/newsfirstlive-kannada/media/post_attachments/wp-content/uploads/2025/05/Pahalgam-2-1.jpg)
ಪಾಕಿಗಳ ನಡ ಮುರಿಯುವ ಕಾಲ ಸನ್ನಿಹಿತವಾಗಿದೆ. ಪಹಲ್ಗಾಮ್ ದಾಳಿ ಬೆನ್ನಲ್ಲೇ ಕೆರಳಿ ಕೆಂಡವಾಗಿರುವ ಭಾರತ ಯುದ್ಧಕ್ಕೆ ತಯಾರಿ ನಡೆಸಿದೆ. ಕಳೆದ ರಾತ್ರಿ ಗಡಿಯಲ್ಲಿ ಯುದ್ಧ ತಾಲೀಮು ನಡೆಸುವ ಮೂಲಕ ಯುದ್ಧದ ಸುಳಿವು ಕೊಟ್ಟಿದೆ. ಇದಕ್ಕೆ ನಿದರ್ಶನ ಎಂಬಂತೆ ಶಸ್ತ್ರಾಸ್ತ್ರ ಕಾರ್ಖಾನೆಗಳ ದೀರ್ಘ ರಜೆ ರದ್ದುಗೊಳಿಸಲಾಗಿದೆ.
ಭಾರತೀಯ ಸೇನೆಯಿಂದ ಗಡಿ ಭಾಗದಲ್ಲಿ ಡ್ರಿಲ್
ಪಹಲ್ಗಾಮ್ ದಾಳಿ ಬಳಿಕ ಭಾರತ-ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಯುದ್ಧದ ಕಾರ್ಮೋಡಗಳು ಗಾಢವಾಗಿವೆ. ಕಳೆದ ರಾತ್ರಿ ಭಾರತೀಯ ಸೇನೆಯಿಂದ ಗಡಿ ಭಾಗದಲ್ಲಿ ಮಿಲಿಟರಿ ಡ್ರಿಲ್ ಕೈಗೊಳ್ಳಲಾಗಿದೆ. ಪಂಜಾಬ್‌ನ ಫಿರೋಜಪುರ ಗಡಿ ಭಾಗದಲ್ಲಿ ರಾತ್ರಿ 9 ರಿಂದ 9.30ರ ಸಮಯದಲ್ಲಿ ಭಾರತೀಯ ಸೈನಿಕರು ಡ್ರಿಲ್ ನಡೆಸಿದ್ದಾರೆ.
ಇದನ್ನೂ ಓದಿ: ಪಾಕ್ ವಿರುದ್ಧ ಪ್ರತೀಕಾರಕ್ಕೆ ಮುಹೂರ್ತ ಫಿಕ್ಸ್? ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸುಳಿವು
ಗಡಿಭಾಗದ ಜನರಿಗೆ ಲೈಟ್ ಹಾಕದಂತೆ ಸೇನೆ ಸೂಚನೆ
ಗಡಿಭಾಗದಲ್ಲಿರೋ ಜನರು ಯಾವುದೇ ಕಾರಣಕ್ಕೂ ಲೈಟ್ ಉರಿಸದಂತೆ ಸೈನಿಕರು ಮನವಿ ಮಾಡಿದ್ದಾರೆ. ಲೌಡ್ ಸ್ಪೀಕರ್ ಮೂಲಕ ಗ್ರಾಮಗಳಿಗೆ ತೆರಳುವಂತೆ ಘೋಷಣೆ ಮಾಡಿದ್ದಾರೆ. ಗಡಿಭಾಗದ ಜನರಿಗೆ ಮನೆಗಳ ಲೈಟ್ ಉರಿಸದಂತೆ ಸೇನೆ ಮನವಿ ಮಾಡಿರೋದು ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ತಯಾರಿ ನಡೆಸಿರೋ ಮುನ್ಸೂಚನೆ ಎನ್ನಲಾಗ್ತಿದೆ.
ಶಸ್ತ್ರಾಸ್ತ್ರ ಕಾರ್ಖಾನೆಗಳ ದೀರ್ಘ ರಜೆ ರದ್ದು
ಇನ್ನು ಗಡಿಯಲ್ಲಿ ದಿನೇ ದಿನೇ ಉದ್ವಿಗ್ನತೆ ಹೆಚ್ಚಾಗ್ತಿರೋ ಕಾರಣ ದೇಶದ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ದೀರ್ಘ ರಜೆ ರದ್ದುಗೊಳಿಸಲಾಗಿದೆ. ದೇಶದಲ್ಲಿರುವ 12 ಶಸ್ತ್ರಾಸ್ತ್ರ ಕಾರ್ಖಾನೆಗಳ ಸಮೂಹ ಎಂಐಎಲ್ ಸಿಬ್ಬಂದಿಗೆ ಸುದೀರ್ಘ ರಜೆಗೆ ಬ್ರೇಕ್ ಹಾಕಲಾಗಿದೆ. ಕಾರ್ಖಾನೆಯ ಸಿಬ್ಬಂದಿ ಮುಂದಿನ 2 ತಿಂಗಳವರೆಗೆ 2 ದಿನಗಳಿಗಿಂತ ಹೆಚ್ಚು ರಜೆ ತೆಗೆದುಕೊಳ್ಳುವಂತಿಲ್ಲ. ಯುದ್ಧದ ಸನ್ನಿವೇಶ ಇರೋ ಹಿನ್ನೆಲೆ ಹೆಚ್ಚು ಶಸ್ತ್ರಾಸ್ತ್ರ ತಯಾರಿಕೆ & ದೇಶದ ಭದ್ರತೆ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ವೇಳೆ ಭಾರತ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಡಿಆರ್‌ಡಿಓದಿಂದ ಏರ್‌ಶಿಪ್ ಯಶಸ್ವಿ ಪ್ರಯೋಗ ನಡೆಸಿದೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಳಿಕ ಚೆನ್ನೈನಲ್ಲಿ ಕಾಣಿಸಿಕೊಂಡಿದ್ದ ಉಗ್ರರು? ಕಾಶ್ಮೀರದಿಂದ ಹೇಗೆ ಬಂದ್ರು? ಎಲ್ಲಿಗೆ ಹೋದ್ರು?
ಪಹಲ್ಗಾಮ್ ಉಗ್ರ ದಾಳಿ ವೇಳೆ ಪ್ರವಾಸಿಗರು ಚೆಲ್ಲಾಪಿಲ್ಲಿ
ಇನ್ನು ಉಗ್ರ ದಾಳಿಯ ಮತ್ತೊಂದು ಭಯಾನಕ ವಿಡಿಯೋ ರಿಲೀಸ್ ಆಗಿದೆ. ಉಗ್ರರು ಫೈರಿಂಗ್ ಮಾಡುತ್ತಿದ್ದಂತೆ ಪ್ರವಾಸಿಗರು ಸ್ಥಳದಿಂದ ಓಡಿ ಹೋಗುತ್ತಿರುವ ವಿಡಿಯೋ ರಕ್ತಪಿಪಾಸುಗಳ ಪೈಶಾಚಿಕತೆಯನ್ನು ಬಿಚ್ಚಿಟ್ಟಿದೆ.
ಆಹಾರ, ಸೂರು ನೀಡಿದ್ದ ದೇಶದ್ರೋಹಿ ಏನಾದ?
ಮಹತ್ವದ ಬೆಳವಣಿಗೆಯಲ್ಲಿ ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರಿಗೆ ಆಹಾರ ಹಾಗೂ ಸೂರಿನ ವ್ಯವಸ್ಥೆ ಮಾಡಿದ್ದ ಪಾಪಿ ಜೀವ ತೆಗೆದುಕೊಂಡಿದ್ದಾನೆ. ಇಮ್ತಿಯಾಜ್ ಅಹ್ಮದ್ ಮ್ಯಾಗ್ರೆ ಎಂಬಾತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಗ್ರರ ಅಡಗುತಾಣವನ್ನು ತೋರಿಸಲು ಪೊಲೀಸ್ ಮತ್ತು ಸೇನೆಯನ್ನು ಮುನ್ನಡೆಸುತ್ತಿದ್ದಾಗ ಇಮ್ತಿಯಾಜ್ ಮ್ಯಾಗ್ರೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ವೆಶಾವ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಾಪಿಗಳು ಅರೆಸ್ಟ್
ಇನ್ನು ಕೇವಲ 5 ರಿಂದ 10 ಸಾವಿರ ರೂಪಾಯಿಗೆ ಪಾಕಿಸ್ತಾನದ ಐಎಸ್‌ಐಗೆ ಭಾರತೀಯ ಸೇನೆಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಇಬ್ಬರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಪಂಜಾಬ್‌ನ ಅಮೃತಸರದಲ್ಲಿರುವ ಸೇನಾ ಸೂಕ್ಷ್ಮ ವಲಯ ಮತ್ತು ವಾಯುನೆಲೆಯ ಸೂಕ್ಷ್ಮ ಮಾಹಿತಿಗಳು ಮತ್ತು ಫೋಟೋಗಳನ್ನು ಪಾಕಿಸ್ತಾನದ ಐಎಸ್‌ಐಗೆ ಸೋರಿಕೆ ಮಾಡುತ್ತಿದ್ದರು.
ಒಟ್ಟಾರೆ ಭಾರತಕ್ಕೆ ಮಗ್ಗುಲ ಮುಳ್ಳಾಗಿರುವ ಪಾಕಿಸ್ತಾನವನ್ನ ಒಂದೇ ಬಾರಿಗೆ ಹೊಡೆದುರುಳಿಸಬೇಕಿದೆ. ಇದಕ್ಕಾಗಿಯೇ ಭಾರತೀಯ ಸೈನಿಕರು ಗಡಿಯಲ್ಲಿ ಯುದ್ಧ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿಯೇ ಸ್ಥಳೀಯರಿಗೆ ಹತ್ತಾರು ಸೂಚನೆಗಳನ್ನು ನೀಡ್ತಿದ್ದಾರೆ. ಶೀಘ್ರದಲ್ಲೇ ಪಾಕಿಸ್ತಾನ ಎಂಬ ಕ್ರಿಮಿ ಭೂಪಟದಿಂದ ಕಾಣೆಯಾಗುವ ಅಥವಾ ಛಿದ್ರವಾಗುವ ಸಮಯ ದೂರವಿಲ್ಲ.
ಇದನ್ನೂ ಓದಿ: ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ.. ಭಾರತೀಯ ಸೇನೆಯಿಂದ ಮಿಲಿಟರಿ ಡ್ರಿಲ್; ಮಹತ್ವದ ಅನೌನ್ಸ್‌ಮೆಂಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ