ಪಾಕಿಸ್ತಾನದ ಡ್ರೋಣ್, ಮಿಸೈಲ್​, ಏರ್ ಡಿಫೆನ್ಸ್ ಸಿಸ್ಟಮ್‌ ಉಡೀಸ್.. ಭಾರತ ಸೇನೆ ಅಧಿಕೃತ ಮಾಹಿತಿ!

author-image
admin
Updated On
ಲಂಡನ್​​ನಲ್ಲಿ ಕೂತು ಹೊಂಚು.. ಭಾರತದ ಮೇಲೆ ದಾಳಿಗೆ ಪ್ಲಾನ್ ರೂಪಿಸಿದ ಮಾಸ್ಟರ್​ ಮೈಂಡ್​ ರಿವೀಲ್..!
Advertisment
  • ಲಾಹೋರ್​ನ ಏರ್​ ಡಿಫೆನ್ಸ್​ ಸಿಸ್ಟಮ್ ಮೇಲೆ ಭಾರತೀಯ ಸೇನೆ ದಾಳಿ
  • 2021ರಲ್ಲಿ ಚೀನಾದಿಂದ ಪಾಕಿಸ್ತಾನ ಖರೀದಿಸಿದ್ದ PL-15 E ಮಿಸೈಲ್​!
  • ದಾಳಿ ನಡೆಸಿರುವ ಬಗ್ಗೆ ಭಾರತೀಯ ಸೇನೆಯಿಂದ ಅಧಿಕೃತ ಮಾಹಿತಿ

ನವದೆಹಲಿ: ಆಪರೇಷನ್ ಸಿಂಧೂರನಲ್ಲಿ ಭಾರತೀಯ ಸೇನೆ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಪಾಕಿಸ್ತಾನದ HQ-9 ಡಿಫೆನ್ಸ್ ಸಿಸ್ಟಮ್ ಅನ್ನು ಭಾರತದ ಕಮಕಜೈ ಡ್ರೋಣ್ ನಾಶಪಡಿಸಿದೆ. ಅಂದ್ರೆ ಭಾರತದ ಡ್ರೋಣ್ ದಾಳಿಯಲ್ಲಿ ಪಾಕಿಸ್ತಾನದ ಲಾಹೋರ್‌ ನಗರದಲ್ಲಿದ್ದ ಏರ್ ಡಿಫೆನ್ಸ್ ಸಿಸ್ಟಮ್ ಸಂಪೂರ್ಣ ಉಡೀಸ್ ಆಗಿದೆ.

ಲಾಹೋರ್​ನ ಏರ್​ ಡಿಫೆನ್ಸ್​ ಸಿಸ್ಟಮ್ ಮೇಲೆ ದಾಳಿ ನಡೆಸಿರುವ ಬಗ್ಗೆ ಭಾರತೀಯ ಸೇನೆಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಏರ್​ ಡಿಫೆನ್ಸ್​​ ರಾಡಾರ್ ಮೇಲಿನ ದಾಳಿಯ​ ಜೊತೆಗೆ ಪಾಕಿಸ್ತಾನದ ಡ್ರೋಣ್, ಮಿಸೈಲ್​ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಭಾರತ ಅಧಿಕೃತವಾಗಿ ಖಚಿತಪಡಿಸಿದೆ.

ವಾಸ್ತವವಾಗಿ ಪಾಕಿಸ್ತಾನಕ್ಕೆ ಸರಿಯಾದ ಏರ್ ಡಿಫೆನ್ಸ್ ಸಿಸ್ಟಮ್ ಇಲ್ಲ. ಲಾಹೋರ್‌ನಲ್ಲಿ ಪಾಕಿಸ್ತಾನ ಸೇನೆಯ HQ-9 ಏರ್ ಡಿಫೆನ್ಸ್ ಸಿಸ್ಟಮ್‌ಗೆ ಭಾರತದ ದಾಳಿಯಲ್ಲಿ ಹಾನಿಯಾಗಿದೆ. ಈ ದಾಳಿಯಿಂದಾಗಿ ಲಾಹೋರ್ ನಗರಕ್ಕೆ ಈಗ ಯಾವುದೇ ಏರ್ ಡಿಫೆನ್ಸ್ ಸಿಸ್ಟಮ್ ಇಲ್ಲದಾಗಿದೆ.

ಇದನ್ನೂ ಓದಿ: BREAKING: ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ; ರಾಜನಾಥ್ ಸಿಂಗ್ ಮಹತ್ವದ ಸುಳಿವು 

ಪಾಕಿಸ್ತಾನದ ಬಳಿ ಇರೋದು ಚೀನಾದ ಏರ್ ಡಿಫೆನ್ಸ್ ಸಿಸ್ಟಮ್. ಮೇಡ್ ಇನ್ ಚೀನಾ ಏರ್ ಡಿಫೆನ್ಸ್ ಸಿಸ್ಟಮ್ ಆದ HQ-9 ಮಿಸೈಲ್ ಡಿಫೆನ್ಸ್ ಸಿಸ್ಟಮ್ ಭಾರತೀಯ ಡ್ರೋಣ್ ದಾಳಿಯಲ್ಲಿ ನಾಶವಾಗಿದೆ.

publive-image

ಪಾಕ್‌ನಲ್ಲಿದ್ದ ಚೀನಾ PL-15 E ಪೀಸ್‌, ಪೀಸ್‌!
2021ರಲ್ಲಿ ಚೀನಾದಿಂದ ಪಾಕಿಸ್ತಾನ ಱಡರ್​​ ಗೈಡೆಡ್​​​​​​ ತಂತ್ರಜ್ಞಾನ ಹೊಂದಿರುವ PL-15 E ಮಿಸೈಲ್​ ಅನ್ನು ಖರೀದಿಸಿತ್ತು. 1.5 ಬಿಲಿಯನ್​​ ಒಪ್ಪಂದ ಮಾಡಿಕೊಂಡಿದ್ದ ಪಾಕಿಸ್ತಾನ ಚೀನಾದಿಂದ ಸುಮಾರು 244 ಮಿಸೈಲ್​ ಪಡೆದಿತ್ತು. publive-image

ಪಾಕಿಸ್ತಾನ ಇದೇ ಮೊದಲ ಬಾರಿಗೆ PL-15 E ಬಳಸಿದೆ. ಸುಮಾರು 300 ಕಿ.ಮೀ ವೇಗದಲ್ಲಿ ಚಲಿಸುವ ಪಾಕ್​ನ JF-17 ಜೆಟ್​ಗೆ PL-15 E ಮಿಸೈಲ್​ ಅಳವಡಿಕೆ ಮಾಡಲಾಗಿತ್ತು. PL-15 E ಅಡ್ವಾನ್ಸ್​​ ಟೆಕ್ನಾಲಜಿ ಮೂಲಕ ದಾಳಿ ಮಾಡಿದ್ದು, ಭಾರತದ S-400 ಇದೇ ಮಿಸೈಲ್​ ಅನ್ನ ಹೊಡೆದುರುಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment