/newsfirstlive-kannada/media/post_attachments/wp-content/uploads/2025/02/ROHIT_GILL.jpg)
ಬೌಲಿಂಗ್ನಲ್ಲಿ ಜಡೇಜಾ, ಹರ್ಷಿತ್ ರಾಣಾ ಜಬರ್ದಸ್ತ್ ಪರ್ಫಾಮೆನ್ಸ್ ನೀಡಿದರೆ, ಬ್ಯಾಟಿಂಗ್ನಲ್ಲಿ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಅಬ್ಬರಕ್ಕೆ ಆಂಗ್ಲರು ಥಂಡಾ ಹೊಡೆದರು. ಅದರಲ್ಲೂ ಮುಂಬೈಕರ್ ಶ್ರೇಯಸ್ ಕೌಂಟರ್ ಅಟ್ಯಾಕ್ಗೆ ಇಂಗ್ಲೆಂಡ್ ಕಕ್ಕಾಬಿಕ್ಕಿ ಆಯಿತು.
249 ರನ್ಗಳ ಟಾರ್ಗೆಟ್.. ಶ್ರೇಯಸ್ ಅಯ್ಯರ್ ಅದ್ಭುತ ಆಟ. ಶುಭ್ಮನ್ ಗಿಲ್ ಕ್ಲಾಸಿಕ್ ಬ್ಯಾಟಿಂಗ್. ಆಕ್ಷರ್ ಪಟೇಲ್ ಫಿಫ್ಟಿ. 38.4 ಓವರ್ಗಳಿಗೆ ಇಂಗ್ಲೆಂಡ್ನ ಖೇಲ್ ಖತಂ ಆಯಿತು. ನಾಗ್ಪುರ ಪಂದ್ಯದ ಸೆಕೆಂಡ್ ಇನ್ನಿಂಗ್ಸ್ನ ಹೈಲೆಟ್ಸ್ ಹೇಗಿದೆ?.
ಮುಂಬೈಕರ್ ಓಪನರ್ಸ್ ಫ್ಲಾಫ್.. ರೋಹಿತ್ ಠುಸ್..!
249 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾಗೆ ಉತ್ತರ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದ ಮುಂಬೈಕರ್ ಯಶಸ್ವಿ ಜೈಸ್ವಾಲ್, 15 ರನ್ ಗಳಿಸಿದ್ದಾಗ ಜೋಫ್ರಾ ಆರ್ಚರ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಜೈಸ್ವಾಲ್ ಬೆನ್ನಲ್ಲೇ, ಕ್ಯಾಪ್ಟನ್ ರೋಹಿತ್ ಬೌನ್ಸರ್ ಎಸೆತವನ್ನು ಫ್ಲಿಕ್ ಮಾಡಲು ಹೋಗಿ 2 ರನ್ಗೆ ವಿಕೆಟ್ ಕೈಚೆಲ್ಲಿದರು.
ಗಿಲ್-ಶ್ರೇಯಸ್ ಆಸರೆ.. ಅಯ್ಯರ್ ಪವರ್ ಫಿಫ್ಟಿ..!
19 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಆಸರೆಯಾಗಿದ್ದೆ ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್. 3ನೇ ವಿಕೆಟ್ಗೆ ಜೊತೆಯಾದ ಈ ಜೋಡಿ 64 ಎಸೆತಗಳಲ್ಲೇ 94 ರನ್ಗಳ ಜೊತೆಯಾಟ ಆಡಿದರು.
ಒಂದು ಕಡೆ ಉಪನಾಯಕ ಶುಭ್ಮನ್ ಗಿಲ್ ನಿಧನವಾಗಿ ಉತ್ತಮ ಇನ್ನಿಂಗ್ಸ್ ಕಟ್ಟುತ್ತಿದ್ದರೇ, ಅತ್ತ ಇಂಗ್ಲೆಂಡ್ ಬೌಲರ್ಗಳನ್ನ ಮನ ಬಂದಂತೆ ದಂಡಿಸಿದ ಶ್ರೇಯಸ್, 30 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆದ್ರೆ, 9 ಬೌಂಡರಿ, 2 ಸಿಕ್ಸರ್ ಒಳಗೊಂಡ 59 ರನ್ ಗಳಿಸಿ ಮುನ್ನುಗ್ಗುತ್ತಿದ್ದ ಶ್ರೇಯಸ್, ಜೇಕಬ್ ಬೆಥಲ್ ಓವರ್ನಲ್ಲಿ ಎಲ್ಬಿ ಟ್ರ್ಯಾಪ್ಗೆ ಅಯ್ಯರ್ ಬಲಿಯಾದರು.
ವೈಸ್ ಕ್ಯಾಪ್ಟನ್ ಗಿಲ್, ಅಕ್ಷರ್ ಪಟೇಲ್ ಶತಕದಾಟ.!
ಶ್ರೇಯಸ್ ವಿಕೆಟ್ ಪತನದ ಬಳಿಕ ಶುಭ್ಮನ್ ಗಿಲ್ ಜೊತೆಯಾದ ಅಕ್ಷರ್ ಪಟೇಲ್, ಅದ್ಭುತ ಬ್ಯಾಟಿಂಗ್ ನಡೆಸಿದರು. 4ನೇ ವಿಕೆಟ್ಗೆ 108 ರನ್ಗಳ ಅಮೋಘ ಜೊತೆಯಾಟ ಅಡಿದ ಈ ಜೋಡಿ, ಟೀಮ್ ಇಂಡಿಯಾ ಗೆಲುವನ್ನು ಸುಲಭವಾಗಿಸಿದರು. 60 ಎಸೆತಗಳಲ್ಲಿ ಗಿಲ್, 50 ರನ್ ಪೂರೈಸಿದರು.
ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಭಾರತ- ಶ್ರೀಲಂಕಾ T20 ಪಂದ್ಯ; ಗವಾಸ್ಕರ್, ಪಠಾಣ್ ಸೇರಿ ದಿಗ್ಗಜ ಪ್ಲೇಯರ್ಸ್ ಕಣಕ್ಕೆ
ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದುಕೊಂಡು ಕಣಕ್ಕಿಳಿದ ಅಕ್ಷರ್ ಪಟೇಲ್ 46 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅಕ್ಷರ್ ಅರ್ಧಶತಕ ಸಿಡಿಸಿದ ಮರು ಎಸೆತದಲ್ಲೇ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ ಸೇರಿದರು. ಆ ಬಳಿಕ ಬಂದ ಕೆ.ಎಲ್.ರಾಹುಲ್, 2 ರನ್ಗೆ ವಿಕೆಟ್ ಒಪ್ಪಿಸಿದ್ರೆ. 87 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಶುಭ್ಮನ್ ಗಿಲ್, ಮಹ್ಮೂದ್ ಓವರ್ನಲ್ಲಿ ಬಟ್ಲರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಆ ಬಳಿಕ ಹಾರ್ದಿಕ್ ಅಜೇಯ 09 ರನ್, ಜಡೇಜಾ ಅಜೇಯ 12 ರನ್ ಗಳಿಸುವುದರೊಂದಿಗೆ ಟೀಮ್ ಇಂಡಿಯಾ 38.4 ಓವರ್ಗಳಲ್ಲೇ 6 ವಿಕೆಟ್ ಕಳೆದುಕೊಂಡು 251 ರನ್ ಗಳಿಸಿ ಗೆಲುವಿನ ದಡ ಸೇರಿತು. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಪಡೆ ಶುಭಾರಂಭ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ