲೆಂಡ್​ ಆಲೌಟ್​ ಆದ್ರೆ, ಟೀಮ್​ ಇಂಡಿಯಾ 106 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಸರಣಿಯಲ್ಲಿ ಕಮ್​ಬ್ಯಾಕ್​ ಮಾಡಿದ ಟೀಮ್​ ಇಂಡಿಯಾ ಸಮಭಲ ಸಾಧಿಸುವಲ್ಲಿ ಯಶಸ್ವಿಯಾಯ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬೂಮ್ರಾ, ಅಶ್ವಿನ್​ ಬೌಲಿಂಗ್​​ಗೆ ನೆಲ ಕಚ್ಚಿದ ಇಂಗ್ಲೆಂಡ್.. ವೈಜಾಗ್​ನಲ್ಲಿ ರೋಹಿತ್​ ಪಡೆಯ ವಿಜಯೋತ್ಸವ ಹೇಗಿತ್ತು?​

https://newsfirstlive.com/wp-content/uploads/2024/02/TEAM_INDIA-2.jpg

Load More