Advertisment

ಎಂಟು ಗುಂಡಿಗೆಯ ಪ್ಯಾಂಟಮ್​ ಇನ್ನಿಲ್ಲ.. ಸೇನಾ ಕಾರ್ಯಾಚರಣೆಯಲ್ಲಿ ಜೀವ ಬಿಟ್ಟ ಧೈರ್ಯಶಾಲಿ ಶ್ವಾನ; ಆಗಿದ್ದೇನು?

author-image
Gopal Kulkarni
Updated On
ಎಂಟು ಗುಂಡಿಗೆಯ ಪ್ಯಾಂಟಮ್​ ಇನ್ನಿಲ್ಲ.. ಸೇನಾ ಕಾರ್ಯಾಚರಣೆಯಲ್ಲಿ ಜೀವ ಬಿಟ್ಟ ಧೈರ್ಯಶಾಲಿ ಶ್ವಾನ; ಆಗಿದ್ದೇನು?
Advertisment
  • ಉಗ್ರರ ಸೆದೆಬಡಿಯುವ ಕಾರ್ಯಾಚರಣೆ ವೇಳೆ ವೀರ ಮರಣವನ್ನಪ್ಪಿದ ಪ್ಯಾಂಟಮ್
  • ಪ್ಯಾಂಟಮ್​, 2022ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರೀತಿಯ ಶ್ವಾನ
  • ಧೈರ್ಯಶಾಲಿ, ಪ್ರಾಮಾಣಿಕ ಶ್ವಾನದ ತ್ಯಾಗ ನೆನೆದ ಕಣ್ಣೀರು ಮಿಡಿದ ನಮ್ಮ ಸೇನಾಪಡೆ

ಪ್ಯಾಂಟಮ್​, ಭಾರತೀಯ ಸೇನೆಯಲ್ಲಿ ಅತ್ಯಂತ ಧೈರ್ಯಶಾಲಿ ಶ್ವಾನವೆಂದೇ ಹೆಸರು ಪಡೆದಿದ್ದ ಬೆಲ್ಜಿಯಂ ಮಾಲಿನೋಯಿಸ್​ ತಳಿಯ ಶ್ವಾನ. ಕಳೆದ ಎರಡು ವರ್ಷಗಳಿಂದ ಸೇನಾಪಡೆಯ ಭಯಾನಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಪ್ಯಾಂಟಮ್​. ಅದೇ ರೀತಿ ಸೋಮವಾರದಂದು ಭಯೋತ್ಪಾದಕರನ್ನು ಹುಡುಕಿ ಹೊರಟಿದ್ದ ಸೇನಾಪಡೆಯೊಂದಿಗೆ ಪ್ಯಾಂಟಮ್​ ಕೂಡ ಸೇರಿಕೊಂಡಿತ್ತು. ಉಗ್ರರು ಹಾಗೂ ಸೇನಾಪಡೆಯ ನಡುವೆ ನಡೆಯುತ್ತಿದ್ದ ಗುಂಡಿನ ದಾಳಿಯಲ್ಲಿ ಪ್ಯಾಂಟಮ್​ಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ಯಾಂಟಮ್ ಅಸುನೀಗಿದೆ.
ಎಂಟೆದೆಯ ಬಂಟನಂತೆ ಸೇನಾಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಪ್ಯಾಂಟಮ್ ಅಗಲಿಕೆ ಎಲ್ಲರ ಕಣ್ಣಂಚನ್ನು ತೇವಗೊಳಿಸದೆ. ಸೋಮವಾರ ಮುಂಜಾನೆ ನಡೆದ ಘಟನೆಯಲ್ಲಿ ಪ್ಯಾಂಟಮ್ ಪ್ರಾಣ ಕಳೆದುಕೊಂಡಿದ್ದಾನೆ ಆಗಸ್ಟ್​ 2022ರಿಂದ ಇಲ್ಲಿಯವರೆಗೂ ಸೇನೆಯಲ್ಲಿ ಸೇವೆ ಸಲ್ಲಿಸಿದ ಪ್ಯಾಂಟಮ್ ಒಬ್ಬ ಶಿಸ್ತಿನ ಸೈನಿಕನಂತೆಯೇ ಕಾರ್ಯನಿರ್ವಹಿಸಿದ್ದಾನೆ.

Advertisment

ಇದನ್ನೂ ಓದಿ: ಕಾಸರಗೋಡಿನಲ್ಲಿ ಭಾರೀ ಪಟಾಕಿ ಅನಾಹುತ; 150 ಮಂದಿಗೆ ಗಾಯ, ಸಾವು-ನೋವಿನ ಆತಂಕ

publive-image

ಪ್ಯಾಂಟಮ್ ಅಗಲಿಕೆಗೆ ವೈಟ್​​ ನೈಟ್ ಕಾರ್ಪ್ಸ್​ ಅಶ್ರುತರ್ಪಣ ಸಲ್ಲಿಸಿದ್ದಾರೆ. ಭಾರತೀಯ ಸೇನೆಯ ಶ್ವಾನ ಪ್ಯಾಂಟಮ್ ಎಂಬ ನಿಜವಾದ ಹೀರೋನ ತ್ಯಾಗಕ್ಕೆ ಒಂದು ಸಲಾಂ. ನಮ್ಮ ಸೇನಾಪಡೆ ಉಗ್ರರನ್ನು ಸೆದೆಬಡಿಯುವ ಕಾರ್ಯಾಚರಣೆಯಲ್ಲಿ ಪ್ಯಾಂಟಮ್ ತನ್ನ ಜೀವವನ್ನು ನೀಡಿದ್ದಾನೆ ಪ್ಯಾಂಟಮ್​ನ ಧೈರ್ಯ, ಪ್ರಾಮಾಣಿಕತೆ ಹಾಗೂ ಶ್ರದ್ಧೆ ಎಂದಿಗೂ ಕೂಡ ಮರೆಯುವಂತದ್ದಲ್ಲ. ಸದ್ಯ ಸೇನಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಎಲ್ಲಾ ಉಗ್ರರನ್ನು ಹೊಡೆದುರುಳಿಸಲಾಗಿದ್ದು. ಶಸ್ತ್ರಾಸ್ತ್ರಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ವೈಟ್ ನೈಟ್ ಕಾರ್ಪ್ಸ್​ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Advertisment


">October 28, 2024


ಇದನ್ನೂ ಓದಿ:ರೀಲ್ ಅಲ್ಲ ಇದು ರಿಯಲ್‌; ಪ್ರತಿ ಮಂಗಳವಾರ ಈ ಊರಲ್ಲಿ 1 ಸಾ*ವು ಖಚಿತ; ಕಾರಣವೇ ವಿಚಿತ್ರ!

ಇತ್ತೀಚೆಗೆ ಮೂವರು ಉಗ್ರರು ಭಾರತೀಯ ಸೇನಾ ಆ್ಯಂಬುಲೆನ್ಸ್ ಮೇಲೆ ಬಟ್ಟಾಲಾ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಲು ಅಂತ ಸೇನೆ ಹಾಗೂ ಜಮ್ಮು ಕಾಶ್ಮೀರದ ಪೊಲೀಸರು ಜಂಟಿಯಾಗಿ ಶೋಧಕಾರ್ಯ ನಡೆಸಿದ್ದರು. ಅಖನೂರ್ ಏರಿಯಾದಲ್ಲಿ ಒಬ್ಬ ಉಗ್ರನನ್ನು ಹೊಡೆದುರಳಿಸುವಲ್ಲಿ ಯಶಸ್ವಿಯಾದ ಸೇನಾಪಡೆ ಹಾಗೂ ಪೊಲೀಸರು ಮಂಗಳವಾರ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಉಳಿದ ಇಬ್ಬರು ಉಗ್ರರನ್ನು ಯಮಪುರಿಗೆ ಅಟ್ಟಿದ್ದಾರೆ. ಇದೇ ಕಾರ್ಯಾಚರಣೆ ವೇಳೆ ಸೇನಾಪಡೆಯೊಂದಿಗೆ ಉಗ್ರರ ಪತ್ತೆಗೆ ಹೋಗಿದ್ದ ಪ್ಯಾಂಟಮ್ ಗುಂಡು ತಗುಲಿ ಅಸುನೀಗಿದ್ದಾನೆ. ಪ್ಯಾಂಟಮ್​ಗೆ ಎಲ್ಲ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment