ಇಂಗ್ಲೆಂಡ್​ ತಂಡದ ದೀಪ ಆರಿಸಿದ ಆಕಾಶ್​ ದೀಪ್​.. ಭಾರೀ ರನ್​ಗಳ ಅಂತರದಿಂದ ಗಿಲ್​​​ ಪಡೆಗೆ ಜಯ

author-image
Bheemappa
Updated On
ಟೆಸ್ಟ್ ಗೆಲುವಿಗೆ ಕಾರಣ 4 ಆಟಗಾರರು.. ಟೀಂ ಇಂಡಿಯಾ ಕಂಬ್ಯಾಕ್ ಹಿಂದಿರುವ ಹೀರೋಗಳು ಇವರೇ..!
Advertisment
  • ಇಂಗ್ಲೆಂಡ್​ ಬ್ಯಾಟ್ಸ್​​ಮನ್ಸ್​​​ಗೆ ಪೆವಿಲಿಯನ್ ದಾರಿ ತೋರಿಸಿದ ಆಕಾಶ್
  • 2ನೇ ಇನ್ನಿಂಗ್ಸ್​ನಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಎಲ್ಲ ಬೌಲರ್​​ಗಳು
  • ಎರಡೂ ಇನ್ನಿಂಗ್ಸ್​ನಲ್ಲಿ ಸೆಂಚುರಿ ಬಾರಿಸಿದ್ದ ನಾಯಕ ಶುಭ್​ಮನ್ ಗಿಲ್​

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಪಡೆದಿದೆ. 336 ರನ್​ಗಳ ಅಂತರದಿಂದ ಜಯಭೇರಿ ಬಾರಿಸಿದ್ದು ಈ ಮೂಲಕ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಇನ್ನು 3 ಟೆಸ್ಟ್​ ಪಂದ್ಯಗಳು ಬಾಕಿ ಉಳಿದಿವೆ.

ಬರ್ಮಿಂಗ್ಹ್ಯಾಮ್​​ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬೆನ್​ ಸ್ಟೋಕ್ಸ್​ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಕ್ಯಾಪ್ಟನ್​​ ಗಿಲ್ ಅವರ ದ್ವಿಶತಕದಿಂದ 587 ರನ್​ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಹ್ಯಾರಿ ಬ್ರೂಕ್ 158 ಹಾಗೂ ಜೇಮೀ ಸ್ಮಿತ್ 184 ರನ್​ಗಳ ನೆರವಿನಿಂದ ಆಂಗ್ಲ ಪಡೆ 407 ರನ್​ಗೆ ಆಲೌಟ್​ ಆಗಿತ್ತು.

publive-image

ಇದರಿಂದ ಟೀಮ್ ಇಂಡಿಯಾ 180 ರನ್​ಗಳ ಮುನ್ನಡೆ ಪಡೆದುಕೊಂಡು 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿತ್ತು. ಈ ಇನ್ನಿಂಗ್ಸ್​ನಲ್ಲೂ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದ ಭಾರತ ಕನ್ನಡಿಗ ಕೆ.ಎಲ್ ರಾಹುಲ್​, ರಿಷಭ್ ಪಂತ್ ಹಾಗೂ ಜಡೇಜಾ ಅರ್ಧಶತಕಗಳನ್ನ ಸಿಡಿಸಿದ್ದರು. ಶುಭ್​ಮನ್​ ಗಿಲ್ ನಾಯಕತ್ವದ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ 161 ರನ್​ಗಳನ್ನು ಬಾರಿಸಿದ್ದರು. ಈ ಎಲ್ಲರ ರನ್​ಗಳ ಕೊಡುಗೆಯಿಂದ ಭಾರತ 6 ವಿಕೆಟ್​ಗೆ 427 ರನ್​ಗೆ ಡಿಕ್ಲೇರ್ ಮಾಡಿಕೊಂಡಿತ್ತು.

ಒಟ್ಟು 608 ರನ್​ಗಳ ಟಾರ್ಗೆಟ್​ ಪಡೆದುಕೊಂಡಿದ್ದ ಇಂಗ್ಲೆಂಡ್​ ಆಟಗಾರರು ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಲು ಪತರಗುಟ್ಟಿದರು. ಆಕಾಶ್ ದೀಪ್ ಅವರ ಬಿರುಸಿನ ಬೌಲಿಂಗ್ ಮುಂದೆ ಆಂಗ್ಲ ಪಡೆಯ ಆಟಗಾರರು ಉದುರಿ ಹೋದರು. ಉಳಿದ ಬೌಲರ್​​ ಕೂಡ ಮಾರಕ ದಾಳಿ ಮಾಡಿ ಇಂಗ್ಲೆಂಡ್ ಪಡೆಯನ್ನ ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ:ಬ್ಯುಸಿನೆಸ್ ಫೀಲ್ಡ್​ಗೆ ಇಳಿದ ಟೀಮ್ ಇಂಡಿಯಾದ ಸ್ಟಾರ್.. ವಿರಾಟ್​ ಕೊಹ್ಲಿ ಶಿಷ್ಯ ಹೊಸ ಇನ್ನಿಂಗ್ಸ್!

publive-image

ಕೊನೆ ಇನ್ನಿಂಗ್ಸ್​ನಲ್ಲಿ ಮಾರಕ ಬೌಲಿಂಗ್ ಮಾಡಿದ ಆಕಾಶ್ ದೀಪ್​ 6 ವಿಕೆಟ್​ಗಳನ್ನ ಪಡೆದು ಮಿಂಚಿದರು. ಇದರಿಂದ ಇಂಗ್ಲೆಂಡ್​ ಕೇವಲ 271 ರನ್ ಮಾತ್ರ ಗಳಿಸಲು ಶಕ್ತವಾಯಿತು. ಇದರಿಂದ ಟೀಮ್ ಇಂಡಿಯಾ 336 ರನ್​ಗಳ ಅಂತರದಿಂದ ಅಮೋಘವಾದ ಗೆಲುವು ಪಡೆದು ಸಂಭ್ರಮಿಸಿತು. ಈಗಾಗಲೇ ಮೊದಲ ಪಂದ್ಯ ಇಂಗ್ಲೆಂಡ್ ಗೆದ್ದಿದ್ದು ಟೀಮ್​ ಇಂಡಿಯಾ 2ನೇ ಟೆಸ್ಟ್​ ಜಯಿಸಿದೆ. ಇದರಿಂದ ಸರಣಿಯಲ್ಲಿ 1-1 ಸಮಬಲ ಸಾಧಿಸಿದ್ದು ಇನ್ನು 3 ಟೆಸ್ಟ್​ ಪಂದ್ಯಗಳು ಬಾಕಿ ಉಳಿದಿವೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment