2 ಇನ್ನಿಂಗ್ಸ್ನಲ್ಲಿ ವಿಕೆಟ್ ಪಡೆದ ಜಡೇಜಾ, ಬೂಮ್ರಾ, ಅಶ್ವಿನ್
ಕಾನ್ಪುರದಲ್ಲಿ ಅಮೋಘ ಗೆಲುವು ಪಡೆದ ರೋಹಿತ್ ಶರ್ಮಾ ಪಡೆ
ಅಲ್ಪ ಮೊತ್ತಕ್ಕೆ ಎರಡು ಬಾರಿ ಆಲೌಟ್ ಆಗಿರುವ ಬಾಂಗ್ಲಾದೇಶ
ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳಿಂದ ಅಮೋಘ ಗೆಲುವು ಸಾಧಿಸಿದೆ. 95 ರನ್ಗಳ ಸುಲಭ ಗುರಿ ಬೆನ್ನತ್ತಿದ ನಾಯಕ ರೋಹಿತ್ ಶರ್ಮಾ ಬಳಗ ಗೆಲುವು ಸಾಧಿಸಿತು. ಈ ಮೂಲಕ ಭಾರತ 2-0ದಿಂದ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿತು.
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶ ಕೇವಲ 146 ರನ್ಗಳಿಗೆ ಆಲೌಟ್ ಆಗಿತ್ತು. ಇದರಿಂದ ಭಾರತಕ್ಕೆ 95 ರನ್ಗಳ ಗುರಿ ನೀಡಿತ್ತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಟೀಮ್ ಇಂಡಿಯಾ ಟೆಸ್ಟ್ನ ಕೊನೆ ದಿನದಲ್ಲಿ ಗೆದ್ದು ಸಂಭ್ರಮಿಸಿತು. ರೋಹಿತ್ ಶರ್ಮಾ ಕೇವಲ 8 ರನ್ಗೆ ಔಟ್ ಆದರು. ಆದರೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅಮೋಘವಾದ ಹಾಫ್ ಸೆಂಚುರಿ (51) ಸಿಡಿಸಿ ಔಟ್ ಆದರು. ಬಳಿಕ ಬಂದ ವಿರಾಟ್ ಕೊಹ್ಲಿ 29 ರನ್ ಹಾಗೂ ಪಂತ್ 4 ರನ್ ಗಳಿಸುವ ಮೂಲಕ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿತು.
ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಭಾರತ-ಬಾಂಗ್ಲಾ ಟೆಸ್ಟ್.. ಕೊಹ್ಲಿ, KL ರಾಹುಲ್ ಬ್ಯಾಟಿಂಗ್ ಆರ್ಭಟ ಹೇಗಿತ್ತು?
2ನೇ ಟೆಸ್ಟ್ ಆರಭವಾಗಿದ್ದ ವೇಳೆ 2 ದಿನ ಮಳೆಯಿಂದ ಪಂದ್ಯವನ್ನು ಸ್ಟಾಪ್ ಮಾಡಲಾಗಿತ್ತು. ಆದರೆ 4ನೇ ದಿನದಲ್ಲಿ ಟಿ20 ಶೈಲಿಯಲ್ಲಿ ಅಭಿಮಾನಿಗಳಿಗೆ ಭಾರತದ ಬ್ಯಾಟ್ಸ್ಮನ್ಗಳು ಮನರಂಜನೆ ನೀಡಿದರು. ಬಾಂಗ್ಲಾ ಮೊದಲ ಇನ್ನಿಂಗ್ಸ್ನಲ್ಲಿ 233 ರನ್ಗೆ ಆಲೌಟ್ ಆಗಿತ್ತು. ಇನ್ನು ಭಾರತದ ಬ್ಯಾಟ್ಸ್ಮನ್ಗಳು ಮೊದಲ ಇನ್ನಿಂಗ್ಸ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ 285 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದ್ದರು. 2ನೇ ಇನ್ನಿಂಗ್ಸ್ನಲ್ಲಿ ಬಾಂಗ್ಲಾ 146 ರನ್ಗಳಿಗೆ ಆಲೌಟ್ ಆಗಿತ್ತು. ಇದರಿಂದ ಭಾರತಕ್ಕೆ 95 ರನ್ಗಳ ಟಾರ್ಗೆಟ್ ಫಿಕ್ಸ್ ಆಗಿತ್ತು. ಈ ಗುರಿ ಬೆನ್ನತ್ತಿದ ಭಾರತ ಗೆಲುವು ಸಾಧಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ