ಸಿಂಧೂರಕ್ಕೆ ಉದುರಿಬಿದ್ದ ಪಾಕಿಸ್ತಾನ.. ಸಚಿವ ಜಮೀರ್​​ ಅಹ್ಮದ್​ರಿಂದ ಮಹತ್ವದ ಆದೇಶ

author-image
Veena Gangani
Updated On
VIDEO: JDS ಕಾರ್ಯಕರ್ತರ ಕ್ಷಮೆ ಕೋರಿದ ಸಚಿವ ಜಮೀರ್; ದಿಢೀರ್‌ U ಟರ್ನ್‌ ಯಾಕೆ?
Advertisment
  • ರಾಜ್ಯದ ವಕ್ಫ್​ಗೆ ಸೇರಿದ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಸೂಚನೆ
  • ವಕ್ಫ್, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಖಾನ್ ಸೂಚನೆ
  • ಸೈನಿಕರಿಗೆ ಶಕ್ತಿ ತುಂಬಲು ಶ್ರೇಯಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿ ಎಂದ ಸಚಿವ ಜಮೀರ್

ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಲಾಮ್​ನಲ್ಲಿ ಪಾಕಿಸ್ತಾನಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಪ್ರವಾಸಿಗರು ಬಲಿಯಾಗಿದ್ದರು. ಅದಕ್ಕಾಗಿ ಭಾರತೀಯ ಸೇನೆ ಪಾಕಿಸ್ತಾನ ಉಗ್ರರ ವಿರುದ್ಧ ಆಪರೇಶನ್ ಸಿಂಧೂ‌ರ್ ಕಾರ್ಯಾಚರಣೆ ನಡೆಸಿದ್ದು, ಭಾರತೀಯ ಸೇನೆ ಶ್ರೇಯಸ್ಸಿಗಾಗಿ ಮಸೀದಿಗಳಲ್ಲಿ ವಿಶೇಷ ಪ್ರಾಥನೆ ಸಲ್ಲಿಸುವಂತೆ ಸಚಿವ ಜಮೀರ್ ಅಹ್ಮದ್ ಖಾನ್ ಸೂಚಿಸಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನಕ್ಕೆ ಮೊತ್ತೊಂದು ದೊಡ್ಡ ಆಘಾತ; 12 ಸೈನಿಕರು ಛಿದ್ರ ಛಿದ್ರ..! VIDEO

ರಾಜ್ಯದ ವಕ್ಫ್​​ಗೆ ಸೇರಿದ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಸೈನಿಕರಿಗೆ ಶಕ್ತಿ ತುಂಬಲು, ಅವರ ಶ್ರೇಯಸ್ಸಿಗಾಗಿ ಪ್ರಾರ್ಥನೆ ಸಲ್ಲಿಸುವಂತೆ ಎಂದು ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಖಾನ್ ಸೂಚನೆ ನೀಡಿದ್ದಾರೆ.

publive-image

ಕಾಶ್ಮೀರ ಕಣಿವೆಯ ಪೆಹಲ್ನಾಮ್‌ನಲ್ಲಿ ಉಗ್ರಗಾಮಿಗಳು 26 ಭಾರತೀಯ ಪ್ರವಾಸಿಗರನ್ನು ಹತ್ಯೆಗೈದ ಹಿನ್ನಲೆಯಲ್ಲಿ ಭಾರತೀಯ ಸೈನ್ಯ ‘ಆಪರೇಷನ್ ಸಿಂಧೂರ’ ಎಂಬ ಹೆಸರಿನಲ್ಲಿ ನಡೆಸಿದ ದಾಳಿಯಲ್ಲಿ ಉಗ್ರರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಲಾಗಿದೆ. ಭಯೋತ್ಪಾದಕರನ್ನು ದಮನ ಮಾಡಿ ದೇಶದ ಶಾಂತಿಗೆ ಮುಂದಾಗುತ್ತಿರುವ ನಮ್ಮ ಹೆಮ್ಮೆಯ ದೇಶದ ಸೈನಿಕರಿಗೆ ಶಕ್ತಿ ತುಂಬಲು ಅವರ ಶ್ರೇಯಸ್ಸಿಗಾಗಿ ರಾಜ್ಯದ ಎಲ್ಲಾ ವಕ್ಸ್‌ಗೆ ಸೇರಿದ ಮಸೀದಿಗಳಲ್ಲಿ ಹಾಗೂ ಇತರೆ ಮಸೀದಿಗಳಲ್ಲಿ ಪ್ರಾರ್ಥಿಸಲು ಸೂಕ್ತ ಸೂಚನೆ ನೀಡಲು ಸೂಚಿಸಿದೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್​​ಗೆ ಬೆಂಗಳೂರು ಕನೆಕ್ಷನ್.. ಉಗ್ರರ ನೆಲೆ ಧ್ವಂಸ ಮಾಡಿದ್ದು ಕರ್ನಾಟಕದ ಡ್ರೋಣ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment