ಭಾರತೀಯ ಸೇನೆ ಸೇರಲು ಸುವರ್ಣಾವಕಾಶ.. ಅಗ್ನಿವೀರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

author-image
Bheemappa
Updated On
CISF ನಲ್ಲಿ 1,161 ಉದ್ಯೋಗಗಳು.. SSLC ಪಾಸ್ ಆಗಿದ್ರೆ ಈ  ಖಾಲಿ ಹುದ್ದೆಗಳಿಗೆ ಪ್ರಯತ್ನಿಸಿ
Advertisment
  • ಅಗ್ನಿವೀರ್ ಉದ್ಯೋಗಗಳಿಗೆ ಸಂಬಳ ಯಾವ ರೀತಿ ನೀಡಲಾಗುತ್ತೆ?
  • ಭಾರತೀಯ ಸೇನೆ ಸೇರಬೇಕೆಂಬ ಆಸೆಯಿದೆಯೇ, ಅಪ್ಲೇ ಮಾಡಿ
  • ಎಂಟನೇ ಕ್ಲಾಸ್ ಪಾಸ್​ ಆಗಿದ್ದವರಿಗೂ ಇಲ್ಲಿ ಅವಕಾಶ ನೀಡಲಾಗಿದೆ

ಅಗ್ನಿವೀರ್ ಉದ್ಯೋಗಗಳನ್ನು ಭಾರತೀಯ ಸೇನೆ ಆಹ್ವಾನ ಮಾಡಿದೆ. ನವ ಯುವಕ ಯುವತಿಯರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಹೀಗಾಗಿ ಈ ಕೆಲಸಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳು ಈ ಕೂಡಲೇ ಅಪ್ಲೇ ಮಾಡಬಹುದು. ಇಲ್ಲಿ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಮನನ ಮಾಡಿಕೊಂಡು ನೀವು ಅರ್ಹರು ಎನಿಸಿದ್ದರೇ ಅರ್ಜಿ ಸಲ್ಲಿಕೆ ಮಾಡಬಹುದು.

ಭಾರತೀಯ ಸೇನೆಯು ಅಗ್ನಿವೀರ್ ಉದ್ಯೋಗಗಳ ಬಗ್ಗೆ ಅಧಿಕೃತ ನೋಟಿಫಿಕೆಶನ್ ಅನ್ನು ಬಿಡುಗಡೆ ಮಾಡಿದೆ. ನೇಮಕಾತಿ ಪ್ರಕ್ರಿಯೆ, ಅರ್ಹತೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಎಲ್ಲಾ ವಿವರವಾದ ಮಾಹಿತಿ ಇಲ್ಲಿ ನೀಡಲಾಗಿದೆ.

ಭಾರತೀಯ ಸೇನೆಯಲ್ಲಿ ಅಗ್ನಿವೀರ್ ಉದ್ಯೋಗಗಳಾದ ಜನರಲ್ ಡ್ಯೂಟಿ, ಅಗ್ನಿವೀರ್ ಕ್ಲರ್ಕ್/ಸ್ಟೋರ್ ಕೀಪರ್, ಟೆಕ್ನಿಕಲ್, ಟ್ರೇಡ್ಸ್‌ಮನ್, ಸೈನಿಕ್ ಟೆಕ್ನಿಕಲ್, ನರ್ಸಿಂಗ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ನೇಮಕಾತಿಯ ಪರೀಕ್ಷೆ ಇದೇ ಜೂನ್​ನಲ್ಲಿ ನಡೆಸಬಹುದು.

ಉದ್ಯೋಗದ ಹೆಸರು- ಇಂಡಿಯನ್ ಆರ್ಮಿ ಅಗ್ನಿವೀರ್

ಒಟ್ಟು ಉದ್ಯೋಗಗಳು- ಸೇನೆ ನಿಖರವಾಗಿ ಹೇಳಿಲ್ಲ

ವಿದ್ಯಾರ್ಹತೆ ಎಷ್ಟು ಕೇಳಲಾಗಿದೆ?

8Th, SSLC, PUC And ITI ಪಾಸ್ ಆಗಿರಬೇಕು

ಇದನ್ನೂ ಓದಿ: ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಲವು ಉದ್ಯೋಗಗಳು.. ಸಂದರ್ಶನ ಮಾತ್ರ, ಕೊನೆ ದಿನ?

publive-image

ಅಗ್ನಿವೀರ್​ ಉದ್ಯೋಗಕ್ಕೆ ಆಯ್ಕೆ ಆದ ಅಭ್ಯರ್ಥಿಗಳಿಗೆ ಸಂಬಳ

  • ಮೊದಲ ವರ್ಷ- 30,000 ರೂಪಾಯಿಗಳು
  • 2ನೇ ವರ್ಷ- 33,000 ರೂಪಾಯಿಗಳು
  • 3ನೇ ವರ್ಷ- 36,000 ರೂಪಾಯಿಗಳು
  • 4ನೇ ವರ್ಷ- 40,000 ರೂಪಾಯಿಗಳು

ಅರ್ಜಿ ಶುಲ್ಕ ಎಷ್ಟು ಇದೆ?

ಎಲ್ಲ ವರ್ಗದವರಿಗೆ- 250 ರೂಪಾಯಿಗಳು ಜೊತೆಗೆ ಜಿಎಸ್​​ಟಿ

ವಯಸ್ಸಿನ ಮಿತಿ

17 ವರ್ಷದಿಂದ 21 ವರ್ಷದ ಒಳಗಿನವರಿಗೆ ಅವಕಾಶ

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

  • ಲಿಖಿತ ಪರೀಕ್ಷೆ
  • ದೈಹಿಕ ಸಾಮರ್ಥ್ಯ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ
  • ಸಹಿಷ್ಣುತೆ ಪರೀಕ್ಷೆ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 12 ಮಾರ್ಚ್ 2025
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 10 ಏಪ್ರಿಲ್ 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment