ಯುವ ವೇಗಿ ಹರ್ಷಿತ್ ರಾಣಾಗೆ ಅವಕಾಶ ಮಾಡಿಕೊಟ್ರಾ?
ಸರಣಿ ಕ್ಲೀನ್ ಸ್ವೀಪ್ ಮಾಡಲು ಕಣ್ಣಿಟ್ಟ ಸೂರ್ಯಕುಮಾರ್
ಈ ಪಂದ್ಯದಲ್ಲಿ ಫ್ಯಾನ್ಸ್ ಭಾರೀ ರನ್ಗಳನ್ನ ನಿರೀಕ್ಷಿಸಬಹುದು
ಭಾರತ ಹಾಗೂ ಬಾಂಗ್ಲಾ ನಡುವಿನ ಕೊನೆಯ ಟಿ20 ಪಂದ್ಯ ನಡೆಯುತ್ತಿದ್ದು ಕ್ಯಾಪ್ಟನ್ ಸೂರ್ಯ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧದ 3ನೇ ಪಂದ್ಯದಲ್ಲಿ ಭಾರತ ಟಾಸ್ ಗೆದ್ದುಕೊಂಡಿದೆ. ಸೂರ್ಯಕುಮಾರ್ ಟಾಸ್ ವಿನ್ ಆಗಿದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಎದುರಾಳಿ ಬಾಂಗ್ಲಾವನ್ನ ಫೀಲ್ಡಿಂಗ್ಗೆ ಆಹ್ವಾನಿಸಿದ್ದಾರೆ. ಗ್ವಾಲಿಯರ್, ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿ ಸರಣಿ ವಶಕ್ಕೆ ಪಡೆದಿದೆ. ಇನ್ನೇನಿದ್ದರು ಕ್ಲೀನ್ ಸ್ವೀಪ್ ಮೇಲೆ ಸೂರ್ಯಕುಮಾರ್ ಪಡೆ ಕಣ್ಣಿಟ್ಟಿದೆ.
ಅಭಿಷೇಕ್ ಶರ್ಮಾ, ಸಂಜು ಇಬ್ಬರು ಓಪನಿಂಗ್ ಬರಲಿದ್ದು ನಂತರ ನಾಯಕ ಸೂರ್ಯಕುಮಾರ್ ಬ್ಯಾಟಿಂಗ್ಗೆ ಆಗಮಿಸುವರು. ತವರಿನಲ್ಲಿ ನಿತೀಶ್ ಕುಮಾರ್ ಆರ್ಭಟಿಸುವ ನಿರೀಕ್ಷೆ ಇದೆ. ಇನ್ನು ರಿಂಕು ಸಿಂಗ್ ಎಂದಿನಂತೆ ಮನಮೋಹಕ ಆಟ ಮುಂದುವರೆಸುವ ಇರಾದೆಯಲ್ಲಿದ್ದಾರೆ. ಬೌಲಿಂಗ್ ಪಡೆಯಲ್ಲಿ ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮಯಾಂಕ್ ಯಾದವ್ ಸ್ಥಾನ ಪಡೆದುಕೊಂಡಿದ್ದಾರೆ. ಆಲ್ರೌಂಡರ್ಗಳಾಗಿ ಪಾಂಡ್ಯ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್ ಅಖಾಡದಲ್ಲಿ ಇದ್ದಾರೆ.
ಇದನ್ನೂ ಓದಿ: IND vs BAN T20; ಈ ಪಿಚ್ನಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡಿದ್ರೆ ಸೂರ್ಯಗೆ ಅದೃಷ್ಟ, ಯಾಕೆ?
ಇನ್ನು ಇವತ್ತಿನ ಪಂದ್ಯದಲ್ಲಿ ಹರ್ಷಿತಾ ರಾಣಾ ಅವರು ಡೆಬ್ಯು ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರು ವೈರಲ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಹೀಗಾಗಿ ಅವರು ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ತಿಳಿದು ಬಂದಿದೆ.
ಟೀಮ್ ಇಂಡಿಯಾದ ಪ್ಲೇಯಿಂಗ್-11
ಸಂಜು ಸ್ಯಾಮ್ಸನ್ (ವಿಕೇಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್(ಕ್ಯಾಪ್ಟನ್), ನಿತೀಶ್ ಕುಮಾರ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮಯಾಂಕ್ ಯಾದವ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ