/newsfirstlive-kannada/media/post_attachments/wp-content/uploads/2025/02/KOHLI-1.jpg)
ಚಾಂಪಿಯನ್ ಟ್ರೋಫಿಯ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿದೆ. ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಅತ್ಯದ್ಭುತವಾದ ಶತಕದ ನೆರವಿನಿಂದ ಭಾರತ ಗೆಲುವು ಪಡೆಯಿತು.
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ 49.4 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 241 ರನ್ಗಳ ಗುರಿ ನೀಡಿತ್ತು. ಈ ಸಾಧಾರಣ ಟಾರ್ಗೆಟ್ ಬೆನ್ನು ಹತ್ತಿದ ಟೀಮ್ ಇಂಡಿಯಾ 42.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 244 ರನ್ ಗಳಿಸುವ ಮೂಲಕ 6 ವಿಕೆಟ್ಗಳ ಮೂಲಕ ಜಯಭೇರಿ ಬಾರಿಸಿದೆ.
ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದ 51ನೇ ಏಕದಿನದ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. 111 ಬಾಲ್ಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 7 ಬೌಂಡರಿ ಸಮೇತ 100 ರನ್ ಚಚ್ಚಿದರು. ಇದರ ಜೊತೆಗೆ 287 ಏಕದಿನ ಇನ್ನಿಂಗ್ಸ್ನಲ್ಲಿ 14 ಸಾವಿರಕ್ಕೂ ಅಧಿಕ ರನ್ ವಿರಾಟ್ ಪೂರೈಸಿದ್ದಾರೆ.
ಭಾರತದ ಪರ ಬ್ಯಾಟಿಂಗ್ ಮಾಡಿದ ಓಪನರ್ ರೋಹಿತ್ ಶರ್ಮಾ 20, ಶುಭ್ಮನ್ ಗಿಲ್ 46, ಶ್ರೇಯಸ್ ಅಯ್ಯರ್ 56, ಹಾರ್ದಿಕ್ ಪಾಂಡ್ಯ 8 ರನ್ ಗಳಿಸಿದರು. ಶುಭ್ಮನ್ ಗಿಲ್ ಹಾಫ್ ಸೆಂಚುರಿ ಮಿಸ್ ಮಾಡಿದರೆ, ಶ್ರೇಯಸ್ ಅಯ್ಯರ್ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾದರು. ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರ ಜೋಡಿ ಆಟವು ಹೆಚ್ಚು ರನ್ ತಂದುಕೊಟ್ಟಿತು ಎನ್ನಬಹುದು.
ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ ಬಾಂಗ್ಲಾ ವಿರುದ್ಧ 5 ವಿಕೆಟ್ ಪಡೆದಿದ್ರೆ, ಪಾಕ್ ವಿರುದ್ಧ ಯಾವುದೇ ವಿಕೆಟ್ ಪಡೆಯಲಿಲ್ಲ. ಕುಲ್ದೀಪ್ ಯಾದವ್ 3 ವಿಕೆಟ್ ಹಾಗೂ ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಪಡೆದು ತಂಡಕ್ಕೆ ಆಸರೆ ಆದರು. ರಾಣಾ, ಅಕ್ಷರ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನ ಆಟಗಾರರ ಬ್ಯಾಟಿಂಗ್ ಮಗ್ಗಲು ಮುರಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ