/newsfirstlive-kannada/media/post_attachments/wp-content/uploads/2025/04/PAK.jpg)
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಇಡೀ ದೇಶವೇ ಖಂಡನೆ ವ್ಯಕ್ತಪಡಿಸುತ್ತಿದೆ. ಒಂದಲ್ಲಾ ಎರಡಲ್ಲ ಬರೋಬ್ಬರಿ 26 ಅಮಾಯಕರು ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಅದರಲ್ಲೂ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಇದನ್ನೂ ಓದಿ:NIAಗೆ ಸಖತ್ ಕ್ಲೂ ಕೊಟ್ಟ ಅದೊಂದು ವಿಡಿಯೋ, ಪಹಲ್ಗಾಮ್ ದಾಳಿ ತನಿಖೆಗೆ ಬಿಗ್ ಟ್ವಿಸ್ಟ್..!
ಯಾವಾಗ ಸೇನೆ ದಾಳಿ ಮಾಡುತ್ತೆ ಅಂತ ಗೊತ್ತಾಯ್ತೋ ಉಗ್ರರು ಪಹಲ್ಗಾಮ್ ಕಾಡು ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ. 4 ಬಾರಿ ಭದ್ರತಾ ಪಡೆಗಳಿಗೆ ಉಗ್ರರ ಸುಳಿವು ಪತ್ತೆಯಾಗಿದೆ. ಉಗ್ರರು, ಭದ್ರತಾ ಪಡೆ ನಡುವೆ 1 ಬಾರಿ ಗುಂಡಿನ ಚಕಮಕಿ ನಡೆದಿದೆ. ಕಳೆದ 5 ದಿನಗಳಲ್ಲಿ ಬೇರೆ ಬೇರೆ ಸ್ಥಳದಲ್ಲಿ 4 ಬಾರಿ ಉಗ್ರರು ಪತ್ತೆಯಾಗಿದ್ದಾರೆ. ಸ್ಥಳೀಯರ ನೆರವಿನಿಂದ ಭದ್ರತಾ ಪಡೆಗಳಿಗೆ ಉಗ್ರರ ಮಾಹಿತಿ ಲಭ್ಯವಾಗಿದೆ. ಹೀಗಾಗಿ ದಕ್ಷಿಣ ಕಾಶ್ಮೀರದ ಕಾಡು ಪ್ರದೇಶದಲ್ಲಿ ತಲೆಮರೆಸಿಕೊಂಡ ಉಗ್ರರನ್ನು ಯಾವಾಗ ಬೇಕಾದರೂ ಉಡೀಸ್ ಮಾಡಬಹುದು.
ಅಷ್ಟೇ ಅಲ್ಲದೇ ಪಾಕ್ ಮೇಲೆ ಯಾವುದೇ ಕ್ಷಣದಲ್ಲಾದ್ರೂ ಭಾರತದ ದಾಳಿ ಮಾಡಬಹುದು. ಹೀಗಾಗಿ ಪಾಕ್ ಸರ್ಕಾರ ಬಂಕರ್ಗಳಲ್ಲಿ ಉಗ್ರರಿಗೆ ರಕ್ಷಣೆ ನೀಡಲು ಮುಂದಾಗಿದೆ, ಆ ಮೂಲಕ ಇಡೀ ಜಗತ್ತಿಗೆ ಮಾರಕವಾಗಿರುವ ಉಗ್ರರ ಪರ ಪಾಕಿಸ್ತಾನ ರಕ್ಷಣೆಗೆ ನಿಂತಿದೆ. 42 ಲಾಂಚ್ ಪ್ಯಾಡ್ಗಳಲ್ಲಿ 110-130 ಉಗ್ರರಿದ್ದ ಬಗ್ಗೆ ಮಾಹಿತಿ ಭಾರತೀಯ ಗುಪ್ತಚರ ಇಲಾಖೆಗೆ ಸಿಕ್ಕಿತ್ತು. ಲಾಂಚ್ ಪ್ಯಾಡ್ನಲ್ಲಿನ ಉಗ್ರರಿಗೆ ಪಾಕ್ ಸೇನೆ ಇದೀಗ ರಕ್ಷಣೆ ನೀಡುತ್ತಿರೋದು ಭಾರತದ ಐಬಿ, ರಾಗೆ ಗೊತ್ತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ