/newsfirstlive-kannada/media/post_attachments/wp-content/uploads/2024/11/6-AMERICAN-INDIANS.jpg)
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಚುನಾವಣೆಯಿಂದ ಚುನಾವಣೆಗೆ ಭಾರತೀಯ ಅಮೆರಿಕನ್ನರು ಹೌಸ್ ಆಫ್​ ರಿಪ್ರಸೆಂಟಿಟೀವ್​ ಆಗುವುದು ಹೆಚ್ಚಾಗುತ್ತಲೇ ಇದೆ. ಈ ಬಾರಿ ನಡೆದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಟ್ಟು 6 ಜನ ಭಾರತೀಯ ಮೂಲದವರು ಗೆಲುವು ದಾಖಲಿಸಿ, ಹೊಸ ದಾಖಲೆ ಬರೆದಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಒಟ್ಟು ಐವರು ಭಾರತೀಯ ಮೂಲದ ಅಮೆರಿಕನ್ನರು ಗೆದ್ದು ವೌಟ್​ಹೌಸ್ ಪ್ರವೇಶಿಸಿದ್ದರು.ಈ ಬಾರಿ ಅದರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಇದು ಹೊಸ ದಾಖಲೆಯನ್ನು ಬರೆದಿದೆ.
ವರ್ಜೀನಿಯಾದಲ್ಲಿ ಇದೇ ಮೊದಲ ಬಾರಿ ಭಾರತೀಯ ಮೂಲದ ಸುಹಾಸ್ ಸುಬ್ರಮಣ್ಯಮ್ ಅವರ ಗೆಲುವು ದಾಖಲಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಪೂರ್ವ ಅಮೆರಿಕಾದಲ್ಲಿ ಇದೇ ಮೊದಲ ಬಾರಿ ಭಾರತೀಯ ಸಮುದಾಯದ ನಾಯಕನೊಬ್ಬ ಗೆಲುವು ದಾಖಲಿಸಿ ಇತಿಹಾಸ ಬರೆದಿದ್ದಾರೆ. ರಿಪಬ್ಲಿಕನ್ ಪಾರ್ಟಿಯ ಮೈಕ್​ ಕ್ಲ್ಯಾನ್ಸಿ ವಿರುದ್ಧ ಸುಬ್ರಮಣ್ಯಮ್ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಇದನ್ನೂ ಓದಿ:ಅಮೆರಿಕಾ ಅಧ್ಯಕ್ಷೀಯ ಚುನಾವಣೆ; ಡೊನಾಲ್ಡ್​ ಟ್ರಂಪ್​ಗೆ ಭರ್ಜರಿ ಗೆಲುವು
ಈ ಗೆಲುವನ್ನು ವರ್ಜಿನಿಯಾದ ಜನರಿಗೆ ಅರ್ಪಿಸಿರುವ ಸುಬ್ರಮಣ್ಯಮ್ ಇಲ್ಲಿ ಜನರ ನನ್ನ ಮೇಲೆ ನಂಬಿಕೆಯಿಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಈ ಒಂದು ಜಿಲ್ಲೆ ನನಗೆ ಮನೆಯಿದ್ದಂತೆ.ನಾನು ಇಲ್ಲಿಯೇ ನನ್ನ ಪತ್ನಿ ಮಿರಾಂಡಳನ್ನು ಕೈ ಹಿಡಿದಿದ್ದೇನೆ. ನನ್ನ ಹೆಣ್ಣು ಮಕ್ಕಳು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದಿದ್ದಾರೆ. ನಮ್ಮ ಸಮುದಾಯದವರೆಲ್ಲರೂ ನಮ್ಮ ಕುಟುಂಬದ ಹಾಗೆ ಇದ್ದಾರೆ. ವಾಶಿಂಗ್ಟನ್​ನಲ್ಲಿ ಈ ಜಿಲ್ಲೆಯನ್ನು ನಾನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ಯುಎಸ್​​ನ ವೈಟ್​ಹೌಸ್​ನಲ್ಲಿ ಭಾರತೀಯ ಸದಸ್ಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಆರಿಝೋನಾದಲ್ಲಿ ಅಮಿಶ್​ ಶಾ ರಿಪಬ್ಲಿಕನ್ ಪಾರ್ಟಿ ವಿರುದ್ಧ ಅಖಾಡಕ್ಕೆ ಇಳಿದಿದ್ದು ಅವರು ಗೆಲುವು ಬಹುತೇಕ ನಿಶ್ಚಯವಾಗಿದೆ.ಇವರು ಗೆದ್ದು ಬಂದರೆ ಒಟ್ಟು 6 ಜನ ಭಾರತೀಯರು ಈ ಬಾರಿಯ ಯುಎಸ್​ ಚುನಾವಣೆಯಲ್ಲಿ ಗೆದ್ದು ಹೌಸ್ ಆಫ್​ ರಿಪ್ರಸೆಂಟಿಟೀವ್​​ ಆಗಲಿದ್ದಾರೆ. ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಭಾರತೀಯ ಅಮೆರಿಕನ್ನರು ಈ ಬಾರಿಯೂ ಕೂಡ ಮರಳಿ ಗೆಲುವನ್ನು ದಾಖಲಿಸಿದ್ದಾರೆ. ಅಮಿ ಬೇರಾ, ರಾಜಕೃಷ್ಣಮೂರ್ತಿ, ರಾವ್ ಖನ್ನಾ, ಪರಿಮಳ ಜೈಪಾಲ್ ಹಾಗೂ ಶ್ರೀ ಠಾಣೆದಾರ್​ ಇವರು ಈ ಬಾರಿ ರಿ ಎಲೆಕ್ಟ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us