/newsfirstlive-kannada/media/post_attachments/wp-content/uploads/2025/05/India-strikes-1.jpg)
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್‌ನಲ್ಲಿರುವ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಆರಂಭಿಸಿದೆ. ಒಟ್ಟು ಉಗ್ರರ 9 ನೆಲೆಗಳ ಮೇಲೆ ಅಟ್ಯಾಕ್ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ: BIG BREAKING: ಪಾಕ್ ವಿರುದ್ಧ ‘ಆಪರೇಷನ್ ಸಿಂಧೂರ್’.. ಭಾರತೀಯ ಸೇನೆಯಿಂದ ಏರ್ಸ್ಟ್ರೈಕ್..!
ಎಲ್ಲೆಲ್ಲಿ ದಾಳಿ..?
ಒಟ್ಟು 9 ಕಡೆಗಳಲ್ಲಿ ಭಾರತೀಯ ಸೇನೆ ಏರ್ಸ್ಟ್ರೈಕ್ ಮಾಡಿದೆ. ಮುರೀದ್ಕೆ, ಮುಜಾಫರ್ಬಾದ್, ಬಹಾವಲ್ಪುರ್
ಕೋಟ್ಲಿ, ಚಾಕ್ಅಮ್ರು, ಗುಲ್ಪುರ್, ಭಿಂಬರ್ ಮೇಲೆ ದಾಳಿ ಮಾಡಲಾಗಿದೆ. ಭಾರತದ ದಾಳಿ ಹಿನ್ನೆಲೆಯಲ್ಲಿ ಲಾಹೋರ್, ಸಿಯಾಲ್ಕೋಟ್ ಏರ್ಪೋರ್ಟ್ ಬಂದ್ ಆಗಿದೆ.
ರಕ್ಷಣಾ ಸಚಿವಾಲಯ ನೀಡಿದ ಮಾಹಿತಿ ಹೀಗಿದೆ..
ನಮ್ಮ ಕ್ರಮವು ಕೇಂದ್ರೀಕೃತವಾಗಿತ್ತು. ಉಗ್ರರನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡಿಲ್ಲ. ಸಾರ್ವಜನಿಕ ಸ್ಥಳಗಳ ಮೇಲೆ ಅಟ್ಯಾಕ್ ಮಾಡಿಲ್ಲ. ಟಾರ್ಗೆಟ್ ಸೆಲೆಕ್ಟ್ ಮಾಡಿದ್ದು ಮತ್ತು ಅವುಗಳನ್ನು ನಾಶಪಡಿಸಿದ ರೀತಿಯಲ್ಲಿ ಭಾರತವು ಸಾಕಷ್ಟು ಸಂಯಮವನ್ನು ತೋರಿಸಿದೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸಾವನ್ನಪ್ಪಿದ ನಂತರ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ದಾಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಸಚಿವಾಲಯ ಹೇಳಿದೆ. ಆದಷ್ಟು ಬೇಗ ಆಪರೇಷನ್ ಸಿಂಧೂರ್ ಬಗ್ಗೆ ವಿವರವಾದ ಮಾಹಿತಿ ನೀಡುತ್ತೇವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದ್ದಾರೆ.
ಇದನ್ನೂ ಓದಿ: BIG BREAKING: ಪಾಕ್ ವಿರುದ್ಧ ‘ಆಪರೇಷನ್ ಸಿಂಧೂರ್’.. ಭಾರತೀಯ ಸೇನೆಯಿಂದ ಏರ್ಸ್ಟ್ರೈಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ