newsfirstkannada.com

ಯಂಗ್​ ಪ್ಲೇಯರ್ಸ್ ಸ್ಫೋಟಕ ಬ್ಯಾಟಿಂಗ್.. ಯಶಸ್ವಿ ಜೈಸ್ವಾಲ್​​​- ಶಿವಂ ದುಬೆ ವೀರಾವೇಶಕ್ಕೆ ಅಫ್ಘಾನ್ ಬಲಿ

Share :

Published January 15, 2024 at 11:08am

    26 ಎಸೆತ ಬಾಕಿ ಇರುವಂತೆ 6 ವಿಕೆಟ್​ಗಳಿಂದ ಜಯಭೇರಿ

    ಇಂದೋರ್​​ನಲ್ಲಿ ವಂಡರ್ ಸೃಷ್ಟಿಸಿದ ಶಿವಂ ದುಬೆ, ಯಶಸ್ವಿ

    ಕ್ಯಾಪ್ಟನ್​ ರೋಹಿತ್ ಮತ್ತೊಮ್ಮೆ ಡಕೌಟ್​ ಆಗಿ ನಿರ್ಗಮನ

2ನೇ ಟಿ20 ಪಂದ್ಯದಲ್ಲಿ ಅಪ್ಘಾನಿಸ್ತಾನ ತಂಡ ಭಾರತಕ್ಕೆ ತಲೆಬಾಗಿದೆ. ಯಶಸ್ವಿ ಜೈಸ್ವಾಲ್​​​​ ಹಾಗೂ ಶಿವಂ ದುಬೆ ಸ್ಫೋಟಕ ಆಟಕ್ಕೆ ಬೆದರಿ ಬೆಂಡಾಯ್ತು. ರೋಹಿತ್ ಪಡೆ ಇಂದೋರ್​ನಲ್ಲಿ ಬಿಗ್​ ವಿಕ್ಟರಿ ದಾಖಲಿಸಿ ಸರಣಿ ಕೈವಶ ಮಾಡಿಕೊಳ್ತು. ಹಾಗಾದ್ರೆ ಇಂಡಿಯನ್ ಪ್ಲೇಯರ್ಸ್​​ ಅಫ್ಘಾನ್​ ಟೀಮ್​ ಅನ್ನು ಬೇಟೆಯಾಡಿದ್ದಯ ಹೇಗೆ?.

ಸ್ಪಿನ್ ಟ್ರ್ಯಾಪ್​​ಗೆ ಬಿದ್ದ ಅಪ್ಘನ್​ ಬ್ಯಾಟರ್ಸ್​​​..!

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಅಫ್ಘಾನ್​ ಪಡೆ ಆರಂಭದಲ್ಲೇ ಸ್ಪಿನ್​ ಟ್ರ್ಯಾಪ್​ಗೆ ಬಿತ್ತು. ಕ್ಯಾಪ್ಟನ್​​ ಇಬ್ರಾಹಿಂ ಜರ್ದಾನ್​ ಅಕ್ಷರ್​ ಮೋಡಿಗೆ ಬಲಿಯಾದ್ರೆ, ರೆಹಮಾನುಲ್ಲ ಗುರ್ಬಾಜ್​ ಆಟಕ್ಕೆ ರವಿ ಬಿಷ್ನೋಯ್​ ಎಸೆತದಲ್ಲಿ ಕ್ಲೀನ್​ಬೋಲ್ಡ್​ ಆದ್ರು.

ಗುಲ್ಬುದ್ದೀನ್​ ನೈಬ್​​​ ಅರ್ಧಶತಕದ ಆಟ.!

4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಝಮತುಲ್ಲ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದ್ರು. 60 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡ ತಂಡಕ್ಕೆ ಗುಲ್ಬುದ್ದೀನ್​ ಆಸರೆಯಾದ್ರು. 5 ಬೌಂಡರಿ, 4 ಸಿಕ್ಸರ್​ ಸಿಡಿಸಿದ ಗುಲ್ಭದ್ದೀನ್​ ಹಾಫ್​ ಸೆಂಚುರಿ ಸಿಡಿಸಿ ಔಟಾದ್ರು.

ಅಂತಿಮ ಹಂತದಲ್ಲಿ ಆರ್ಷ್​ದೀಪ್​ ಆರ್ಭಟ.!

ಕಳೆದ ಪಂದ್ಯದಲ್ಲಿ ಘರ್ಜಿಸಿದ್ದ ಮೊಹಮ್ಮದ್​ ನಬಿ ಆಟಕ್ಕೆ ರವಿ ಬಿಷ್ನೋಯ್​ ಬ್ರೇಕ್​ ಹಾಕಿದ್ರು. ಆ ಬಳಿಕ ಆರ್ಷ್​ದೀಪ್​ ಸಿಂಗ್​ ಆರ್ಭಟಿಸಿದ್ರು. ನಜೀಬುಲ್ಲಾ ಝರ್ಧಾನ್​, ಕರಿಮ್​ ಜನ್ನತ್​, ನೂರ್​ ಅಹ್ಮದ್​​ಗೆ ಬ್ಯಾಕ್​ ಟು ಬ್ಯಾಕ್​​ ಪೆವಿಲಿಯನ್​ ದಾರಿ ತೋರಿಸಿದ್ರು. ಆದ್ರೂ, ಅಪ್ಘನ್​ ಪಡೆ 172 ರನ್​ಗಳ ಸವಾಲಿನ ರನ್​ ಕಲೆ ಹಾಕುವಲ್ಲಿ ಯಶಸ್ವಿಯಾಯ್ತು.

2ನೇ ಪಂದ್ಯದಲ್ಲೂ ರೋಹಿತ್​ ಶರ್ಮಾ ಡಕೌಟ್​.!

ಸರಣಿಯ ಮೊದಲ ಪಂದ್ಯದಲ್ಲಿ ದುರಾದೃಷ್ಟಕರ ರೀತಿಯಲ್ಲಿ ರನೌಟ್​ ಆಗಿದ್ದ ರೋಹಿತ್​ ಶರ್ಮಾ, ನಿನ್ನೆಯ ಪಂದ್ಯದಲ್ಲೀ ಡಕೌಟ್​ ಆಗಿ ನಿರ್ಗಮಿಸಿದ್ರು. ಫಜಲ್​​ಹಕ್​ ಫಾರೂಕಿ ಎಸೆತದಲ್ಲಿ ಕ್ಲೀನ್​ ಬೋಲ್ಡ್​ ಆದ್ರು.

ಕಮ್​​ಬ್ಯಾಕ್​ ಪಂದ್ಯದಲ್ಲಿ ಗುಡುಗಿದ ಕಿಂಗ್​ ಕೊಹ್ಲಿ

16 ತಿಂಗಳ ಬಳಿಕ ಟಿ20 ತಂಡಕ್ಕೆ ಮರಳಿದ ಕಿಂಗ್ ಕೊಹ್ಲಿ ಫ್ಯಾನ್ಸ್​ ಅನ್ನ ನಿರಾಸೆಗೊಳಿಸಲಿಲ್ಲ. ಬೌಂಡ್ರಿಯಿಂದ ಇನ್ನಿಂಗ್ಸ್​ ಆರಂಭಿಸಿದ ವಿರಾಟ್​ ಬಿರುಸಿನ 29 ರನ್ ಸಿಡಿಸಿ ಪೆವಿಲಿಯನ್ ಸೇರಿದ್ರು.

ಲೆಫ್ಟಿ ಬ್ಯಾಟರ್ಸ್​ ಸ್ಫೋಟಕ ಅರ್ಧಶತಕ ಸಿಡಿಸಿ ಶೈನಿಂಗ್

ಕೊಹ್ಲಿ ನಿರ್ಗಮನದ ಬಳಿಕ ಯಶಸ್ವಿ ಜೈಸ್ವಾಲ್​​​-ಶಿವಂ ದುಬೆ ಕೂಡಿಕೊಂಡು ಅಪ್ಘನ್​ ಬೌಲರ್​ಗಳನ್ನ ಮನಬಂದಂತೆ ದಂಡಿಸಿದ್ರು. ಇಬ್ಬರು 3ನೇ ವಿಕೆಟ್​​ಗೆ ಮುರಿಯದ 92 ರನ್​ಗಳ ಜೊತೆಯಾಟವಾಡಿದ್ರು. ಜೈಸ್ವಾಲ್​ ಸಿಡಿಲಬ್ಬರದ 68 ರನ್ ಗಳಿಸಿ ಔಟಾದ್ರೆ, ಕಳೆದ ಪಂದ್ಯದ ಹೀರೋ ದುಬೆ ಇಂದೋರ್​​ನಲ್ಲಿ ವಂಡರ್​​​​​​​ ಸೃಷ್ಟಿಸಿದ್ರು. ಅಜೇಯ 63 ರನ್ ಗಳಿಸಿ ಭಾರತಕ್ಕೆ ಗೆಲುವು ಖಾತರಿಪಡಿಸಿದ್ರು.

ಫೈನಲಿ ಭಾರತ ತಂಡ ಇನ್ನೂ 26 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್​ಗಳಿಂದ ಜಯಭೇರಿ ಬಾರಿಸ್ತು. ಈ ಗೆಲುವಿನೊಂದಿಗೆ ರೋಹಿತ್ ಪಡೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆದ್ದು ಸಂಭ್ರಮಿಸ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಯಂಗ್​ ಪ್ಲೇಯರ್ಸ್ ಸ್ಫೋಟಕ ಬ್ಯಾಟಿಂಗ್.. ಯಶಸ್ವಿ ಜೈಸ್ವಾಲ್​​​- ಶಿವಂ ದುಬೆ ವೀರಾವೇಶಕ್ಕೆ ಅಫ್ಘಾನ್ ಬಲಿ

https://newsfirstlive.com/wp-content/uploads/2024/01/YASHASWI_JAISWAL_SHIVAM-1.jpg

Load More