ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ.. ಭಾರತೀಯ ಸೇನೆಯಿಂದ ಮಿಲಿಟರಿ ಡ್ರಿಲ್; ಮಹತ್ವದ ಅನೌನ್ಸ್‌ಮೆಂಟ್‌!

author-image
admin
Updated On
ಮೇ 7ಕ್ಕೆ ಮಾಕ್‌ ಡ್ರಿಲ್.. 54 ವರ್ಷದ ಬಳಿಕ ಕೇಂದ್ರ ಗೃಹ ಇಲಾಖೆ ಸೂಚನೆ; ಏನಿದರ ವಿಶೇಷ?
Advertisment
  • ಭಾರತ, ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗಿದೆ
  • ಇಂದು ರಾತ್ರಿ ಭಾರತೀಯ ಸೇನೆಯಿಂದ ಗಡಿ ಭಾಗದಲ್ಲಿ ಮಿಲಿಟರಿ ಡ್ರಿಲ್
  • ಲೌಡ್ ಸ್ಪೀಕರ್ ಮೂಲಕ ಗ್ರಾಮಗಳಿಗೆ ತೆರಳುವಂತೆ ಘೋಷಣೆ

ನವದೆಹಲಿ: ಪಾಕ್ ಉಗ್ರರ ಪಹಲ್ಗಾಮ್‌ ದಾಳಿಯ ಬಳಿಕ ಭಾರತ, ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಮಹತ್ವದ ಬೆಳವಣಿಗೆಯಲ್ಲಿ ಇಂದು ರಾತ್ರಿ ಭಾರತೀಯ ಸೇನೆಯಿಂದ ಗಡಿ ಭಾಗದಲ್ಲಿ ಮಿಲಿಟರಿ ಡ್ರಿಲ್ ಕೈಗೊಳ್ಳಲಾಗಿದೆ.

publive-image

ಪಂಜಾಬ್‌ನ ಫಿರೋಜಪೂರ ಗಡಿ ಭಾಗದಲ್ಲಿ ಇಂದು ರಾತ್ರಿ 9ರಿಂದ 9.30ರ ಸಮಯದಲ್ಲಿ ಸೇನೆಯಿಂದ ಡ್ರಿಲ್ ನಡೆಸಲಾಗಿದೆ.

ಇದನ್ನೂ ಓದಿ: ಪಾಕ್ ವಿರುದ್ಧ ಪ್ರತೀಕಾರಕ್ಕೆ ಮುಹೂರ್ತ ಫಿಕ್ಸ್? ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸುಳಿವು 

ಗಡಿಭಾಗದಲ್ಲಿರೋ ಜನರು ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ಲೈಟ್ ಉರಿಸದಂತೆ ಮನವಿ ಮಾಡಲಾಗಿದೆ. ಲೌಡ್ ಸ್ಪೀಕರ್ ಮೂಲಕ ಗ್ರಾಮಗಳಿಗೆ ತೆರಳುವಂತೆ ಘೋಷಣೆ ಮಾಡಲಾಗಿದೆ.

publive-image

ಗಡಿಭಾಗದ ಜನರಿಗೆ ಮನೆಗಳ ಲೈಟ್ ಉರಿಸದಂತೆ ಸೇನೆ ಮನವಿ ಮಾಡಿರೋದು ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ತಯಾರಿ ನಡೆಸಿರೋ ಮುನ್ಸೂಚನೆ ಸಿಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment