newsfirstkannada.com

Video: ಲಂಡನ್​ ರಸ್ತೆಯಲ್ಲಿ ನಾಟು ಘಾಟು.. ಸೀರೆ ಉಟ್ಟು ಡ್ಯಾನ್ಸ್​ ಮಾಡಿದ 700 ಮಹಿಳೆಯರು

Share :

Published August 8, 2023 at 3:01pm

Update August 8, 2023 at 3:23pm

  ನಾಟು ನಾಟು ಹಾಡಿಗೆ ಮಹಿಳೆಯರ ಸಖತ್​ ಸ್ಟೆಪ್ಸ್​

  ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಿನ್ನಲೆ ಸಂಭ್ರಮ

  700 ಭಾರತೀಯ ಮಹಿಳೆಯರ ಸಖತ್​ ಡ್ಯಾನ್ಸ್​

‘ಆರ್​ಆರ್​ಆರ್’​ ಸಿನಿಮಾದ ನಾಟು ನಾಟು ಹಾಡು ಹುಟ್ಟು ಹಾಕಿದ್ದ ಕ್ರೇಜ್​ ಅನ್ನು ಜನ ಇನ್ನೂ ಮರೆತಿಲ್ಲ. ತೆಲುಗಿನ ಆರ್​ಆರ್​ಆರ್​ ಚಿತ್ರದ ಈ ಹಾಡಿಗೆ ಆಸ್ಕರ್ ಗರಿ ಕೂಡ ಮೂಡಿತ್ತು. ಇದೀಗ ಮತ್ತೊಂದು ದಾಖಲೆಯ ಡ್ಯಾನ್ಸ್ ಶೋ ಲಂಡನ್​ನಲ್ಲಿ ನಡೆದಿದೆ.

ಇಂಗ್ಲೆಂಡ್​ನ ರಾಜಧಾನಿ ಲಂಡನ್​ನ ಬೀದಿ ಬೀದಿಯಲ್ಲೂ ನಾಟು ನಾಟು ಪ್ರತಿಧ್ವನಿಸಿದೆ. ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ 700 ಭಾರತೀಯ ಮಹಿಳೆಯರು ಲಂಡನ್​ನ ರಸ್ತೆಯಲ್ಲಿ ನಾಟು ನಾಟು ಅಂತ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಲಂಡನ್‌ನಲ್ಲಿ ಸೀರೆಯುಟ್ಟು ಡ್ಯಾನ್ಸ್ ಮಾಡಿದ ನಾರಿಯರು

ಟೆನ್ ಡೌನಿಂಗ್ ಸ್ಟ್ರೀಟ್​ನಲ್ಲಿ ಸೀರೆ ಉಟ್ಟು ಭಾರತೀಯ ಮಹಿಳೆಯರು ಕುಣಿದಿದ್ದು, ಈ ಪ್ರದರ್ಶನವನ್ನ ಸೀರೆ ವಾಕಥಾನ್ ಭಾಗವಾಗಿ ನೀಡಲಾಯ್ತು. ಬ್ರಿಟೀಷ್ ವುಮೆನ್ ಇನ್ ಸಾರೀಸ್ ಗ್ರೂಪ್​ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟ್ರಾಫಲ್​ಗರ್ ಸ್ಕ್ವೇರ್ ಮತ್ತು ಪಾರ್ಲಿಮೆಂಟ್ ಸ್ಕ್ವೇರ್​ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ನಾಟು ನಾಟಿಗೆ ಹೆಜ್ಜೆ ಹಾಕಿದ್ದು, ಇದರ ಜೊತೆ ಬಾಲಿವುಡ್ ಟ್ರ್ಯಾಕ್ಸ್​ ಹಾಗೇ ಗರ್ಬಾ ಸೇರಿದಂತೆ ವಿವಿಧ ನೃತ್ಯಗಳನ್ನ ಮಾಡಿದ್ದಾರೆ. ದಾರಿ ಹೋಕರೂ ಕೂಡ ಇದಕ್ಕೆ ಮನಸೋತು ತಾವೂ ಒಂದ್ಹೆಜ್ಜೆ ಹಾಕಿ ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಲಂಡನ್​ ರಸ್ತೆಯಲ್ಲಿ ನಾಟು ಘಾಟು.. ಸೀರೆ ಉಟ್ಟು ಡ್ಯಾನ್ಸ್​ ಮಾಡಿದ 700 ಮಹಿಳೆಯರು

https://newsfirstlive.com/wp-content/uploads/2023/08/London-Indian-Dance.jpg

Load More